ಷಿಂಗ್ಟನ್- ಇಷ್ಟು ದಿನ ಮೊಬೈಲ್ ಸ್ಪೋಟ ಆಗೋದನ್ನ ನೋಡಿದ್ವಿ, ಕೇಳಿದ್ವಿ. ಮೊಬೈಲ್ ಸ್ಪೋಟದಿಂದ ಪ್ರಾಣ ಹಾನಿಯೂ ಆಗಿರೋದನ್ನ ನೋಡಿದ್ದೇವೆ. ಆದರೆ ಇದೀಗ ಆಪಲ್ ವಾಚ್ ಒಂದು ಸ್ಫೋಟಗೊಂಡಿದೆ. ಈ ಘಟನೆ ಅಮೆರಿಕಾದಲ್ಲಿ ನಡೆದಿದೆ. ತಾಪಮಾನ ಹೆಚ್ಚಳದಿಂದ ಸರಣಿ 7 ರ ಆಪಲ್ ವಾಚ್ ಸ್ಪೋಟಗೊಂಡಿದೆ.

ಮೊದಲು ಈ ವಾಚ್ ನ ಹಿಂಬದಿ ಬಿರುಕು ಬಿಟ್ಟಿತ್ತಂತೆ. ಈ ವಾಚ್ ಹಿಂಬದಿಯಲ್ಲಿ ಬಿರುಕು ಬಂದ ತಕ್ಷಣ ಆಪಲ್ ಬೆಂಬಲಕ್ಕೆ ಈ ವಾಚ್ ಬಳಕೆದಾರ ಕರೆ ಮಾಡಿದ್ದಾನೆ. ಆಗ ಕಂಪನಿ ನಾವು ಹೇಳುವವರಿಗೆ ಈ ವಾಚ್ ಮುಟ್ಟಬೇಡಿ ಎಂದು ಹೇಳಿದೆ.

RELATED ARTICLES  ಫೋನ್‌ಪೇ, ಗೂಗಲ್‌ ಪೇ, ಪೇಟಿಎಂ ಬಳಸುವವರಿಗೆ ಆರ್‌ಬಿಐ ನಿಂದ ಹೊಸ ರೂಲ್..!

ಇದಾಗ ನಂತರ ವಾಚ್ ದೂರ ಇಟ್ಟು ರಾತ್ರಿ ಮಲಗಿದ್ದಾನೆ. ಬೆಳಗ್ಗೆ ಎದ್ದಾಗ ತಾಪಮಾನ ಇನ್ನೂ ಹೆಚ್ಚಾಗಿತ್ತಂತೆ. ತಾಪಮಾನ ಯಾವಾಗ ಹೆಚ್ಚಾಯ್ತೋ ವಾಚ್ ನ ಮುಂಭಾಗವೂ ಬಿರುಕು ಬಿಟ್ಟಿದೆ. ತಕ್ಷಣ ಅದನ್ನು ಮನೆಯಿಂದ ಆಚೆ ಎಸೆದಿದ್ದಾನೆ. ಆಗ ಅದು ಸ್ಪೋಟಗೊಂಡಿದೆ. ಇನ್ನು ಈ ಘಟನೆಗೆ ಬಳಕೆದಾರರ ನಿರ್ಲಕ್ಷ್ಯ ಕಾರಣ ಎಂದು ಕಂಪನಿ ಹೇಳಿದೆ.

RELATED ARTICLES  BSNL ನಿಂದ ನೂತನವಾಗಿ ಎರಡು ಆಕರ್ಷಕ ರೀಚಾರ್ಜ್‌ ಯೋಜನೆ : ಖಾಸಗಿ ಟೆಲಿಕಾಂಗಳಿಗೆ ನೇರ ಫೈಟ್‌