ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ. ಅವರೀಗ ಕಡಿಮೆ ಬಡ್ಡಿ ಮನೆ ನಿರ್ಮಾಣ ಮುಂಗಡದ (ಎಚ್ ಬಿಎ) ಪ್ರಯೋಜನ ಪಡೆಯಬಹುದು. ಈ ಸೌಲಭ್ಯ 2023ರ ಮಾರ್ಚ್ 31ರ ತನಕ ಇರಲಿದೆ. ಎಚ್ ಬಿಎ ಪ್ರಸ್ತುತ ಬಡ್ಡಿದರ ಶೇ.7.1 ಆಗಿದೆ. ಕಚೇರಿ ಜ್ಞಾಪನಾ ಪತ್ರದ ಮೂಲಕ ಎಚ್ ಬಿಎ ಬಡ್ಡಿದರವನ್ನು ಶೇ.7.1ಕ್ಕೆ ತಗ್ಗಿಸಿರುವ ಮಾಹಿತಿಯನ್ನು ಗೃಹ ಹಾಗೂ ನಗರ ವ್ಯವಹಾರಗಳ ಸಚಿವಾಲಯ 2022ರ ಏಪ್ರಿಲ್ 1ರಂದು ತಿಳಿಸಿತ್ತು. 7ನೇ ವೇತನ ಆಯೋಗದ ಶಿಫಾರಸ್ಸುಗಳ ಅನ್ವಯ ಕೇಂದ್ರ ಸರ್ಕಾರಿ ನೌಕರರಿಗೆ ಎಚ್ ಬಿಎ ನೀಡಲಾಗುತ್ತಿದೆ. ಎಚ್ ಬಿಎ ನಿಯಮಗಳ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ವಿವಿಧ ಉದ್ದೇಶಗಳಿಗೆ ಬಡ್ಡಿಸಹಿತ ಮುಂಗಡಗಳನ್ನು ಪಡೆಯಬಹುದು. ಮನೆಯ ವಿಸ್ತರಣೆ, ಹೊಸ ಮನೆ ನಿರ್ಮಾಣ, ಮನೆ ನಿರ್ಮಾಣಕ್ಕೆ ನಿವೇಶನ ಖರೀದಿ, ಈಗಾಗಲೇ ನಿರ್ಮಿಸಿರುವ ಮೆ ಅಥವಾ ಫ್ಲ್ಯಾಟ್ ಖರೀದಿ ಇತ್ಯಾದಿಗಳಿಗೆ ಬಡ್ಡಿಸಹಿತ ಮುಂಗಡ ಪಡೆಯಬಹುದು.

RELATED ARTICLES  WhatsApp ನಿಂದ ವಿಶೇಷ ಫ್ಯೂಚರ್...! ಅದೇನು ಗೊತ್ತಾ?

ಈ ಸೌಲಭ್ಯದಡಿಯಲ್ಲಿ ಉದ್ಯೋಗಿಗಳು 34 ತಿಂಗಳ ಮೂಲ ವೇತನ ಅಥವಾ ಒಟ್ಟು ವಿಸ್ತರಣೆ ವೆಚ್ಚವಾಗಿ 10ಲಕ್ಷ ರೂ. ತನಕ ಪಡೆಯಬಹುದು. ಒಂದು ವೇಳೆ ಮನೆ ಅಥವಾ ಫ್ಲ್ಯಾಟ್ 25ಲಕ್ಷ ರೂ.ಗಿಂತ ಕಡಿಮೆ ಮೊತ್ತದಾಗಿದ್ರೆ, ಆಗ ಉದ್ಯೋಗಿಗಳು ಕನಿಷ್ಠ ಮೊತ್ತವನ್ನು ಎಚ್ ಬಿಎ ಆಗಿ ಪಡೆಯಲು ಅರ್ಹತೆ ಹೊಂದಿದ್ದಾರೆ. ಸಾಲ ಅಥವಾ ಸರ್ಕಾರ, ಹುಡ್ಕೋ ಅಥವಾ ಖಾಸಗಿ ಮೂಲಗಳಿಂದ ಪಡೆದ ಮುಂಗಡದ ಮರುಪಾವತಿಗೆ ಎಚ್ ಬಿಎ ಬಳಸಬಹುದು.

ಎಚ್ ಬಿಎ ಪಡೆಯಲು ಕೆಲವೊಂದು ನಿಯಮಗಳಿವೆ ಕೂಡ. ಜಮೀನು ಅಥವಾ ಮನೆ ನಿರ್ಮಾಣದ ವೆಚ್ಚ, ಗ್ರಾಮೀಣ ಪ್ರದೇಶದಲ್ಲಿ ಮನೆ ವಿಸ್ತರಣೆ ಒಟ್ಟು ವೆಚ್ಚದ ಶೇ.80ರಷ್ಟನ್ನು ಮಾತ್ರ ಮುಂಗಡವಾಗಿ ನೀಡಲಾಗುತ್ತದೆ. ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಅನ್ವಯ ಎಚ್ ಬಿಎಗೆ ಅರ್ಹತೆ ಪಡೆಯಲು ಕೇಂದ್ರ ಸರ್ಕಾರಿ ನೌಕರರು ನಿರಂತರ ಸೇವೆ ಸಲ್ಲಿಸಬೇಕಾದ ಅವಧಿಯನ್ನು 10 ವರ್ಷಗಳಿಂದ ಐದು ವರ್ಷಗಳಿಗೆ ಇಳಿಕೆ ಮಾಡಲಾಗಿದೆ.

RELATED ARTICLES  ಜಿಯೋ ದ ಈ ಎರಡು ರೀಚಾರ್ಜಗಳು ಇನ್ನು ಬಂದ್...!

ಇನ್ನು ಈಗಾಗಲೇ ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ಈಗಾಗಲೇ ಗೃಹ ಸಾಲ ಪಡೆವರು ಕೂಡ ಈ ಯೋಜನೆಯ ಪಡೆಯಬಹುದು ಎಂದು ಏಳನೇ ವೇತನ ಆಯೋಗ ತಿಳಿಸಿದೆ. ಒಂದು ವೇಳೆ ಪತಿ ಹಾಗೂ ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದರೆ ಎಚ್ ಬಿಎ ಅವರಿಬ್ಬರಿಗೂ ಪ್ರತ್ಯೇಕವಾಗಿ ಅನ್ವಯಿಸಲಿದೆ.

ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಅನ್ವಯ ಕೇಂದ್ರ ಸರ್ಕಾರಿ ಉದ್ಯೋಗಿಗಳು ಮೂಲವೇತನದ 34 ಪಟ್ಟು ಅಥವಾ 25ಲಕ್ಷ ರೂ. ಅಥವಾ ಮನೆಯ ಅಂದಾಜು ಮೌಲ್ಯ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಮೊತ್ತದ ಎಚ್ ಬಿಎ ಪಡೆಯಲು ಅರ್ಹತೆ ಹೊಂದಿರುತ್ತಾರೆ.