ಪ್ರಸ್ತುತ ಪ್ರತಿಯೊಬ್ಬರಿಗೂ ಸ್ಮಾರ್ಟ್‌ಫೋನ್ ಒಂದು ಅತ್ಯಗತ್ಯ ಸಾಧನ ಎಂದರೂ ತಪ್ಪಾಗಲಾರದು. ಬಹುತೇಕ ನಮ್ಮ ಹಲವು ಕೆಲಸಗಳು ಇಂದು ಸ್ಮಾರ್ಟ್‌ಫೋನ್ನಲ್ಲಿಯೇ ಪೂರ್ಣಗೊಳ್ಳುತ್ತವೆ. ಹಾಗಾಗಿಯೇ, ಕೈಯಲ್ಲಿ ಫೋನ್ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಆಗುತ್ತದೆ. ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾದಂತೆ ಅದರ ಹ್ಯಾಕರ್ ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಷ್ಟಕ್ಕೂ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆ ಎಂದು ತಿಳಿಯುವುದಾದರೂ ಹೇಗೆ ಎಂದು ಎಂದಾದರೂ ಯೋಚಿಸಿದ್ದೀರಾ… ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದ್ದರೆ ಅದರಲ್ಲಿ ಕೆಲವು ಲಕ್ಷಣಗಳು ಕಂಡ ಬರುತ್ತವೆ. ನಿಮ್ಮ ಫೋನಿನಲ್ಲಿಯೂ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಈಗಲೇ ಎಚ್ಚೆತ್ತುಕೊಳ್ಳಿ.
ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯೇ/ಇಲ್ಲವೇ ಎಂದು ಈ ರೀತಿ ತಿಳಿಯಿರಿ: ಪ್ರಸ್ತುತ ಯುಗದಲ್ಲಿ ಸ್ಮಾರ್ಟ್‌ಫೋನ್ ಒಂದು ಅತ್ಯುತ್ತಮ ಸಾಧನವಾಗಿದೆ. ಕೇವಲ ಕರೆ, ಚಾಟಿಂಗ್, ಗೇಮಿಂಗ್‌ಗಳಿಗಾಗಿ ಮಾತ್ರವಲ್ಲ ಇಂದು ಬ್ಯಾಂಕಿಂಗ್ ಮತ್ತು ಕೆಲವು ವೃತ್ತಿಪರ ಉದ್ದೇಶಗಳಿಗಾಗಿಯೂ ಸ್ಮಾರ್ಟ್‌ಫೋನ್ ಅತ್ಯಗತ್ಯ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ತಂತ್ರಜ್ಞಾನ ಮುಂದುವರೆದಂತೆ ಅದರ ಹಿಂದೆಯೇ ಅದರ ನಕಾರಾತ್ಮಕ ಪರಿಣಾಮಗಳೂ ಇವೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಅಂದರೆ, ಈ ಬಹು ಉಪಯೋಗಿ ಸಾಧನವು ಮನುಷ್ಯನ ಇಡೀ ಜಾತಕವನ್ನೇ ಹೊಂದಿರುತ್ತದೆ. ಇಂತಹ ಸಾಧನಕ್ಕೆ ಸದಾ ಹ್ಯಾಕ್ ಆಗುವ ದೊಡ್ಡ ಅಪಾಯ ಇದ್ದೇ ಇರುತ್ತದೆ. ಒಂದೊಮ್ಮೆ ಸ್ಮಾರ್ಟ್‌ಫೋನ್ ಹ್ಯಾಕ್ ಆದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಡೇಟಾವನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದಲ್ಲದೆ, ಹ್ಯಾಕರ್ಗಳು ನಿಮ್ಮ ಯಾವುದೇ ಡೇಟಾವನ್ನು ಪಡೆದು ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಹಣಕ್ಕೆ ಬೇಡಿಕೆಯಿಡಬಹುದು. ಇಂತಹ ತೊಂದರೆಗಳನ್ನು ತಪ್ಪಿಸಲು ಸಮಯೋಚಿತ ಕ್ರಮ ಅಗತ್ಯ. ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದಿರುವುದು ಸಹ ಬಹಳ ಮುಖ್ಯ.
ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದ್ದರೆ ಅದರಲ್ಲಿ ಕೆಲವು ಲಕ್ಷಣಗಳು ಕಂಡು ಬರುತ್ತವೆ. ನಿಮ್ಮ ಫೋನಿನಲ್ಲಿಯೂ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ನಿಮ್ಮ ಫೋನ್ ಹ್ಯಾಕ್ ಆಗಿದೆಯೋ ಇಲ್ಲವೋ ಎಂಬುದನ್ನು ನೀವು ಸಮಯ ವ್ಯರ್ಥ ಮಾಡದೆ ತಿಳಿದುಕೊಳ್ಳಲು ಬಯಸಿದರೆ ಈ ಕೆಳಗೆ ತಿಳಿಸಲಾದ ವಿಷಯಗಳ ಬಗ್ಗೆ ಗಮನಹರಿಸಿ.
ಫೋನ್‌ನಲ್ಲಿ ಈ ಲಕ್ಷಣಗಳು ಕಂಡುಬಂದರೆ ಹುಷಾರಾಗಿರಿ
ನಿಮಗೆ ಆಗಾಗ್ಗೆ ಹೆಚ್ಚು ಹೆಚ್ಚಾಗಿ ಶಾಪಿಂಗ್ ಅಥವಾ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಸಂದೇಶ ಬರುತ್ತಿದ್ದರೆ ಫೋನ್ ಹ್ಯಾಕ್ ಆಗಿದೆ ಎಂದು ಅರ್ಥಮಾಡಿಕೊಳ್ಳಿ. ನಿಮ್ಮ ಫೋನ್‌ನಲ್ಲಿ ಬರುವ ಪ್ರತಿಯೊಂದು ಸಂದೇಶವನ್ನು ಎಚ್ಚರಿಕೆಯಿಂದ ಓದಿ. ಅನೇಕ ಜನರು ಅವುಗಳನ್ನು ನಿರ್ಲಕ್ಷಿಸುತ್ತಾರೆ. ನೀವು ಸಂದೇಶವನ್ನು ನೋಡಿದರೆ, ನಿಮ್ಮ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ನೀವು ಸಮಯಕ್ಕೆ ನಿರ್ಬಂಧಿಸಬಹುದು.
ನಿಮ್ಮ ಫೋನ್ ಆಗಾಗ್ಗೆ ಆಫ್ ಆಗುತ್ತಿದ್ದರೆ ಅಥವಾ ಮರುಪ್ರಾರಂಭಿಸಲು ಕೇಳುತ್ತಿದ್ದರೆ , ನೀವು ಎಚ್ಚರದಿಂದಿರಬೇಕು. ಇವು ಕೂಡ ಫೋನ್ ಹ್ಯಾಕಿಂಗ್ ನ ಲಕ್ಷಣಗಳಾಗಿವೆ ಎನ್ನುತ್ತಾರೆ ತಜ್ಞರು. ಅಂತಹ ಪರಿಸ್ಥಿತಿಯಲ್ಲಿ, ತಕ್ಷಣವೇ ಡೇಟಾವನ್ನು ಬ್ಯಾಕಪ್ ಮಾಡುವ ಮೂಲಕ, ಫೋನ್ ಅನ್ನು ಫಾರ್ಮ್ಯಾಟ್ ಮಾಡಿ.
ಫೋನ್ ಹ್ಯಾಕ್ ಮಾಡಿದ ನಂತರ, ಸೈಬರ್ ಅಪರಾಧಿಗಳು ಕೆಲವೊಮ್ಮೆ ನಿಮ್ಮ ಫೋನ್‌ನಲ್ಲಿರುವ ಆಂಟಿ ವೈರಸ್ (ಯಾವುದಾದರೂ ಇದ್ದರೆ) ಆಫ್ ಮಾಡುತ್ತಾರೆ. ಫೋನ್‌ನಲ್ಲಿರುವ ಆ್ಯಂಟಿ ವೈರಸ್ ಕೆಲಸ ಮಾಡದಿದ್ದರೆ ಅದು ಫೋನ್ ಹ್ಯಾಕ್ ಆಗಿರುವ ಸಂಕೇತವಾಗಿರಬಹುದು.
ಸ್ಮಾರ್ಟ್‌ಫೋನ್ ತುಂಬಾ ನಿಧಾನವಾಗಿದ್ದರೆ ಅಂತಹ ಸಂದರ್ಭದಲ್ಲಿಯೂ ಎಚ್ಚರದಿಂದಿರಿ. ಇದು ಕೂಡ ಫೋನ್ ಹ್ಯಾಕ್ ಆಗಿರುವ ಸಂಕೇತವಾಗಿದೆ. ವಾಸ್ತವವಾಗಿ, ಹ್ಯಾಕರ್‌ಗಳು ಫೋನ್ ಅನ್ನು ಹ್ಯಾಕ್ ಮಾಡುತ್ತಾರೆ.
Source : ZeeNews