ಮನುಷ್ಯ ಎಂದ ಮೇಲೆ ಒಂದು ಉದ್ಯೋಗ ಮಾಡುವುದು ತಿಳಿದಿರುವುದೆ. ಅದು ಯಾವ ರೀತಿಯದೇ ಉದ್ಯೋಗ ಆಗಿರಲಿ ಆ ಉದ್ಯೋಗ ಮಾಡುವುದು ಗೇಣು ಹೊಟ್ಟೆಗಾಗಿ, ಹಾಕುವ ಬಟ್ಟೆಗಾಗಿ, ಮಲಗುವ ಸೂರಿಗಾಗಿ ಆನಂತರ ಬದುಕಿಗೆ ಬೇಕಾಗುವ ಕೆಲವು ವಸ್ತುಗಳ ಜೊತೆ ಹಣ ಕೂಡಿಕೆ ಆದಂತೆ ಐಷಾರಾಮಿ ಬದುಕು ಕಟ್ಟಿಕೊಳ್ಳುತ್ತ ಸಾಗುತ್ತೇವೆ. ಆ ಬದುಕು ಕಟ್ಟಿಕೊಳ್ಳಲು ವಿದ್ಯೆ ಕಲಿಯುತ್ತಾರೆ. ಎಲ್ಲರಿಗೂ ವಿದ್ಯೆ ತಲೆಗೆ ಹತ್ತುವುದಿಲ್ಲ. ಕೆಲವರಿಗೆ ವಿದ್ಯೆ ಕಲಿಯುವ ಅವಕಾಶ ಇರುವುದಿಲ್ಲ. ಕೆಲವರಿಕೆ ಸಾಕಷ್ಟು ವಿದ್ಯೆ ಕಲಿತರೂ ಸಹ ಉದ್ಯೋಗ ಸಿಗುವುದಲ್ಲ. ದಿನದ ಖರ್ಚಿಗೂ ಆರ್ಥಿಕ ಅನಾನೂಕೂಲತೆ ಪ್ರಾರಂಭವಾದಾಗ ಹಿಡಿಯುವ ಹಾದಿಯೇ ಸುಳ್ಳು ಹೇಳುವಿಕೆ ಕಳ್ಳತನ ಮಾಡುವುದು ಇತ್ಯಾದಿ ಕ್ರೀಯೆಗಳಿಗೆ ತೊಡಗುತ್ತಾರೆ.
ಇಂತಾದ್ದೆ ಪರಿಸ್ಥಿತಿಯಲ್ಲಿ ಹಲವರಿದ್ದು ಅವರಿಗೂ ಮುಂದುವರೆಯುವುದು ಹೇಗೆಂಬ ಚಿಂತೆಯಲ್ಲಿದ್ದಾಗಲೇ ದೋಸ್ತಿಯಾಗುವುದು. ಅವರ ನಿತ್ಯದ ಬೇಡಿಕೆಗೂ ಹಣದ ಕೊರತೆಯಾದಾಗ ಸಣ್ಣ ಸಣ್ಣ ಕಳ್ಳತನ ಸುಳ್ಳು ಪ್ರಾರಂಭವಾಗುವುದು. ಅಲ್ಲಿಂದ ಕಳ್ಳ ತನ ಎನ್ನುವುದು ಮಾಮೂಲಿ ಎನ್ನಿಸಿ ಹೋಗುವುದು. ಯಾರಿಗೂ ತೊಂದರೆ ಆಗಬಾರದೆಂದು ಸುಳ್ಳು ಹೇಳುವುದು ಬೇರೆ. ಆದರೆ ಕಳ್ಳತನಕ್ಕಾಗಿ ಸುಳ್ಳು ಪ್ರಾರಂಭವಾಗುತ್ತದೆ. ಅದು ಕಳ್ಳತನ ಯಾವ ಮಟ್ಟಕ್ಕಾದರೂ ತಿರುಗಬಹುದು.
ಇನ್ನು ಕೆಲವರಲ್ಲಿ ಕಳ್ಳತನ ಮಾಡಿ ಜಯಿಸಲು ಸಾಧ್ಯವಾಗುವುದಿಲ್ಲ. ಅಥವಾ ಕಳ್ಳತನ ಮಾಡಲು ಮನಸಿರುವುದಿಲ್ಲ. ಈ ಕಾರಣದಿಂದ ಕಳ್ಳತನಕ್ಕಿಂತ ಬೇಡಿವಿದು ಲೇಸು ಎಂದು ಭಿಕ್ಷಾಟನೆಗೆ ಇಳಿಯುತ್ತಾರೆ. ಭಿಕ್ಷೆ ಬೇಡಲು ಕೂಡ ಧೈರ್ಯ ಬೇಕು, ತಾಳ್ಮೆ ಸಹನೆ ಬೇಕು. ‘ಅಮ್ಮಾ ತಾಯಿ’ ಎಂದ ತಕ್ಷಣ ಯಾರೂ ಭಿಕ್ಷೆ ಹಾಕಿ ಬಿಡುವುದಿಲ್ಲ. ಕೆಲವರು ಹೀಯಾಳಿಸುತ್ತಾರೆ. ಕೆಲವರು ಇಷ್ಟು ಗಟ್ಟಿ ದೇಹವಿದ್ದು ದುಡಿಯಲು ಏನು ರೋಗ ಎಂದು ಮೂದಲಿಸುತ್ತಾರೆ. ಕೆಲವರಿಗೆ ಭಿಕ್ಷುಕರನ್ನು ಕಂಡಾಗ ವಾಕರಿಕೆ ಬಂದಂತೆ ಮಾಡಿ ಅಸಹ್ಯ ಎಂದು ಮೈ ಕುಡುಗುತ್ತಾರೆ. ಇಂತಹ ಅವಮಾನದ ಜೊತೆ ಕೆಲವು ಬಾರಿ ಹೊಡೆತ ಬೀಳುವ ಸಂದರ್ಭವೂ ಇರುತ್ತದೆ. ಇದೆಲ್ಲವನ್ನು ಸಹಿಸುವುದು ಕಳ್ಳತನ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿಂತ ಬೇಡಿ ತಿನ್ನುವುದು ಉತ್ತಮ ಎಂದು.
ಇನ್ನು ಕೆಲವರಿಗೆ ಮಧ್ಯಂತರ ಕಷ್ಟ ಬಂದು ಬಿಡುತ್ತದೆ. ಆಗ ಅವರು ಕಳ್ಳತನ ಮತ್ತು ಭಿಕ್ಷೆಗಿಂತ ಇಷ್ಟು ದಿನದ ಮರ್ಯಾದಿಯುತ ಬಾಳು ಕಳೆದು ಹೋಗಿದೆ. ಇನ್ನು ಬೇಡುವುದಕ್ಕಿಂತ ಹಸಿದು ಸಾಯುವುದು ಉತ್ತಮ ಎಂದು ನಿರ್ಧರಿಸುತ್ತಾರೆ ಆದರೆ ಈ ರೀತಿಯ ಯೋಚನೆ ಮಾಡುವುದು ಕೇವಲ ಲಕ್ಷ ಸಾವಿರಕ್ಕೆ ಒಬ್ಬರು ಸಿಗಬಹುದೆನೋ. ಆದರೆ ಮನುಷ್ಯ ಸೋತು ನಿಂತಾಗ ಬದುಕಿಗಾಗಿ ಎರಡನೇಯ ಆಯ್ಕೆಯೇ ಅವನನಿಗೆ ಹೆಚ್ಚಿನ ಆಸರೆ ನೀಡುತ್ತದೆ. ತಾನಾಗಿಯೇ ಸಿಕ್ಕ ನುಷ್ಯ ಜನ್ಮವನ್ನು ಕಳೆದುಕೊಳ್ಳಲು ಇಷ್ಟವಿಲ್ಲದೇ ಹೊಟ್ಟೆ ತುಂಬಿಸಲು ಭಿಕ್ಷೆ ಬೇಡುತ್ತಾರೆ.
ಮನುಷ್ಯ ಎಣಿಸಿದಂತೆ ಜೀವನ ಸಾಗುವುದಿದ್ದರೆ ಯಾರು ಬಡತನ, ಕಷ್ಟ, ದುಃಖ ಎಂದು ಮೊರೆಯಿಡುತ್ತಿರಲಿಲ್ಲ. ಕಳ್ಳತನ ಮತ್ತು ಭಿಕ್ಷೆ ಬೇಡುವುದಕ್ಕಿಂತ ಸಾಯುವುದು ಲೇಸು ಎಂದು ಹೇಳುವುದು ಸುಲಭವ ಹೊರತು ಅದನ್ನು ಆಚರಣೆಗೆ ತರುವುದು ಕಷ್ಟ. ಹಸಿವು ಹೆಚ್ಚಾದಂತೆ ಕೈ ಬೇಡುತ್ತದೆ. ಸಾವು ಅಂತ್ಯ ಎಂದು ಭಾವಿಸುವ ಮನುಷ್ಯ ಇರುವುದು ಹೀಗೆ. ದೇಹ ನಶ್ವರ ಎಂದು ಆಧ್ಯಾತ್ಮ ಎಂದು ಅರ್ಥವಾದಾಗ ಆತ ಬೇಡುವುದು ಇಲ್ಲ ಸುಳ್ಳು ಕಳ್ಳತನ ಮಾಡುವುದು ಇಲ್ಲ. ಆತ ತಿರುಕನಾಗಿ ಬಿಟ್ಟಿರುತ್ತಾನೆನೋ. ಅದೇನೇ ಇರಲಿ ಒಮ್ಮೆ ಯೋಚಿಸಿದರೆ ಮೋಸ, ಸುಳ್ಳು, ಕಳ್ಳತನ ಮಾಡುವುದಕ್ಕಿಂತ ಬೇಡಿ ತಿನ್ನುವುದು ಒಳಿತು ಎನ್ನಿಸುತ್ತದೆ ಅಲ್ಲವೇ!