ಹೊನ್ನಾವರ: ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ ಎಂ ಅವರು ಗುರುವಾರ ಹೊನ್ನಾವರ ತಾಲೂಕಿನ ವಿವಿಧ ಪ್ರವಾಸೋಧ್ಯಮ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಹಾಗೂ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು.

ಕಾಸರಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಇಕೋ ಬೀಚೆಗೆ ಭೇಟಿ ನೀಡಿ ಅಲ್ಲಿ ತುರ್ತಾಗಿ ಆಗಬೇಕಾದ ಪಾರ್ಕಿಂಗ್ ವ್ಯವಸ್ಥೆಯ ಕುರಿತು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಮಾರ್ಗದರ್ಶನ ನೀಡಿದರು. ಪ್ರಿಯಾಂಗ ಎಂ ಅವರ ಹೊನ್ನಾವರ ತಾಲೂಕಿನ ಭೇಟಿಯು ನರೇಗಾ, ಎಸ್.ಬಿ.ಎಮ್, ವಸತಿ, ಗ್ರಂಥಾಲಯ, ಜೆ.ಜೆ.ಎಮ್, ಅಮೃತಗ್ರಾಮದ ಅನುಷ್ಠಾನದ ಜೊತೆಗೆ ತಾಲೂಕಿನಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಚಿಂತನೆ ಒಳಗೊಂಡಿತ್ತು.

RELATED ARTICLES  ಆರಾಧನಾ ಫ್ಯಾಷನ್ ಹೌಸ್ ವಿಸ್ತೃತ ಮಳಿಗೆ ಶುಭಾರಂಭ.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕ, ಸಹಾಯಕ ನಿರ್ದೇಶಕ ಕೃಷ್ಣಾನಂದ ಕೆ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ, ಪಿ.ಎಂ.ಜಿ.ಎಸ್.ವೈ ಎಈ ರಾಜೀವ ನಾಯ್ಕ, ಪಿ.ಆರ್.ಇ.ಡಿ ಎಇ ಪ್ರದೀಪ ಆಚಾರಿ, ಹೆರಂಗಡಿ ಗ್ರಾಮ ಪಂಚಾಯತ ಅಧ್ಯಕ್ಷ ಪ್ರಮೋದ ನಾಯ್ಕ, ಪಂಚಾಯತ ಅಭಿವೃದ್ಧಿ ಅಧಿಕಾರಿ ಉದಯ ಬಾಂದೇಕರ, ಚನ್ನಬಸಪ್ಪ ಮಹಾಜನಶೆಟ್ಟಿ ಮುಂತಾದ ಅಧಿಕಾರಿಗಳು ಹಾಜರಿದ್ದರು.

RELATED ARTICLES  ಭಾರತದಲ್ಲಿ 5G ಜಮಾನ ಪ್ರಾರಂಭ : ನಿಮ್ಮ ಮೊಬೈಲ್ ನಲ್ಲಿ 5G ಪಡೆಯಬಹುದೇ? ವಿವರ ಓದಿ.