ಇಂದು ಭಾರತದ 5G ಸೇವೆಗಳನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಉದ್ಘಾಟಿಸಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ 5ಜಿ ತಂತ್ರಜ್ಞಾನ ಸೇವೆಗಳನ್ನು ಪರಿಚಯಿಸಲಾಗಿದೆ. ಈ ಮೂಲಕ ಭಾರತ 5ಜಿ ಯುಗಕ್ಕೆ ತೆರೆದುಕೊಳ್ಳಲಿದೆ. ಸದ್ಯಕ್ಕೆ ವಾಣಿಜ್ಯ ಉದ್ದೇಶಗಳಿಗೆ ಮಾತ್ರ 5ಜಿ ಸೌಲಭ್ಯ ಲಭ್ಯವಾಗಲಿದ್ದು, ಇನ್ನೊಂದು ವರ್ಷದೊಳಗೆ ಜನಸಾಮಾನ್ಯರಿಗೂ ಈ ಸೇವೆ ಸಿಗಲಿದೆ.

ಹೆಚ್ಚಿನ ಡೇಟಾ ವೇಗ, ಯಾವುದೇ ಬಫರಿಂಗ್ ಇಲ್ಲದೆ ವಿಡಿಯೋ ಪ್ಲೇ ಮಾಡುವ ಅವಕಾಶ, ತಡೆರಹಿತ ಕವರೇಜ್ ಇವೆಲ್ಲವೂ 5G ತಂತ್ರಜ್ಞಾನದ ಭರವಸೆಯಾಗಿದೆ. ಏರ್​ಟೆಲ್, ಜಿಯೋ, ವೊಡಾಫೋನ್ 5ಜಿ ನೆಟ್​ವರ್ಕ್​ಗೆ ಅಪ್​ಗ್ರೇಡ್ ಆಗಲಿವೆ. ಹಾಗಾದರೆ, ಮೊದಲ ಹಂತದಲ್ಲಿ ಯಾವೆಲ್ಲ ನಗರಗಳಲ್ಲಿ ಈ 5ಜಿ ಸೇವೆ ಲಭ್ಯವಾಗಲಿವೆ ಎಂಬ ಮಾಹಿತಿ ಇಲ್ಲಿದೆ.

ಭಾರತದ 13 ನಗರಗಳಲ್ಲಿ ಆರಂಭದ ಹಂತದಲ್ಲಿ 5G ಇಂಟರ್ನೆಟ್ ಸೇವೆಗಳು ಲಭ್ಯವಾಗಲಿವೆ. ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಕೊಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ ನಗರಗಳಲ್ಲಿ 5ಜಿ ಇಂಟರ್ನೆಟ್ ಸೇವೆ ಲಭ್ಯವಾಗಲಿವೆ.

ರಾಷ್ಟ್ರದಾದ್ಯಂತ 17 ವಲಯಗಳಲ್ಲಿ ಸ್ಪೆಕ್ಟ್ರಮ್ ಅನ್ನು ಖರೀದಿಸಿದರೂ ಭಾರತದಲ್ಲಿ ಮೂರನೇ ಅತಿದೊಡ್ಡ ಟೆಲಿಕಾಂ ಪೂರೈಕೆದಾರರಾದ ವೊಡಾಫೋನ್ ಐಡಿಯಾ 5G ಸೇವೆಗಳನ್ನು ಹೊರತರುವ ತನ್ನ ಯೋಜನೆಗಳನ್ನು ಘೋಷಿಸಲು ವಿಫಲವಾಗಿದೆ. ಎರಡು ವರ್ಷಗಳಲ್ಲಿ ಭಾರತದಾದ್ಯಂತ 5G ಟೆಲಿಕಾಂ ಸೇವೆಗಳು ಲಭ್ಯವಾಗುವುದು ಸರ್ಕಾರದ ಗುರಿಯಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಹೇಳಿದ್ದಾರೆ. ಭಾರತದಲ್ಲಿ 5G ಟೆಲಿಕಾಂ ಸೇವೆಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಹೇಳಿದ್ದಾರೆ.

RELATED ARTICLES  ಜಿಯೋ ದ ಈ ಎರಡು ರೀಚಾರ್ಜಗಳು ಇನ್ನು ಬಂದ್...!

ಇದನ್ನೂ ಓದಿ – ಮಕ್ಕಳ ಕಳ್ಳರಿದ್ದಾರೆ ಎಚ್ಚರಿಕೆ..! ಎಚ್ಚರಿಕೆ …! ಎಚ್ಚರಿಕೆ…!, ಪೊಲೀಸ್ರು ಹೇಳಿದ ವಿಚಾರವೇನು?

ಮುಂದಿನ ತಿಂಗಳುಗಳಲ್ಲಿ ಭಾರತದ ಉಳಿದ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳು 5ಜಿ ನೆಟ್‌ವರ್ಕ್‌ ಸೌಲಭ್ಯ ಪಡೆಯಲಿವೆ. ಇನ್ನು 2ರಿಂದ 3 ವರ್ಷಗಳಲ್ಲಿ 5G ನೆಟ್‌ವರ್ಕ್ ಇಡೀ ಭಾರತಕ್ಕೆ ಬರಲು ಸಿದ್ಧವಾಗಿದೆ. 5G ಇಂಟರ್ನೆಟ್​ ಸೇವೆಯಲ್ಲಿ ಯಾವುದೇ ಬಫರಿಂಗ್ ಇಲ್ಲದೆ ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಸ್ಟ್ರೀಮ್ ಮಾಡಬಹುದು. ಇಂಟರ್ನೆಟ್ ಕರೆಗಳಲ್ಲಿ ಧ್ವನಿ ಬಹಳ ಸ್ಪಷ್ಟವಾಗಿರುತ್ತದೆ. 2 ಜಿಬಿಯ ಸಂಪೂರ್ಣ ಚಲನಚಿತ್ರವು ಕೇವಲ 10 ರಿಂದ 20 ಸೆಕೆಂಡುಗಳಲ್ಲಿ ಡೌನ್‌ಲೋಡ್ ಆಗುತ್ತದೆ. ವಿಡಿಯೋ ಗೇಮಿಂಗ್ ಕ್ಷೇತ್ರಕ್ಕೂ 5G ಇಂಟರ್ನೆಟ್​ ಸೇವೆಯಿಂದ ಅವಕಾಶಗಳು ಹೆಚ್ಚಾಗುತ್ತವೆ.

RELATED ARTICLES  ಗಗನಕ್ಕೇರಿದ ಟೊಮ್ಯಾಟೋ ರೇಟ್.

ನಿಮ್ಮ ಮೊಬೈಲ್ ನಲ್ಲಿ 5G ಕೆಲಸ‌ ಮಾಡುತ್ತಾ?

ನಿಮ್ಮ Android ಫೋನ್‌ನಲ್ಲಿ, ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ. ‘Wi-Fi & Network’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ‘SIM & Network’ ಆಯ್ಕೆಯನ್ನು ಕ್ಲಿಕ್ ಮಾಡಿ.
ಈಗ ನೀವು ‘ಆದ್ಯತೆಯ ನೆಟ್‌ವರ್ಕ್ ಪ್ರಕಾರ’ ಆಯ್ಕೆಯ ಅಡಿಯಲ್ಲಿ ಎಲ್ಲಾ ತಂತ್ರಜ್ಞಾನಗಳ ಪಟ್ಟಿಯನ್ನು ನೋಡಲು ಸಾಧ್ಯವಾಗುತ್ತದೆ. ನಿಮ್ಮ ಫೋನ್ 5G ಅನ್ನು ಸಪೋರ್ಟ್​ ಮಾಡಿದರೆ, ಅದನ್ನು 2G/3G/4G/5G ಎಂದು ಪಟ್ಟಿ ಮಾಡಲಾಗುತ್ತದೆ.


ನಿಮ್ಮ ಫೋನ್ 5G ನೆಟ್‌ವರ್ಕ್ ಅನ್ನು ಬೆಂಬಲಿಸದಿದ್ದರೆ, ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಅನುಭವಿಸಲು ನೀವು 5G-ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಾಗಿ ಖರ್ಚು ಮಾಡಬೇಕಾಗುತ್ತದೆ.