ಹೊನ್ನಾವರ : ಗಣೇಶ ಚತುರ್ಥಿಯಂದು ಎಲ್ಲೆಡೆ ವೈವಿಧ್ಯಮಯವಾದ ಗಣೇಶನ ಮೂರ್ತಿಗಳು ಕಾಣಸಿಗುತ್ತವೆ. ವಿವಿಧ ಬಗೆಯ ಬಂಗಿಯಲ್ಲಿ ಕಾಣುವ ಗಣೇಶನ ಮೂರ್ತಿಗಳು ತನ್ನ ಸೌಂದರ್ಯದಿಂದಲೇ ಜನರನ್ನ ತನ್ನತ್ತ ಆಕರ್ಷಿಸುವುದುಂಟು. ಮೂರ್ತಿ ತಯಾರಿಕರಿಗೂ ಇದು ಒಂದು ಒಳ್ಳೆಯ ಸಮಯವಾಗಿದ್ದು ತಮ್ಮ ಪ್ರತಿಭೆಯ ಅನಾವರಣಕ್ಕೆ ಇದು ವೇದಿಕೆಯಾಗಿದೆ. ಇಂತಹದೇ ಒಂದು ಗಣಪತಿಯ ಮೂರ್ತಿ ತಯಾರಿಕೆಯ ವಿಭಿನ್ನ ಚಾಪು ಮೂಡಿಸಿದವರು ಕೆಕ್ಕಾರಿನ ಜಿ.ಡಿ ಭಟ್ಟ.

ಜಿ.ಡಿ. ಭಟ್ ಕೆಕ್ಕಾರು ಈ ಹೆಸರು ಕೇಳುತ್ತಿದ್ದಂತೆ ಥಟ್ಟನೆ ನೆನಪಿಗೆ ಬರುವುದು ಅವರು ತಯಾರಿಸುವ ಗಣಪತಿಯ ವಿಗ್ರಹಗಳು. ಎಂತವರನ್ನೂ ಸೂಜಿಗಲ್ಲಿನಂತೆ ಸೆಳೆವ ಮಾಂತ್ರಿಕತೆ ಅವರ ಅದ್ಭುತ ಕಲಾಕಾರಿಕೆಯಲ್ಲಿ ಅಡಗಿದೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಜಿ.ಡಿ. ಭಟ್ ಅವರು ಗಣಪತಿ ವಿಗ್ರಹಗಳು, ಚಿತ್ರಕಲೆ ಹಾಗೂ ನಾಟಕಗಳ ಮೂಲಕ ಜಿಲ್ಲೆಯಾದ್ಯಂತ ಮನೆ ಮಾತಾಗಿರುವ ಕಲಾವಿದ.

ಗರುಡವಾಹನ ಗಣಪ, ಇಡಗುಂಜಿ ಮಾದರಿಯ ಗಣಪ, ಯಕ್ಷಗಾನ ಗಣಪ, ಕೊಳನೂದುವ ಕೃಷ್ಣನ ಮಾದರಿ ಗಣಪ, ನಾಟ್ಯ ಮಾಡುವ ಗಣಪ…ಹೀಗೆ ವಿಧ ವಿಧದ ಗಣಪನ ವಿಗ್ರಹಗಳು ಇವರ ಕೈಚಳಕದಿಂದ ಹಬ್ಬಕ್ಕೆ ಸಿದ್ಧಗೊಂಡು ಆರಾಧಿಸಲ್ಪಡುತ್ತಿದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಪೀಠದಲ್ಲಿ ಆರೋಢನಾಗಿ ಕುಳಿತಿರುವ ಗಣಪನ ಶಾಲು ಮತ್ತು ಮಡಿಯ ಬಣ್ಣ ಇದೀಗ ಜನರ ಆಕರ್ಷಣೀಯ ಕೇಂದ್ರಬಿಂದು. ನಿಜವಾಗಿಯೂ ಶಾಲು ಹದ್ದು ಕುಳಿತಂತೆ ಇರುವ ಈ ಗಣಪನ ವಿಗ್ರಹ ಇದೀಗ ಜನರನ್ನು ಆಕರ್ಷಿಸುತ್ತಿದೆ. ಕಲಾವಿದನ ಕೈಚಳಕಕ್ಕೆ ಜನರು ಸಲಾಂ ಹೇಳುತ್ತಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಕಲಾವಿದರು – ಸಮಯದ ಅಭಾವದಿಂದಾಗಿ ನಿಜವಾದ ಮಡಿಯನ್ನೇ ತೊಡಿಸಲಾಗಿದೆ ಎಂದಿದ್ದಾರೆ.