Home Health ಆಗಾಗ ಕಿವಿಯ ಸಮಸ್ಯೆ ನಿಮಗೆ ಕಾಡುತ್ತಿದ್ದರೆ ಇಲ್ಲಿದೆ ಸರಳ ಪರಿಹಾರ!

ಆಗಾಗ ಕಿವಿಯ ಸಮಸ್ಯೆ ನಿಮಗೆ ಕಾಡುತ್ತಿದ್ದರೆ ಇಲ್ಲಿದೆ ಸರಳ ಪರಿಹಾರ!

ಬಹಳಷ್ಟು ಮಂದಿಗೆ ಆಗಾಗ ಕಿವಿ ಸಂಬಂಧಿ ಸಮಸ್ಯೆಗಳು ಬರುತ್ತಿರುತ್ತವೆ. ಇದರಿಂದ ಕಿವಿಯಲ್ಲಿ ಒಂದೇ ಸಮನೆ ವಿಚಿತ್ರ ಶಬ್ದ ಕೇಳಿಸುತ್ತಿರುತ್ತದೆ. ಇನ್ನೂ ಕೆಲವರಿಗಾದರೆ ಕಿವಿಯಲ್ಲಿ ಸೋಂಕಿನ ಕಾರಣ ಕಿವಿ ಸಂಬಂಧಿ ಸಮಸ್ಯೆಗಳು ಬರುತ್ತವೆ. ಹಾಗಂತೆ ಇಯರ್ ಬಡ್ಸ್ ಕಿವಿಯಲ್ಲಿಟ್ಟುಕೊಂಡರೆ ಸಮಸ್ಯೆ ಇನ್ನಷ್ಟು ತೀವ್ರವಾಗುತ್ತದೆ. ಆದರೆ ಈ ಸಮಸ್ಯೆಗಳಿಂದ ಹೊರಬೀಳಬೇಕೆಂದರೆ ಕಿವಿಯಲ್ಲಿ ಇಯರ್ ಬಡ್ಸ್ ಇಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಅದರಿಂದ ಆಗುವ ಲಾಭಕ್ಕಿಂತ ನಷ್ಟವೇ ಅಧಿಕ. ಹಾಗಿದ್ದರೆ ಏನನ್ನು ಬಳಸಬೇಕು..?

ಬೆಳ್ಳುಳ್ಳಿ ರಸ. ಹೌದು , ಎರಡು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಅದರಿಂದ ರಸ ತೆಗೆಯಬೇಕು. ಆ ರಸವನ್ನು ಒಂದು ಟೀ ಸ್ಫೂನ್ ಆಲೀವ್ ಎಣ್ಣೆಯಲ್ಲಿ ಬೆರೆಸಬೇಕು. ಆ ಬಳಿಕ ಈ ಮಿಶ್ರಣವನ್ನು ಸ್ವಲ್ಪ ಹತ್ತಿಯಲ್ಲಿ ಅದ್ದಬೇಕು. ಆ ರೀತಿ ಸ್ವಲ್ಪ ಸಮಯ ಇಟ್ಟಾಗ ಆ ಹತ್ತಿಯನ್ನು ತೆಗೆದು ಅದನ್ನು ಸಮಸ್ಯೆ ಇರುವ ಕಿವಿ ಮೇಲೆ ಇಟ್ಟು ಅದರಲ್ಲಿರುವ ಮಿಶ್ರಣವನ್ನು ಕಿವಿಯಲ್ಲಿ ಬೀಳುವಂತೆ ಹತ್ತಿಯನ್ನು ಹಿಂಡಬೇಕು. ಎರಡು ಹನ್ನಿ ಕಿವಿಗೆ ಬೀಳುತ್ತಿದ್ದಂತೆ ಹತ್ತಿಯನ್ನು ತೆಗೆಯಬೇಕು. ಆ ರೀತಿ ಒಂದು ನಿಮಿಷ ಕಾಲ ಇದ್ದರೆ ಸಾಕು, ಸಮಸ್ಯೆಯ ತೀವ್ರತೆ ಕಡಿಮೆಯಾಗುತ್ತದೆ.

 

ಬೆಳ್ಳುಳ್ಳಿ ರಸ, ಆಲೀವ್ ಎಣ್ಣೆಯಲ್ಲಿ ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್ ಗುಣಗಳು ಹೇರಳವಾಗಿವೆ. ಆದಕಾರಣ ಅವೆರಡನ್ನೂ ಬೆರೆಸಿ ಮಿಶ್ರಣ ಮಾಡಿ ಕಿವಿಯಲ್ಲಿ ಹಾಕಿದರೆ ಕಿವಿಯಲ್ಲಿನ ಬ್ಯಾಕ್ಟೀರಿಯಾ, ಕ್ರಿಮಿಗಳು ನಾಶವಾಗಿ ಕಿವಿಗಳು ಸ್ವಚ್ಛವಾಗುತ್ತವೆ. ಕಿವಿ ಸೋರುವಂತಹ ಸಮಸ್ಯೆಗಳು ಇದ್ದರೂ ಈ ರೀತಿ ಮಾಡಿದರೆ ಕೂಡಲೆ ಕಡಿಮೆಯಾಗುತ್ತದೆ. ಆ ರೀತಿಯಾಗಿ ಸಮಸ್ಯೆ ಕಡಿಮೆಯಾಗುವವರೆಗೂ ನಿತ್ಯ 2, 3 ಬಾರಿಯಾದರೂ ಈ ರೀತಿ ಮಾಡಬೇಕಾಗಿರುತ್ತದೆ. ಇದರಿಂದ ಕಿವಿಯಲ್ಲಿನ ಸೋಂಕುಗಳು ನಿವಾರಣೆಯಾಗುತ್ತವೆ. ಊತ, ನೋವು ಕಡಿಮೆಯಾಗಿ ಆಂತರಿಕವಾಗಿ ಸ್ವಚ್ಛವಾಗುತ್ತದೆ.