ಈ ವ್ಯಾಪಾರೀ ಧೋರಣೆ ಮಾತ್ರ ನಿಮ್ಮ ಮತ್ತು ನನ್ನ ಹೆಸರಿಗೆ ಕುಂದೇ ಆಗಿರುತ್ತದೆ.
(ಇಸವಿ ಸನ ೧೯೪೮ರ ಸುಮಾರಿಗೆ ಚಿ. ದಿನಕರ ಬುವಾ ರಾಮದಾಸಿ ಸಜ್ಜನಗಡ ಇವರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಚಿ.ದಿನಕರನಿಗೆ ಆಶೀರ್ವಾದ,
ಫೋಟೋ, ಪಾವತಿ ಪುಸ್ತಕಗಳು ಬಂದು ತಲುಪಿದವು. ‘ನಮ್ರ ವಿನಂತಿ’ ಆ ಪತ್ರದ ವಿಷಯ ಓದಿ ತಿಳಿಸಿದನು. ಯಾತ್ರಿಕರ ಅನುಕೂಲತೆಗಾಗಿ ಮಂಡಳದ ಪರವಾಗಿ ಒಂದು ಸಣ್ಣ ಅಂಗಡಿ ಅಲ್ಲಿ ಪ್ರಾರಂಭಿಸಿದ್ದಾರೆ ಎಂದು ಕೇಳಿ ಬಂತು ಮತ್ತು ನಂತರ ನೋಡಿದ ಹಾಗೆ ಈ ರೀತಿ ಪ್ರಸಿದ್ಧಿ ಮಾಡಲೇ ಬಾರದಿತ್ತು.
‘ತಕ್ಕಡಿಯ ತಟ್ಟೆಯಂಥ ಅಭಿನಯ’ – ಇದು ನಿಮ್ಮ ಅತ್ಯಂತ ಹೀನತಮ ವ್ಯಾಪಾರೀ ಸಂಕುಚಿತ ಧೋರಣೆಯಾಯಿತು. ಅದೇನೂ ನನಗೆ ಹಿಡಿಸಲಿಲ್ಲ. ನನ್ನನ್ನು ಕೇಳುವ ಬುದ್ಧಿ ಈಗಿತ್ತಲಾಗಿ ಕಡಿಮೆಯಾಗುತ್ತ ಬಂದಿದೆ. ಶ್ರೀಸಮರ್ಥರ ಸೇವೆಯಿಂದ ನಿಮ್ಮ ಉತ್ಕರ್ಷ ಆಗುತ್ತಿದೆಯೇ? ಅದನ್ನು ಸರಿಯಾಗಿ ವಿಚಾರ ಮಾಡುತ್ತಿರಿ. ಕ್ಷಣಕ್ಷಣಕ್ಕೂ ಮನಸ್ಸನ್ನು ಪರೀಕ್ಷಿಸಿ ನೋಡಿರಿ. ತಮ್ಮ ಸ್ಥಿತಿ ಕೆಳಜಾರಲು ಕೊಡಬೇಡಿ.
ನಾನು ಕಳಿಸುತ್ತೇನೆ. ಜನರಿದೂ ಸಹಾಯ ಲಭಿಸುತ್ತದೆ. ಈ ವ್ಯಾಪಾರೀ ಧೋರಣೆ ಮಾತ್ರ ನಿಮ್ಮ ಮತ್ತು ನನ್ನ ಹೆಸರಿಗೆ ಕುಂದೇ ಆಗಿರುತ್ತದೆ.
ನಿಸ್ಪ್ರಹರು ತಮ್ಮ ವಿಶಾಲ ಭೂಮಿಕೆ ಎಂದೂ ಮರೆಯಬಾರದು. ವ್ಯವಹಾರವೂ ಸಾಧಕತೆಯೇ ಆಗಬೇಕು. ವಿಷವಾಗಿ ಪರಿಣಮಿಸಬಾರದು. ಈ ರೀತಿಯ ನಿಕೃಷ್ಟ, ಸಂಕುಚಿತ ಭಾವನೆ ವಿರಕ್ತನನ್ನು ಮೂಲೆಗುಂಪು ಮಾಡುತ್ತದೆ. ಇರಲಿ!
ಸದೋದಿತ ವಿಶಾಲ ಭಾವನೆಯ ಆತ್ಮಸ್ಥಿತಿ ಸಂಭಾಳಿಸಿ, ಗಂಭೀರವಾಗಿ ತಮ್ಮ ಸಾಧನೆ ನಡೆಸಬೇಕು. ವಿಶ್ವವ್ಯಾಪಿ ಆತ್ಮಭಾವನೆಯ ವಿಶಾಲ ಭೂಮಿಕೆಯೇ ನಿಸ್ಪ್ರಹರ ಮೋಕ್ಷಭೂಮಿಯಾಗಿದೆ.
ಚಿಕಿತ್ಸೆಯ ವಿಷಯದಲ್ಲಿ ಯಾವುದೂ ಅಯೋಗ್ಯವೆಂದು ಹೇಳಲಿಕ್ಕೆ ಬರದೇ ಹೋದರೂ ಗಡದಲ್ಲಿ ಶ್ರೀಸಮರ್ಥರ ತೀರ್ಥ, ಅಂಗಾರ, ವ್ರತ ಇವುಗಳ ಗೌರವ ಇವುಗಳಿಂದ ಕಡಿಮೆಯಾಗುವದು ಎಂದು ಸೂಚಿಸದ ಹೊರತು ಇರಲಾಗದು.
‘ಚರೇ’ ಎಂಬಲ್ಲಿ ‘ವಿಚಾರೇ’ ಎಂದು ಬರೆದದ್ದಾಗಿತ್ತು. ನೀವು ಕಣ್ಣು ಮುಚ್ಚೇ ನೋಡಿದಂತೆ ಕಾಣುತ್ತದೆ.
ನೋಡು! ಆಗುತ್ತಿರುವ ಎಲ್ಲ ಕಾರ್ಯಗಳಿಂದ ನೀವು ಶ್ರೀಸಮರ್ಥರ ಕೃಪೆಗೆ ಉತ್ತರೋತ್ತರ ಹೆಚ್ಚಿಗೇ ಪಾತ್ರರಾಗಿರಿ. ನನಗೂ ಕೂಡ ನಿಮ್ಮ ಕೀರ್ತಿ ಕೇಳಿ ಧನ್ಯತೆ ಎನಿಸಬೇಕು. ಶಿಷ್ಯರ ಅಪಕೀರ್ತಿ ಕೇಳಿ ಕಿವಿಗೆ ಬೇಸರಬಂದು ಬಿಟ್ಟಿದೆ. ಬರೆಯಿಟ್ಟ ಹೃದಯದ ಮೇಲೆ ಮತ್ತೆ ಬರೆ ಇಡಬೇಡಿ. ಆದ ನ್ಯೂನ್ಯತೆಯನ್ನು ತುಂಬಿ ಯಾವಾಗಲೂ ನನ್ನ ಉತ್ಸಾಹ ಹೆಚ್ಚಿಸಿ ಹೊಸ ಹುರುಪು ತನ್ನಿ.
||ಸರ್ವೇ ಜನಾಃ ಸುಖಿನೋ ಭವಂತು||
ಶ್ರೀಧರ