FB IMG 1495555692902

     ಮಾಲಿನಿ ಹೆಗಡೆ
       ಬೆಂಗಳೂರು

 

ನಾನು ಕಂಡಂತೆ ಅಥವಾ ನಾನು observe ಮಾಡಿದಂತೆ, ಈ ಕಮ್ಯುನಿಸ್ಟ್ ಅನ್ನೋದು ಪಕ್ಷ ಅನ್ನುವುದಕ್ಕಿಂತ ಒಂದು ಮಾನಸಿಕ ಅಥವಾ ಮನಸ್ಸಿನ ಸ್ಥಿತಿ ಅನ್ನೋದು ಹೆಚ್ಚು ಸೂಕ್ತ ಅನಿಸುತ್ತೆ. ಯಾಕೆಂದರೆ, ಹಿಂದುತ್ವ ವಿರೋಧಿಸುವುದು, ದೇಶದ ವಿರುದ್ಧ ಘೋಷಣೆ ಕೂಗುವುದು, ಗೋ ಹತ್ಯೆಗೆ ಸಪೋರ್ಟ್ ಮಾಡುವುದು, ಬೇರೆಯವರು ಯಾರು ಏನೇ ಹೇಳಿದರೂ, ಅದನ್ನು ವಿರೋಧಿಸುವುದು, ಕಚೇರಿಗಳಲ್ಲಿ Management ವಿರುದ್ಧ ಮಾತಾಡುವುದು, ಅಥವಾ ಕಂಪನಿ ಯಲ್ಲಿ ಯಾರೇ RSS followers ಇದ್ದರೂ, ಅವರನ್ನು ವೈರಿಯಂತೆ ನೋಡೋದು, ಇವೆ ಮುಂತಾದವು ಈ “ಕಮ್ಯುನಿಸ್ಟ್” ಮನುಷ್ಯನ ಗುಣಗಳು.
ಹೀಗಾಗಿ ನನಗೆ ಅನಿಸಿದ್ದು, Communist ಕೇವಲ ಒಂದು ಪಕ್ಸ ಅಲ್ಲ, ಮನುಷ್ಯನ ಮಾನಸಿಕ ಸ್ಥಿತಿಯು ಕೂಡ. ಒಂದು ತರಹ ಮಾನಸಿಕ ಅಸ್ಥಿರತೆ, ಯಾವುದರಲ್ಲೂ ಡಿಸಿಷನ್ ತೆಗೆದು ಕೊಳ್ಳಲು ಆಗದೆ ಒದ್ದಾಡುವುದು, ಹಿಂದೂ ಪರ ಇರುವವರನ್ನು ವಿರೋಧಿಸಲು ತಾನು ಹುಟ್ಟಿದ್ದೇನೆ ಅನ್ನುವಂತೆ ವರ್ತನೆ ಮಾಡೋದು, ಕೂಡ ಇವರ ಚಿನ್ನದ ಗುಣಗಳಲ್ಲಿ ಒಂದು.
ನಾವೆಲ್ಲ ಗೋವನ್ನು ರಕ್ಷಿಸಲು ಹೋರಾಟ ಮಾಡಿದರೆ, ನಮ್ಮ ಮುಂದೇನೆ ನಾನು ದಿನಾಲೂ ಬೀಫ್ ತಿನ್ನುತ್ತೇನೆ ಅನ್ನೋದು, ಅದು ಯಾವ ಪೌರುಷದ ಪರಮಾವಧಿ ಅಂತ ನನಗೆ ಗೊತ್ತಿಲ್ಲ. ಗೋ ಮಾಂಸ ಶರೀರಕ್ಕೆ ಯಾವ ರೀತಿಯಲ್ಲೂ ಒಳ್ಳೇದಲ್ಲ. ಅದು ವೈಜ್ಞಾನಿಕವಾಗಿಯೂ ಕೂಡ ದ್ರಢ ಪಟ್ಟಿದೆ. ಅದು ಇಲ್ಲದೆಯೂ ಕೂಡ ಬದುಕಬಹುದು.
ಪೂಜಿಸುವ ಗೋವನ್ನು ನಾವು ತಿಂದೆ ತಿನ್ನುತ್ತೆವೆ ಅನ್ನೋದು ಒಂದು ಮಾನಸಿಕ ವೈಪರೀತ್ಯವೇ ಹೊರತು, ಖಂಡಿತಾ ಅದಕ್ಕೆ ಪಕ್ಷ ಕಾರಣ ಅಲ್ಲ. ಎಷ್ಟೋ ವರ್ಷ ಬದುಕಿ ಬಾಳ ಬೇಕಾದ ಜೀವ ಈ ಗೋ ಮಾಂಸ ಭಕ್ಷಣೆ ಇಂದ, ಬಹು ಬೇಗ ಸಾವನ್ನು ತಂದುಕೊಳ್ಳುತ್ತೆ.
ಅದಕ್ಕೆ ಹೇಳಿದ್ದು, ವೈರತ್ವ, ದ್ವೇಷ, ಕಾದಾಟ, ಹೋರಾಟ, ಇವನ್ನೇ ತಮ್ಮ ಉಸಿರಲ್ಲಿ ತುಂಬಿಕೊಂಡಿರುವ ಒಂದು ಮಾನಸಿಕ ಸ್ಥಿತಿಯೇ “ಈ ಕಮ್ಯುನಿಸ್ಟ್ ನೇಚರ್,” ಹೊರತು ಇಂದೊಂದು ಪಕ್ಷ ಅಂತ ನನಗೆ ಅನಿಸುತ್ತಾ ಇಲ್ಲ.

RELATED ARTICLES  ಮಕ್ಕಳ ಜೀವನದಲ್ಲಿ ಸ್ನೇಹ ಪ್ರೀತಿ

3

May ದಲ್ಲಿ ಕೇರಳದ ಕಣ್ಣುರಲ್ಲಿ ದೊಡ್ಡ ಪ್ರಮಾಣದ ಗೋ ಹತ್ಯೆ ನಡೆಯಿತು. ಮನಸ್ಸಿಗೆ ತುಂಬಾ ನೋವು ಕೊಟ್ಟಿದ್ದು ಅಕ್ಷರಶಹ ನಿಜ. ಆ ವಿಷಯವನ್ನೇ ನನ್ನ colleague ಒಬ್ಬನ ಹತ್ತಿರ discuss ಮಾಡಿದೆ. (ಅವನು ಅದೇ ಊರಿನವನು). ಅದಕ್ಕೆ ಅವನ ಉತ್ತರ ಕೇಳಿ ” ಮೇಡಂ ನಿಮ್ಮ ಗೋವನ್ನು ಕೊಂದವರು ನಮ್ಮ ಕಮ್ಯುನಿಸ್ಟ್ ಅಲ್ಲ, ಯೂಥ್ ಕಾಂಗ್ರೆಸ್ ನವರು ಅಂತ” ಹಾಗಾದರೆ ಇಲ್ಲಿ ಪಕ್ಷ ಅಲ್ಲ, ಮುಖ್ಯ ಆಗಿದ್ದು, ವೈರತ್ವ , ದ್ವೇಷ ತುಂಬಿದ ಮಾನಸಿಕ ಸ್ಥಿತಿ ಅಷ್ಟೇ.
ಕರ್ನಾಟಕದಲ್ಲೂ, townhall ಮುಂದೆ ಗೋ ಮಾಂಸ ತಿಂದು ಪ್ರತಿಭಟನೆ ಮಾಡಿದವರ ಲಿಸ್ಟ್ ಅಲ್ಲಿ, ನೀವು ನೋಡಿದರೆ, ಅಲ್ಲಿ ಬ್ರಾಹ್ಮಣರು, ಲಿಂಗಾಯಿತ ಸಮಾಜ ಎಲ್ಲರೂ ಇದ್ದಾರೆ. ಇಲ್ಲಿ ಕಮ್ಯುನಿಸ್ಟ್ ಅನ್ನುವ ಪಕ್ಷವೇ ಇಲ್ಲ.

RELATED ARTICLES  ಗುರಿ ಮತ್ತು ನೀರು ಅಕ್ಕ ತಂಗಿಯರು

aaa
ಹಾಗಾದರೆ, ಇಲ್ಲಿ ಘಣನೆಗೆ ಬಂದಿದ್ದು, ಬಲಪಂಥೀಯರು ಅನ್ನೋ ಜನರ ವಿರುದ್ಧ ಹೋರಾಟ ಮಾಡಬೇಕು ಅನ್ನುವ ಮನ:ಸ್ಥಿತಿ ಮಾತ್ರ. ಗೋವನ್ನು ಕಡಿದು, ಅದನ್ನು ತಿಂದು ಪ್ರತಿಭಟನೆ ಮಾಡಿದರೆ, ಕೆಲವು ಗುಪಿನ ಜನರಿಗೆ ಮಾನಸಿಕ ಯಾತನೆ, ನೋವು ಆಗುತ್ತೆ, ಅಷ್ಟೇ ಅವರಿಗೆ ಬೇಕಾದಿದ್ದೆ ವಿನಃ, ಯಾವುದೇ ಪಕ್ಷದ ಹೆಸರಲ್ಲ. ಹಿಂಸೆಯಲ್ಲೂ ಖುಷಿ ಪಡುವ ಕೆಟ್ಟ ಮನಸ್ಸೇ ವಿನಃ, ಬೇರೆ ಯಾವುದೇ ಕಾರಣ ಅಲ್ಲ.
ಈ ಕಮ್ಯುನಿಸ್ಟ್ ಮನಃ ಸ್ಥಿತಿ ಯ ಜನರು ಎಲ್ಲ ಕಡೆಗೂ ಇದ್ದಾರೆ, ಎಲ್ಲ ಪಕ್ಷದಲ್ಲೂ ಇದ್ದಾರೆ, ಎಲ್ಲಾ ಧರ್ಮದಲ್ಲೂ ಇದ್ದಾರೆ. ನಗರ, ಹಳ್ಳಿ ಅನ್ನದೆ ನಮ್ಮ ಸುತ್ತ ಮುತ್ತಲೂ ಇದ್ದಾರೆ. ಆದ್ದರಿಂದ ಜನಜಾಗ್ರತಿ ಆಗಬೇಕಾದದ್ದು ಮನಃ ಪರಿವರ್ತನೆಯ ನಿಟ್ಟಿನಲ್ಲೇ ಹೊರತು, ಪಕ್ಷ ಸಂಘರ್ಷದಲ್ಲಿ ಅಲ್ಲ.
(ಇದು ಕೇವಲ ನನ್ನ ಅನಿಸಿಕೆ )