ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸ್‌ಆಪ್‌ (WhatsApp) ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ದೊಡ್ಡ ಗ್ರೂಪ್‌ಗಳನ್ನು ಕ್ರಿಯೇಟ್ ಮಾಡಲು ಅನುಮತಿಸುತ್ತದೆ ಎಂದು ವರದಿಯಾಗಿದೆ. ಈ ಸಂಖ್ಯೆಯನ್ನು 1024 ಗೆ ಹೆಚ್ಚಿಸಲು ಈಗ ವಾಟ್ಸಾಪ್ ಸಂಸ್ಥೆ ಕೆಲಸ ಮಾಡುತ್ತಿದೆ. WaBetaInfo ವರದಿಯ ಪ್ರಕಾರ, ವಾಟ್ಸ್‌ಆಪ್‌ ಬಳಕೆದಾರರು ಭವಿಷ್ಯದಲ್ಲಿ ಪ್ರತಿಗುಂಪಿನಲ್ಲಿ 1,024 ಸದಸ್ಯರನ್ನು ಸೇರಿಸಲು ಸಾಧ್ಯವಾಗುತ್ತದೆ. ಈ ವರ್ಷದ ಆರಂಭದಲ್ಲಿ 256 ರಿಂದ ಇದನ್ನು 512ಕ್ಕೆ ಹೆಚ್ಚಿಸಲಾಗಿದೆ.

ಈ ವೈಶಿಷ್ಟ್ಯವು ಈಗಾಗಲೇ ಆಂಡ್ರಾಯ್ಡ್ ಮತ್ತು ಐಒಎಸ್‌ಗಾಗಿ ವಾಟ್ಸಾಪ್ ಬೀಟಾದಲ್ಲಿ ಲಭ್ಯವಿದೆ ಎಂದು ವರದಿ ಹೇಳುತ್ತದೆ. ಆದಾಗ್ಯೂ, ಇದು ನಿರ್ದಿಷ್ಟ ಸಂಖ್ಯೆಯ ಬೀಟಾ ಪರೀಕ್ಷಕರಿಗೆ ಸೀಮಿತವಾಗಿದೆ ಎಂದು ಅದು ಹೇಳುತ್ತದೆ. ಭವಿಷ್ಯದ ನವೀಕರಣದಲ್ಲಿ ಈ ವೈಶಿಷ್ಟ್ಯವು ಹೆಚ್ಚಿನ ಬಳಕೆದಾರರಿಗೆ ಲಭ್ಯವಗುವ ನಿರೀಕ್ಷೆಯಿದೆ. 1,024 ಜನರು ಭಾಗವಹಿಸುವ ವಾಟ್ಸಾಪ್ ಗುಂಪುಗಳು ಸಣ್ಣ ವಾಟ್ಸಾಪ್ ಗುಂಪುಗಳಂತೆಯೇ ಕಾರ್ಯನಿರ್ವಹಿಸುತ್ತವೆ.

RELATED ARTICLES  ಮೊಬೈಲ್ ಬ್ಲಾಸ್ಟ್ ಆಗೋದು ಆಯ್ತು.. ಇದೀಗ ಸ್ಮಾರ್ಟ್ ವಾಚ್ ಕೂಡಾ ಸ್ಪೋಟ ಆಯ್ತು..

ವೈಶಿಷ್ಟ್ಯದೊಂದಿಗೆ, ಬಳಕೆದಾರರು ಹೆಚ್ಚಿನ ಸಂದೇಶಗಳನ್ನು ನೋಡುತ್ತಾರೆ ಮತ್ತು ಸಂದೇಶಗಳು ಹೆಚ್ಚು ಜನರನ್ನು ತಲುಪುತ್ತವೆ.

ವಾಟ್ಸಾಪ್ ಗ್ರೂಪ್‌ ಸದಸ್ಯರ ಸಂಖ್ಯೆ ಹೆಚ್ಚಿದಂತೆ ಫೇಕ್ ನ್ಯೂಸ್‌ ಗಳು ಹರಿದಾಡುತ್ತವೆ ಎಂಬ ಕಾರಣದಿಂದಾಗಿ ಗ್ರೂಪ್‌ಗಳಿಗೆ ಹೆಚ್ಚು ಸದಸ್ಯರನ್ನು ಸೇರಿಸುವುದನ್ನು ನಿರ್ಭಂಧಿಸಲಾಗಿತ್ತು. ಆದರೆ, ಈಗ ವಾಟ್ಸಾಪ್ ಗ್ರೂಪ್ ಅಡ್ಮಿನ್‌ಗಳಿಗೆ ಹೆಚ್ಚು ನಿಯಂತ್ರಣ ದೊರೆತಿರುವುದರಿಂದ ಗ್ರೂಪ್‌ಗಳಿಗೆ ಹೆಚ್ಚು ಸದಸ್ಯರನ್ನು ಸೇರಿಸಲು ಅನುಮತಿಸಲಾಗುತ್ತಿದೆ ಎಂದು ಹೇಳಲಾಗಿದೆ.

ವಾಟ್ಸಾಪ್ ಗ್ರೂಪ್ ಅಡ್ಮಿನ್‌ಗಳು ಇತರೆ ಸದಸ್ಯರ ಸಂದೇಶಗಳನ್ನು ಡಿಲೀಟ್ ಮಾಡಬಹುದಾದ ಮತ್ತು ಸಂದೇಶವನ್ನು ಕಳುಹಿಸುವ ಮುನ್ನ ಆ ಸಂದೇಶವು ಗ್ರೂಪ್‌ಗೆ ಶೇರ್ ಆಗಲು ಯೋಗ್ಯವಾಗಿದೆಯಾ ಎಂಬುದನ್ನು ಪರಿಶೀಲಿಸುವಂತಹ ಆಯ್ಕೆಗಳು ಲಭ್ಯವಾಗುತ್ತಿವೆ.

RELATED ARTICLES  Business Together To Make Investments

ಈವರೆಗೆ ವಾಟ್ಸಾಪ್ ಬ್ಯುಸಿನೆಸ್ ಆಪ್ ಬಳಸಲು ಅಥವಾ ಅದರ ವೈಶಿಷ್ಟ್ಯ ಪಡೆಯಲು ಬಳಕೆದಾರರು ಹಣ ಪಾವತಿಸಬೇಕಾಗಿರಲಿಲ್ಲ. ಆದರೆ, WABetaInfo ಪ್ರಕಾರ, ಇದೀಗ ಹಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು WhatsApp ಬ್ಯುಸಿನೆಸ್ ಅಪ್ಲಿಕೇಷನ್‌ನಲ್ಲಿ ತರಲಾಗುತ್ತಿದ್ದು, ಈ ವೈಶಿಷ್ಟ್ಯಗಳನ್ನು ಬಳಸಿಕೊಳ್ಳಲು ಬಳಕೆದಾರರು ಹಣ ಪಾವತಿಸಬೇಕಾಗುತ್ತದೆ.

ದೊರೆತಿರುವ ಮಾಹಿತಿ ಪ್ರಕಾರ, ಹೀಗೆ ಹಣವನ್ನು ಪಾವತಿಸಿ ಪಡೆಯುವ WhatsApp ಬ್ಯುಸಿನೆಸ್ ಅಪ್ಲಿಕೇಷನ್‌ನಲ್ಲಿ ಹತ್ತು ಸಾಧನಗಳನ್ನು ಒಮ್ಮೆಲೇ ಲಿಂಕ್ ಮಾಡಬಹುದಾದ ಆಯ್ಕೆಯು ಇರುತ್ತದೆಯಂತೆ. ಒಂದೇ ಬ್ಯುಸಿನೆಸ್ ಅಕೌಂಟ್ ಅನ್ನು ಹತ್ತು ಜನರು ಏಕಕಾಲದಲ್ಲಿ ಬಳಸಬಹುದಂತೆ ಮತ್ತು ಇದರ ಸಹಾಯದಿಂದ ಹೆಚ್ಚು ಗ್ರಾಹಕರನ್ನು ಸೆಳೆಯಬಹುದು ಎಂದು ಹೇಳಲಾಗಿದೆ. ಅಲ್ಲದೆ, ವಾಟ್ಸಾಪ್‌ ಪ್ರೀಮಿಯಂನಲ್ಲಿ ಬಳಕೆದಾರರು URL ಗಳನ್ನು ಸೌಲಭ್ಯವನ್ನು ಸಹ ಪಡೆಯಬಹುದು.