ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಗೋಳಿಕುಂಬ್ರಿ, ಉತ್ತರಕೊಪ್ಪ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ, ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಅಳ್ವೇಕೋಡಿ, ಶಿರಾಲಿ,ಭಟ್ಕಳದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅಂಗವಾಗಿ ದಿನಾಂಕ: 23.09.2017ರ ಶನಿವಾರ, ಸಂಜೆ 5.30ಕ್ಕೆ “ಸುಧನ್ವಾರ್ಜುನ ಕಾಳಗ” ಎಂಬ ಪೌರಾಣಿಕ ಯಕ್ಷಗಾನ ನಡೆಯಲಿದೆ. ಆಖ್ಯಾನದಲ್ಲಿ ಕಲಾವಿದರಾಗಿ ಹಿಮ್ಮೇಳದಲ್ಲಿ ಭಾಗವತರು – ಕೆ.ಪಿ. ಹೆಗಡೆ ಗೋಳಗೋಡು, ಮೃದಂಗ – ಅವದಾನಿ ಅಂತ್ರವಳ್ಳಿ ,ಚಂಡೆ – ಗಜಾನನ ಹೆಗಡೆ ಮೂರೂರು ಮುಮ್ಮೇಳ – ನಾಗರಾಜ ಕೆ ಮಧ್ಯಸ್ಥ, ನಾರಾಯಣ ಮಧ್ಯಸ್ಥ , ಮಂಜುನಾಥ ಹೆಗಡೆ, ವಾಸು ಮರಾಠಿ, ವಿನಾಯಕ ಮಧ್ಯಸ್ಥ, ಶ್ರೀಕೃಷ್ಣ ಮಧ್ಯಸ್ಥ,
ಅತಿಥಿ ಕಲಾವಿದರಾಗಿ – ಸುಬ್ರಹ್ಮಣ್ಯ ಹೆಗಡೆ ಮೂರೂರು, ಈಶ್ವರ ನಾಯ್ಕ ಮಂಕಿ, ರಾಜೇಶ್ ಶೆಟ್ಟಿ
ದೇವಿಕಾನು ಮುಂತಾದವರು ಭಾಗವಹಿಸಲಿದ್ದಾರೆ.

RELATED ARTICLES  ಪುನಃ ಪ್ರತಿಷ್ಠಾಬಂಧ ಬ್ರಹ್ಮ ಕಲಶೋತ್ಸವ

ಕಾರ್ಯಕ್ರಮಕ್ಕೆ ಸರ್ವರೂ ಬಂದು ಕಾರ್ಯಕ್ರಮ ಚಂದಗಾಣಿಸುವಂತೆ ಅಧ್ಯಕ್ಷರು ಮತ್ತು ಸರ್ವಸದಸ್ಯರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಳ್ವೇಕೋಡಿ ಶಿರಾಲಿ ಇವರು ವಿನಂತಿಸಿದ್ದಾರೆ.

RELATED ARTICLES  ಕೈ ಸೋತ ಯಕ್ಷಗಾನ ಕಲಾವಿದನಿಗೆ ನೆರವು