ನಿನ್ನ  ದಾರಿಯ ಬೆಳಗುವ ದೀವಟಿಗೆಯಲ್ಲ

ಮುಡಿಯೇರಿ ಚೆಲ್ಲುವ ರತ್ನಪ್ರಭೆಯಲ್ಲ

ಹಿತವೆನಿಸುವಂತೆ ಪೂಸಿದ ಸುಗಂಧವಲ್ಲ

ಕೊರಳನಪ್ಪಿದ ಹಾರದ ಚೆಲುವ ಹೂವಲ್ಲ

ದಾರಿಯ ಬದಿಯ ಅನಾಮಿಕ ತರು ನಾನು 

ನನ್ನ ದಾರಿಯಲ್ಲಿ ಸುಳಿದರೆ ನೀನು 

ಕಣ್ತುಂಬಿಕೊಳ್ಳುವೆ  ನಿನ್ನ ಬಿಂಬ 

ಪಥಶ್ರಾಂತನಾಗಿ  ಬಂದರೆ ನೆರಳಾಗುವೆ ,

RELATED ARTICLES  ಬದುಕಿಗೆ ಬಣ್ಣ ತುಂಬಿದವರು

 ಬೀಸುವೆ ಕೊಂಬೆ ಕೈಗಳ ಚಾಮರ

ನೀ ಸರಿದ ನಂತರ ತಳೆಯುವೆ ಪದರಜವ 

ತಲೆಯಲ್ಲಿ ಗಾಳಿ ಗೆಳೆಯನ ಬೇಡಿ 

ಪ್ರಭೂ , ಒಮ್ಮೆ ದಯಮಾಡು……

•ಗೋವಿಂದ ಹೆಗಡೆ