ಗುರುವಿಗೆ ಶಿಷ್ಯ ಸ್ವಂತ ಕೈಕಾಲಿನಂತೆಯೇ ಇರುತ್ತಾನೆ. ಇದನ್ನು ನಾನು ನಿನಗೆ ಮಾತ್ರ ಬರೆಯುತ್ತಿದ್ದೇನೆ ಎಂದಲ್ಲ, ಶಿಷ್ಯ ಎಂದು ಇರುವ ಎಲ್ಲರಿಗೂ ಇದು ಅನ್ವಯವಾಗುತ್ತದೆ.

(ಚಿ. ದಿನಕರ ಬುವಾ ರಾಮದಾಸಿ ಸಜ್ಜನಗಡ ಇವರಿಗೆ ಬರೆದ ಇನ್ನೊಂದು ಪತ್ರದ ಮೊದಲ ಭಾಗ)

||ಶ್ರೀರಾಮ ಸಮರ್ಥ||

ಚಿ. ದಿನಕರನಿಗೆ ಆಶೀರ್ವಾದ,

ಎಲ್ಲಾ ಕ್ಷೇಮ ತಾನೇ? ಏನಾಯ್ತೋ ಯಾರಿಗೆ ಗೊತ್ತು? ನಿಮ್ಮಿಂದ ಒಂದೂ ಪತ್ರವಿಲ್ಲ. ಇಲ್ಲಿಂದ ಮಾತ್ರ ೩-೪ ಪತ್ರ ಕಳಿಸಿಯಾಯಿತು. ಆವಶ್ಯಕತೆಯ ದೃಷ್ಟಿಯಿಂದ ಏನಾದರೂ ನಿಮಗೆ ತಿಳಿಸಿದರೆ ಅದು ಸಮಯದೊಳಗೆ ಆಗುತ್ತದೆ ಎಂಬುವ ನಿಶ್ಚಯ ಮಾತ್ರ ಈಗ ಅನಿಸದಂತೆ ಆಗಿದೆ. ಮುಂದೂ ಏನಾದರೂ ಅಪ್ಪಣೆ ಮಾಡಿದರೆ ಅದರ ಮಹತ್ವ ಅರಿತು ಸಮಯದಲ್ಲೇ ಅದರ ಮೇಲೆ ಕ್ರಮ ನಡೆಸಲಾಗುತ್ತದೆಯೋ ಇಲ್ಲವೋ ಎಂದು ಮನಸ್ಸಿಗೆ ಸಂಶಯ ಬರುತ್ತಿದೆ. ಎಲ್ಲರೂ ಅದೇನು ಬೇಜವಾಬುದಾರಿಯ ಆಚರಣೆ ಸ್ವೀಕರಿಸಿದ್ದಾರೆ?
ಸೋಮಾರಿತನ ಇರಬಾರದು. ಸಮಯದ ಮಹತ್ವ ತುಂಬಾ ಇದೆ. ಸಮಯದಲ್ಲೇ ಆ ಸಮಯದ ಕೆಲಸ ಆಗದಿದ್ದರೆ ಬಹಳ ನಷ್ಟಕ್ಕೆ ಕಾರಣವಾಗುತ್ತದೆ. ಐದು ನಿಮಿಷದ ಸೋಮಾರಿತನದಿಂದ ನೆಪೋಲಿಯನ್ನನಿಗೆ ಸೋಲು ತಿನ್ನಬೇಕಾಯಿತು. ಒಂದು ಸರದಾರನ ಮೂರ್ಖತನದಿಂದ ಎಷ್ಟು ಕಷ್ಟ ಅನುಭವಿಸಬೇಕಾಯಿತು! ಕಾರ್ಯ ದಕ್ಷತೆಯಿಂದ ಸಮಯದಲ್ಲಿ ಕಾರ್ಯ ಮಾಡಿ ಮುಗಿಸುವ ವಿಷಯದಲ್ಲಿ ಇದೊಂದು ಎಚ್ಚರಿಕೆ ಕೊಡುವ ಐತಿಹಾಸಿಕ ಉದಾಹರಣೆ. ಇರಲಿ.

RELATED ARTICLES  ಆಳ್ವಾಗೆ ಟಿಕೆಟ್ : ಹೊನ್ನಾವರ ಮುಸ್ಲಿಂ ಜಮಾತ್ ವಿರೋಧ.

ಇನ್ನಾದರೂ ಈ ವಿಷಯದಲ್ಲಿ ಮತ್ತೆ ಎಚ್ಚರಿಕೆ ಕೊಡುವ ಪ್ರಸಂಗ ತರಬೇಡಿರಿ!
ಕೈಕಾಲು ಗಟ್ಟಿ ಇದ್ದಾಗ ಮಾತ್ರ ಏನಾದರೂ ಮಾಡಬಹುದು.
‘ಹಸ್ತಪಾದಾತಿವಾಚ್ಛಿಷ್ಯ|’
ಗುರುವಿಗೆ ಶಿಷ್ಯ ಸ್ವಂತ ಕೈಕಾಲಿನಂತೆಯೇ ಇರುತ್ತಾನೆ. ಇದನ್ನು ನಾನು ನಿನಗೆ ಮಾತ್ರ ಬರೆಯುತ್ತಿದ್ದೇನೆ ಎಂದಲ್ಲ, ಶಿಷ್ಯ ಎಂದು ಇರುವ ಎಲ್ಲರಿಗೂ ಇದು ಅನ್ವಯವಾಗುತ್ತದೆ. ಅವ್ಯವಸ್ಥೆ ಸ್ವಲ್ಪವೂ ಇರಬಾರದು.
‘ಎಚ್ಚೆತ್ತಿರುವ, ಜಾಗರೂಕ ಮತ್ತು ದಕ್ಷ’ – ಇಂಥ ಶಿಷ್ಯರೇ ಶ್ರೀಸಮರ್ಥರಿಗೆ ಒಪ್ಪಿಗೆಯಿದೆ. ಇರಲಿ.
ಶ್ರೀಸಮರ್ಥ ಕೃಪೆಯಿಂದ ನೀವೆಲ್ಲರೂ ಸಂಪ್ರದಾಯಕ್ಕೆ ಭೂಷಣಪ್ರಾಯರಾಗಿ. ಶ್ರೀಸಮರ್ಥ ತಮ್ಮ ಕೀರ್ತಿಗೆ ಅನುರೂಪವಾಗಿ ನಿಮ್ಮೆಲ್ಲರನ್ನೂ ಮಾಡಲಿ.
ಎರಡು ನೂರು ರೂಪಾಯಿ ಒಬ್ಬನಿಗೆ ಹೇಳಿದ್ದೆ. ಅವರ ಆ ಹಣ ನಿಮಗೆ ತಲುಪಿದಾಗ ಕೂಡ ತಿಳಿಸಲಿಲ್ಲ. ಅತ್ಯಂತ ‘ನಿಜವಾಗಿಯೂ ಘೋರತಿ ಘೋರ’ ಎಂಬಂತೆಯೇ ಆಯ್ತು. ಶಬ್ಧದ ಬೆಲೆ ಮತ್ತು ವೇಳೆಯ ಮಹತ್ವ ಲಕ್ಷಕ್ಕೇ ಬರುವದಿಲ್ಲ. ಮುಂದಾದರೂ ಶ್ರೀಸಮರ್ಥಕೃಪೆಯಿಂದ ನೀವೆಲ್ಲರೂ ಪೂರ್ಣ ಕಾರ್ಯಕ್ಷಮರಾಗಿರಿ!
ನನಗೆಂದು, ದಿನವೂ ಶ್ರೀಸಮರ್ಥರಿಗೆ ಏಕಾದಶಣೀ ನೀನು ಮಾಡುತ್ತಾ ಇರು. ಏಕಾದಶಣೀ ಮಾಡಲು ವೇಳೆ ಸಿಗದಿದ್ದರೆ ಒಂದು ಆವರ್ತನ ದಿನವೂ ಮಾಡಿ ಗುರುವಾರ, ಶನಿವಾರ ಮಾತ್ರ ಏಕಾದಶಣೀ ಮಾಡು. ಮೇಲೆ ಎರಡು ಮಾರುತಿ ಇದೆ. ಒಂದು ದೊಡ್ಡದು ಶ್ರೀರಾಮನ ಹತ್ತಿರವಿದ್ದದ್ದು ಮತ್ತು ಇನ್ನೊಂದು ಸಣ್ಣ ಮಾರುತಿ ಶ್ರೀರಾಮಪಂಚಾಯತನದ್ದು. ಅವನ್ನು ಸಮಾಧಿಯ ಮೇಲಿಟ್ಟು ನನ್ನ ಹೆಸರಿನ ಸಂಕಲ್ಪ ಮಾಡಿ ಅಭಿಷೇಕ ಮಾಡುತ್ತಾ ಬಾ. ನಾನು ಸಾಕು ಎಂದು ಹೇಳುವವರೆಗೂ ಅಭಿಷೇಕ ಮುಂದುವರಿಸಬೇಕು. ನೀನು ಅಭಿಷೇಕ ಮಾಡಿದೆಯೆಂದರೆ ನನ್ನ ಸೇವೆ ಪ್ರತಿದಿನ ಸಮರ್ಥಚರಣಗಳಲ್ಲಿ ನಮೂದಿಸಲ್ಪಡುತ್ತದೆ. ನಿಮ್ಮ ಕಡೆಯೂ ಮೊದಲಿಂದಲೇ ಒಂದು ಮಾರುತಿ ಇದೆ ಎಂದು ಅನಿಸುತ್ತಿದೆ. ಅದನ್ನಿಟ್ಟರೂ ನಡೆಯುತ್ತದೆ. ಪೂರ್ಣ ದುರ್ಲಕ್ಷವಾಗಬಾರದು. ಅಭಿಷೇಕ ನೀನೇ ಅಂದರೆ ದಿನಕರನೇ ಮಾಡಬೇಕು. ಶ್ರೀಸಮರ್ಥಕೃಪೆಯಿಂದ ಯಾವುದೇ ವಿಘ್ನವು ಬರದಿರಲಿ. ಚಿ.ದತ್ತನಿಗೆ ಊರಿನ ಅಂದರೆ, ನೀವೀಗ ಇರುವಲ್ಲಿಂದಲೂ ತುಸು ಮುಂದೆ ಇರುವ ಮಾರುತಿಗೆ ಕೈವಲ್ಯೋಪನಿಷದ್ದಿನ ಏಕಾದಶಣೀ ಹೇಳಬೇಕು.

RELATED ARTICLES  ಮಾತು ಹೀಗಿರಲಿ……!

(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)