ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು 2022-23 ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ. 

ತೆರಿಗೆ ಇಳಿಕೆ ಮಾಡಿರುವುದರ ಪರಿಣಾಮ ಒಂದಷ್ಟು ಉತ್ಪನ್ನ, ಪದಾರ್ಥಗಳ ಬೆಲೆಯೂ ಇಳಿಕೆಯಾಗಿದೆ. 

ಬೆಲೆ ಅಗ್ಗವಾಗಿರುವ ವಸ್ತು/ ಪದಾರ್ಥಗಳ ವಿವರ ಹೀಗಿದೆ. 

  1. ಮೊಬೈಲ್ 
  2. ಚಾರ್ಜರ್ 
  3. ಚಿನ್ನ, ವಜ್ರಾಭರಣ
  4. ಎಲೆಕ್ಟ್ರಾನಿಕ್ಸ್ ಉಪಕರಣಗಳು 
  5. ಬಟ್ಟೆ. ಚಪ್ಪಲಿ ಚರ್ಮದ ಉತ್ಪನ್ನಗಳು 
  6. ವಿದೇಶಿ ಉತ್ಪನ್ನಗಳ ಬೆಲೆ ಇಳಿಕೆ 

ಉಳಿದಂತೆ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಈ ಹಿಂದೆ ಇದ್ದ ತೆರಿಗೆ ಪದ್ಧತಿಯನ್ನೇ ಮುಂದುವರೆಸಲಾಗಿದೆ. 

ದೇಶದಲ್ಲಿ ಹೊಸ ಐಟಿ ರಿಟರ್ನ್ಸ್ ಪರಿಚಯ

ದೇಶದಲ್ಲಿ ಇನ್ನು ಮುಂದೆ ಆದಾಯ ತೆರಿಗೆ ಸಲ್ಲಿಕೆಗೆ ಹೊಸ ನೀತಿ ಜಾರಿಗೆ ತರಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದು, ಆದಾಯ ತೆರಿಗೆ ಸಲ್ಲಿಕೆ ವೇಳೆ ತಪ್ಪು ಸರಿಪಡಿಸಲು 2 ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಇಂದು ಕೇಂದ್ರ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು, ದೇಶದಲ್ಲಿ ಹೊಸ ಐಟಿ ರಿಟರ್ನ್ಸ್ ಪರಿಚಯಿಸಲಾಗುತ್ತದೆ ಎಂದು ಹೇಳಿದರು. ಹಾಲಿ ವರ್ಷ ಆದಾಯ ತೆರಿಗೆಯಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಆದಾಯ ತೆರಿಗೆ ಸಲ್ಲಿಸುವಾಗ ಆದಾಯವನ್ನು ಘೋಷಿಸಿ, ಸ್ವಯಂಪ್ರೇರಿತ ದೂರು ದಾಖಲಿಸಲು ಅವಕಾಶ ನೀಡಲಾಗುತ್ತದೆ.  ದೇಶದಲ್ಲಿ ಹೊಸ ರಿಟರ್ನ್ಸ್ ಪರಿಚಯ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ತೆರಿಗೆ ಪಾವತಿ, ರಿಟರ್ನ್ಸ್ ಸಲ್ಲಿಕೆಗೆ ಹೊಸ ನೀತಿ ಜಾರಿಮಾಡಲಾಗುವುದು ಎಂದು ಹೇಳಿದರು

ಅಂತೆಯೇ ತೆರಿಗೆ ಸಲ್ಲಿಕೆ ವೇಳೆ ಸಮಸ್ಯೆ ಕಂಡು ಬಂದರೆ  2 ವರ್ಷದೊಳಗೆ ತಪ್ಪು ಸರಿಪಡಿಸುವುದಕ್ಕೆ ಅವಕಾಶ ನೀಡಲಾಗಿದೆ. ವಿಶ್ವಾಸಾರ್ಹ ತೆರಿಗೆ, ವ್ಯಾಜ್ಯವನ್ನು ಕಡಿಮೆ ಮಾಡಿ, ದೋಷಗಳನ್ನು ಸರಿಪಡಿಸಿ, ವೇಗವರ್ಧಿತ ವಾಗಿ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಅಂತ್ಯದ ನವೀಕರಿಸಿದ ರಿಟರ್ನ್ ಅನ್ನು ಫೈಲ್ ಮಾಡಲು ಅವಕಾಶ ನೀಡಲಾಗಿದೆ. 

RELATED ARTICLES  ಭಾರೀ ಇಳಿಕೆ ಕಂಡ ಚಿನ್ನದ ದರ

ಪರ್ಯಾಯ ತೆರಿಗೆಯನ್ನು ಕಡಿಮೆ ಮಾಡಲಾಗಿದ್ದು. ಸಹಕಾರ ಸಂಘಗಳು ನೀಡುತ್ತಿದ್ದ 18 ಮತ್ತು 1.5 % ತೆರಿಗೆ ಹೆಚ್ಚುವರಿ ಶುಲ್ಕಕ್ಕೆ 15 % ಗೆ. ಒಂದು ಕೋಟಿಯಿಂದ 10 ಕೋಟಿ ವ್ಯವಹಾರ ಇರುವ ಸಹಕಾರ ಸಂಘಗಳ ತೆರಿಗೆ 12 ರಿಂದ 7 % ಗೆ ಇಳಿಕೆ . ಇದರಿಂದ ಗ್ರಾಮೀಣ ಮತ್ತು ಕೃಷಿ ಸಮುದಾಯಕ್ಕೆ ಲಾಭವಾಗಲಿದೆ.  ಮುಂದಿನ ವರ್ಷದ ವರೆಗೆ ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದ್ದು, 2023 ಮಾರ್ಚ್ ವರೆಗೆ ತೆರಿಗೆ ಕಟ್ಟಬೇಕಾಗಿಲ್ಲ 

ಪಿಎಂ ಆವಾಸ್ ಯೋಜನೆಗೆ ರೂ.48,000 ಕೋಟಿ

ಬಜೆಟ್ ಭಾಷಣದಲ್ಲಿ ಪಿಎಂ ಆವಾಸ್ ಯೋಜನೆಗೆ ರೂ.48,000 ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ. ಎಲ್ಲರಿಗೂ ಸೂರು ಎಂಬ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಗೆ ಆದ್ಯತೆ ನೀಡಲಾಗಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 48,000 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.  2022-23ರಲ್ಲಿ 80 ಲಕ್ಷ ಮನೆಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು. 

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 60,000 ಮನೆಗಳನ್ನು ಹಂಚಲು ಜನರನ್ನು ಗುರುತಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಘೋಷಣೆ ತಿಳಿಸಿದರು. 

2015ರಲ್ಲಿ ಕೇಂದ್ರ ಸರ್ಕಾರ ಎಲ್ಲರಿಗೂ ವಸತಿ ಘೋಷಣೆಯಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಆರಂಭಿಸಿತು. ಏರಿಕೆಯಾಗುತ್ತಿರುವ ರಿಯಲ್ ಎಸ್ಟೇಟ್ ದರಗಳ ನಡುವೆಯೂ ಎಲ್ಲರೂ ಮನೆ ಖರೀದಿ ಮಾಡುವಂತಾಗಲು ಭಾರತ ಸರ್ಕಾರ ಈ ಯೋಜನೆ ಆರಂಭಸಿತು. 2022ರ ಮಾರ್ಚ್ 31ರೊಳಗೆ ಎಲ್ಲರಿಗೂ ವಸತಿ ಒದಗಿಸುವುದು ಯೋಜನೆ ಉದ್ದೇಶ ವಾಗಿತ್ತು.

RELATED ARTICLES  ಭಾರತದಲ್ಲಿ 37 ಲಕ್ಷಕ್ಕೂ ಅಧಿಕ ಖಾತೆ ಬ್ಯಾನ್ ಮಾಡಿದ ವಾಟ್ಸ್​ಆ್ಯಪ್..!

ಯಾವುದು ಏರಿಕೆ?
1) ಕ್ರಿಪ್ಟೂ ಕರೆನ್ಸಿ ಮೇಲೆ ತೆರಿಗೆ ಘೋಷಣೆ,ಶೇ.30 ರಷ್ಟು ತೆರಿಗೆ ಘೋಷಣೆ.
2)ದೀರ್ಘಾವಧಿ ಹೂಡಿಕೆ ಮೇಲೆ ಶೇ.15 ತೆರಿಗೆ.
3)ಡಿಜಿಟಲ್ ಆಸ್ತಿ ಬದಲಾವಣೆ ಮೇಲೆ ಶೇ.30 ತೆರಿಗೆ.
4)ಕೊಡೆಗಳ ಮೇಲೆ ಶೇ .20 ತೆರಿಗೆ.
5)ಅನ್ ಬ್ಲೈಂಡೆಡ್ ಕಚ್ಚಾ ತೈಲದ ಮೇಲೆ ₹2 ತೆರಿಗೆ ಹೆಚ್ಚಳ.
6)ದೀರ್ಘಾವಧಿ ಬಂಡವಾಳದ ಮೇಲೆ ಶೇ.15 ತೆರಿಗೆ .

ಕೇಂದ್ರ ,ರಾಜ್ಯ ನೌಕರರಿಗೆ ತೆರಿಗೆ ಕಡಿತ.

ಕೇಂದ್ರ, ರಾಜ್ಯ ಸರ್ಕಾರಿ ನೌಕರರ ತೆರಿಗೆ ಕಡಿತ (TDS) ಮಿತಿಯನ್ನು ಹೆಚ್ಚಳ ಮಾಡಲಾಗಿದೆ.ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು ಶೇ.10 ರಿಂದ ಶೇ.14ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ನೌಕರರಿಗೆ ತೆರಿಗೆ ರಿಲೀಫ್‌ ಸಿಕ್ಕಿದೆ.

5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆ –

ದೇಶದಲ್ಲಿ ಶೀಘದಲ್ಲೇ 5ಜಿ ಸಂಪರ್ಕ ಸಾಧ್ಯವಾಗುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಘೋಷಿಸಿದ್ದಾರೆ. 5ಜಿ ಸಂಪರ್ಕ ಸೇವೆಗಳಿಗಾಗಿ ಇದೇ ವರ್ಷ ತರಂಗಾಂತರಗಳ ಹರಾಜು ಪ್ರಕ್ರಿಯೆ ನಡೆಸುವುದಾಗಿ ಉಲ್ಲೇಖಿಸಿದರು.

ಈ ಮೂಲಕ ದೇಶದಲ್ಲಿ 2023ಕ್ಕೆ ಖಾಸಗಿ ದೂರಸಂಪರ್ಕ ಸೇವಾಧಾರ ಕಂಪನಿಗಳ ಮೂಲಕ ಗ್ರಾಹಕರಿಗೆ 5ಜಿ ಸಂಪರ್ಕ ಸೇವೆ ಪೂರೈಕೆ ಸಾಧ್ಯವಾಗಲಿದೆ. ತಯಾರಿಕೆ ಆಧಾರಿತ ಉತ್ತೇಜನ (ಪಿಐಎಲ್‌) ಯೋಜನೆಯ ಭಾಗವಾಗಿ ವಿನ್ಯಾಸ ಆಧಾರಿತ ತಯಾರಿಕೆಯಿಂದ 5ಜಿಗಾಗಿ ಸಮರ್ಥ ವ್ಯವಸ್ಥೆ ರೂಪಿಸುವುದು ಸಾಧ್ಯವಾಗಲಿದೆ ಎಂದರು.