ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇದರ ಆಶ್ರಯದಲ್ಲಿ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ಸಭಾಂಗಣದಲ್ಲಿ ಪೆರಡಂಜಿ ಗೋಪಾಲಕೃಷ್ಣ ಭಟ್ಟ ವಿರಚಿತ ನೂತನ ಯಕ್ಷಗಾನ ಕೃತಿ ” ಮುಳಿಯಾರು ಕ್ಷೇತ್ರ ಮಹಾತ್ಮೆ ” ಲೋಕಾರ್ಪಣಾ ಸಮಾರಂಭವು ಜರಗಿತು.
ಕೃತಿಯನ್ನು ಕ್ಷೇತ್ರ ಮೆನೇಜರ್ ಶ್ರೀ ಸೀತಾರಾಮ ಬಳ್ಳುಳ್ಳಾಯ ಅವರು ಬಿಡುಗಡೆಗೊಳಿಸಿ ಪ್ರಥಮ ಪ್ರತಿಯನ್ನು ಹಿರಿಯ ಯಕ್ಷಗಾನ ಕಲಾವಿದರಾದ ನಾರಾಯಣ ಮಣಿಯಾಣಿ ಬೆಳ್ಳಿಗೆ ಇವರಿಗೆ ಹಸ್ತಾಂತರಿಸಿದರು. ಬಳಿಕ ಶುಭಾಶಂಸನೆಗೆಯ್ಯುತ್ತಾ ” ನನ್ನ ಬಹುಕಾಲದ ಮನದಭಿಲಾಷೆಯು ಈ ಮೂಲಕ ಸಾಕ್ಷಾತ್ಕಾರಗೊಂಡಿದೆ. ಯಕ್ಷಯತೂಣೀರ ಸಂಪ್ರತಿಷ್ಠಾನವು ನಿರಂತರವಾಗಿ ಮಾಡುತ್ತಾ ಇರುವ ಯಾವತ್ತೂ ಕಾರ್ಯಗಳಿಗೆ ನನ್ನ ಪೂರ್ಣ ಸಹಕಾರಗಳಿವೆ ” ಎನ್ನುತ್ತಾ ಶುಭ ಹಾರೈಸಿದರು.
ಕೃತಿಯನ್ನು ರಚಿಸಿದ ಶ್ರೀ ಪೆರಡಂಜಿ ಗೋಪಾಲಕೃಷ್ಣ ಭಟ್ಟ ಅವರನ್ನು ಪ್ರತಿಷ್ಠಾನದ ವತಿಯಿಂದ ಶಾಲು ಹೊದೆಸಿ ಗೌರವಿಸಲಾಯಿತು.
ಬಳಿಕ ಪ್ರತಿಷ್ಠಾನದ ಸದಸ್ಯರಿಂದ ಪಂಚವಟಿ ಪ್ರಸಂಗದ ತಾಳಮದ್ದಳೆ ಅಭ್ಯಾಸ ಕೂಟ ಜರಗಿತು. ಸಮಾರಂಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಮಹಾಭಲೇಶ್ವರ ಭಟ್ ಬಾಗಮಂಡಲ ಉಪಸ್ಥಿತರಿದ್ದರು. ಕೃತಿಯ ಕುರಿತು ಶ್ರೀ ಸುಬ್ರಹ್ಮಣ್ಯ ಅಡ್ಕ ಮಾಹಿತಿಗಳನ್ನಿತ್ತರು. ಈಶ್ವರ ಭಟ್ ಬಳ್ಳಮೂಲೆ ಅಧ್ಯಕ್ಷಸ್ಥಾನವಹಿಸಿದರು. ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಸ್ವಾಗತಿಸಿದರು. ಡಾ // ಶಿವಕುಮಾರ್ ಅಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು. ಅನುಪಮಾ ರಾಘವೇಂದ್ರ ಉಡುಪುಮೂಲೆ ಧನ್ಯವಾದವಿತ್ತರು.
ಶಿವಶಂಕರ ಭಟ್ ತಲ್ಪಣಾಜೆ, ಈಶ್ವರ ಮಲ್ಲ , ರಾಘವೇಂದ್ರ ಉಡುಪುಮೂಲೆ, ರಾಜೇಶ್ವರಿ ಈಶ್ವರ ಭಟ್, ಹರಿಕೃಷ್ಣ ಪೆರಡಂಜಿ, ಗೋವಿಂದಬಳ್ಳಮೂಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೃಷ್ಣ ಭಟ್ ಅಡ್ಕ ಕಾರ್ಯಕ್ರಮ ಸಂಯೋಜನೆ ಮಾಡಿದರು.