ಒಮ್ಮೆ ಕಿರಿ ಕವಿ ಕೇಳಿದ ಹಿರಿಕವಿಯಲ್ಲಿ
ಹೇಗೆ ರಸೊತ್ಪಾದನೆ ನಿಮ್ಮ ಕಾವ್ಯದಲ್ಲಿ
ಕಿರು ನಗುತ್ತ ಮರು ನುಡಿದರು ಹಿರಿ ಕವಿಗಳು
ಮಡದಿ ನಸು ನಾಚಿ ಪಿಸುಗುಟ್ಟಲು ಅದುವೆ ಶ್ರಂಗಾರ
ಮನೆಯಾಕೆ ಮುನಿಸಿ ಕಣ್ಣುಕೆಂಪಾದರೆ ಅದುವೇ
ರೌದ್ರ, ಬೀಬತ್ಸ ಬಯಾನಕ!
ಗಂಡ , ಮಕ್ಕಳನು ಹೊರಕಳಿಸಿ ನೆರೆಯಾಕೆ ಜೊತೆ
ಪಟ್ಟಂಗ ಹೊಡೆದಾಗ ಹರಿಯುವುದು ಹಾಸ್ಯ ರಸಾಯನ
ಮಾಸಾಂತ್ಯದಲಿ ಅಥಿತಿ ವಕ್ರೈಸೆ ಅದುವೆ ಕರುಳಹಿಂಡುವ ಕರುಣ ರಸ
ಮಗನಿಗೆ ಜ್ವರ ಬರಲು ಗಂಡ ಹೊರಗಡೆ ಇರಲು
ಸಿಡಿಯುವುದು ವೀರರಸ
ಅತ್ತೆ ಬಂದ ಮೂರುದಿನದಲ್ಲೇ ಮರಳಿ ಹೊರಡುವುದು ಅದ್ಭುತ ರಸ
ತನ್ನಮ್ಮನ ಜೊತೆಯಲ್ಲಿ ಮಡದಿ ತವರಿಗೆ ತೆರಳೆ ಅದುವೇ ಶಾಂತ ರಸ
ಒಹೋ ಏಕಾಂತ , ಬೇಕಿಲ್ಲಾ ಲೊಕಾಂತ
ಸಾಕೆರಡು ಗುಟುಕು ಬೀರು
ಊಟಕ್ಕೆ ಉಪ್ಪಿನಕಾಯಿ ಮೊಸರು.
@ ಉಪಾದ್ಯಾಯ.ಧಾರೇಶ್ವರ