ಇಂದು ಸಾರ್ವಜನಿಕರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಪ್ರತಿ ಸಿಲಿಂಡರ್ ಬೆಲೆಯಲ್ಲಿ 115.50 ರೂಪಾಯಿಗಳ ಇಳಿಕೆ ಕಂಡಿದೆ. ಇದರಿಂದಾಗಿ 7ನೇ ಬಾರಿ ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ ಇಳಿಕೆಯಾದಂತಾಗಿದ್ದು, 19 ಕೆಜಿ ಸಿಲಿಂಡರ್ ಬೆಲೆಯಲ್ಲಿ ಈವರೆಗೆ 610 ರೂಪಾಯಿಗಳು ಕಡಿಮೆಯಾದಂತಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾತೈಲದ ಬೆಲೆ ಏರಿಳಿತದಿಂದಾಗಿ ಸಿಲಿಂಡರ್ ಬೆಲೆಯಲ್ಲೂ ಇಳಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈಗ 19 ಕೆಜಿ ಸಿಲಿಂಡರ್ ಬೆಲೆ 1,859 ರೂಪಾಯಿಗಳ ಬದಲಿಗೆ 1,744 ರೂಪಾಯಿಗಳಾಗಿದೆ.
ಇಂದಿನಿಂದ ದೆಹಲಿಯಲ್ಲಿ 19 ಕೆಜಿ ಇಂಡೇನ್ ವಾಣಿಜ್ಯ ಸಿಲಿಂಡರ್ ಬೆಲೆ 115.5 ರೂ., ಕೋಲ್ಕತಾದಲ್ಲಿ 113 ರೂ., ಮುಂಬೈನಲ್ಲಿ 115.5 ರೂ., ಚೆನ್ನೈನಲ್ಲಿ 116.5 ರೂ. ಇಳಿಕೆಯಾಗಿದೆ. ಇದಕ್ಕೂಮೊದಲುಅಕ್ಟೋಬರ್ 1 ರಂದು, ಈ ಸಿಲಿಂಡರ್ ಬೆಲೆ 25 ರೂ. ಗಳಷ್ಟುಕಡಿಮೆಮಾಡಲಾಗಿತ್ತು. 14.2 ಕೆಜಿ ತೂಕದ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಹಳೆಯ ಬೆಲೆಯಲ್ಲಿ ಲಭ್ಯವಾಗಿದೆ.