ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಸಾಕಷ್ಟು ಜನಪ್ರಿಯವಾಗಿದೆ. ಫೋನ್‌ಪೇ, ಗೂಗಲ್‌ ಪೇ, ಪೇಟಿಎಂ ಸೇರಿದಂತೆ ಹಲವು ಯುಪಿಐ ಆಯಪ್‌ಗಳು ಸುಲಭವಾಗಿ ಹಣ ಪಾವತಿ ಮಾಡುವುದಕ್ಕೆ ಸಹಕಾರಿಯಾಗಿವೆ. ಯುಪಿಐ ಆಧಾರಿತ ನಗದು ವರ್ಗಾವಣೆ ವ್ಯವಸ್ಥೆ ಜನಪ್ರಿಯವಾದಂತೆ ಆರ್‌ಬಿಐ ಕೂಡ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.

ಈ ಮೂಲಕ ಯುಪಿಐ ಆಯಪ್‌ ಬಳಸುವ ಗ್ರಾಹಕರಿಗೆ ಸುರಕ್ಷತೆ ಮತ್ತು ಇನ್ನಷ್ಟು ಅನುಕೂಲಕರ ವ್ಯವಸ್ಥೆ ಕಲ್ಫಿಸಲು ಮುಂದಾಗಿದೆ. ಅದರಂತೆ ಆರ್‌ಬಿಐ ಇದೀಗ ಹೊಸ ಫೀಚರ್ಸ್‌ ಪರಿಚಯಿಸಿದೆ.

ಆರ್‌ಬಿಐ ಯುಪಿಐ ಆಯಪ್‌ಗಳನ್ನು ಬಳಸುವವರಿಗೆ ಹೊಸ ಫೀಚರ್ಸ್‌ ಪರಿಚಯಿಸಿದೆ. ಅದರಂತೆ ಸರಕು ಮತ್ತು ಸೇವೆಗಳ ಪಾವತಿ ಅನುಕೂಲವಾಗುವ ಹೊಸ ಅಂಶವನ್ನು ಸೇರಿಸಲು ಮುಂದಾಗಿದೆ. ಇದಕ್ಕಾಗಿ ಯುಪಿಐನಲ್ಲಿ ಸಿಂಗಲ್‌-ಬ್ಲಾಕ್- ಮತ್ತು- ಮಲ್ಟಿಪಲ್ -ಡೆಬಿಟ್ ಫಂಕ್ಷನ್‌ ಅನ್ನು ಪರಿಚಯಿಸಲಿದೆ. ಇದರಿಂದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮತ್ತು ಸೆಕ್ಯುರಿಟಿಗಳಲ್ಲಿನ ಹೂಡಿಕೆಗಳಿಗೆ ಪಾವತಿ ಮಾಡುವುದಕ್ಕೆ ಸುಲಭ ಅವಕಾಶ ನೀಡಲಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಹಾಗಾದ್ರೆ ಆರ್‌ಬಿಐ ಪರಿಚಯಿಸಿರುವ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

RELATED ARTICLES  ಸ್ಮಾರ್ಟ್​ ಟಿವಿಗಳಿಗೂ ಬರಲಿದೆ ಶಾರ್ಟ್​ ವಿಡಿಯೋ

ಆರ್‌ಬಿಐನ ಹೊಸ ಫೀಚರ್ಸ್‌ ಉದ್ದೇಶ ಏನು?

ಡಿಜಿಟಲ್‌ ಪಾವತಿ ವ್ಯವಸ್ಥೆ ಬಳಸುವವರಿಗೆ ಇದು ಅನುಕೂಲಕರವಾಗಿದೆ. ಇದರಿಂದ ಸಿಂಗಲ್‌ ಬ್ಲಾಕ್‌ ಮತ್ತು ಮಲ್ಟಿಪಲ್‌ ಡೆಬಿಟ್‌ ಅನ್ನು ಬಹಳ ವಿಶ್ವಾಸಯುತವಾಗಿ ನಡೆಸಬಹುದಾಗಿದೆ. ಕಡ್ಡಾಯವಾಗಿ ನೀವು ಮಾಡಲೇಬೇಕಾದ ಪಾವತಿಗಳಿಗಾಗಿ ಒಂದಿಷ್ಟು ಹಣವನ್ನು ತೆಗೆದಿರಿಸಲು ಇದು ಸಹಾಯಮಾಡಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ. ಇದರಿಂದ ವಹಿವಾಟುಗಳನ್ನು ನಡೆಸುವ ಗ್ರಾಹಕರಿಗೆ ಹೆಚ್ಚಿನ ನಂಬಿಕಯನ್ನು ಉಳಿಸಲು ಅವಕಾಶ ನೀಡಲಿದೆ.

ಹೇಗೆ ಕಾರ್ಯನಿರ್ವಹಿಸಲಿದೆ?

ಆರ್‌ಬಿಐ ಹೇಳಿರುವಂತೆ ಯುಪಿಐ ಆಯಪ್‌ಗಳ ಮೂಲಕ ನೀವು ಇ-ಕಾಮರ್ಸ್‌, ಹೋಟೆಲ್‌ ಬುಕಿಂಗ್‌, ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ಇದಕ್ಕಾಗಿಯೇ ಒಂದಿಷ್ಟು ಹಣವನ್ನು ಪೂರ್ವ ನಿರ್ಧರಿತವಾಗಿ ಒಂದೆಡೆ ಇಡಲಿದೆ. ಇದರಿಂದ ನೀವು ಸಕಾಲಿಕ ಪಾವತಿಗಳನ್ನು ಮಾಡಬಹುದಾಗಿದೆ. ಆದರೆ ಸರಕುಗಳು ಅಥವಾ ಸೇವೆಗಳ ನಿಜವಾದ ವಿತರಣೆಯವರೆಗೆ ಹಣವು ಗ್ರಾಹಕರ ಖಾತೆಯಲ್ಲಿಯೇ ಇರಲಿದೆ ಅನ್ನೊದು ಆರ್‌ಬಿಐ ಗವರ್ನರ್‌ ಅವರ ವಾದವಾಗಿದೆ.
ಅಂದರೆ ಇ-ಕಾಮರ್ಸ್ ಖರೀದಿಗಳು, ಹೋಟೆಲ್ ಬುಕಿಂಗ್ ಅಥವಾ ಸೆಕ್ಯುರಿಟಿಗಳಲ್ಲಿನ ಹೂಡಿಕೆಗಳಂತಹ ಸರಕು ಮತ್ತು ಸೇವೆಗಳ ವಿತರಣೆಗಳಿಗೆ ಪಾವತಿ ಮಾಡಲು ಇದು ಸಹಾಯ ಮಾಡಲಿದೆ. ಇದಕ್ಕಾಗಿಯೇ ‘ಸಿಂಗಲ್-ಬ್ಲಾಕ್-ಮತ್ತು-ಮಲ್ಟಿಪಲ್ ಡೆಬಿಟ್’ ಫೀಚರ್ಸ್‌ ನೀಡಲಾಗಿದೆ. ಇದರ ಮೂಲಕ ವಹಿವಾಟುಗಳನ್ನು ನಡೆಸುವಾಗ ಗ್ರಾಹಕರು ಹೆಚ್ಚಿನ ವಿಶ್ವಾಸವನ್ನು ಹೊಂದಿರುತ್ತಾರೆ.

RELATED ARTICLES  ಇನ್ನೊಂದು ಮಹತ್ತರ ಉದ್ಯಮಕ್ಕೆ ಕಾಲಿಟ್ಟ ಶ್ರೀಕುಮಾರ ಸಮೂಹ ಸಂಸ್ಥೆ : ಸಾರಿಗೆ ಸೇವೆಯ ಜೊತೆಗೆ, ವಸತಿಯ ವ್ಯವಸ್ಥೆಯವರೆಗೆ : ಪುಟ್ಟಣ್ಣನ ಅಪ್ರತಿಮ ಸಾಧನೆ.

ಆರ್‌ಬಿಐ

ಇದಲ್ಲದೆ ಆರ್‌ಬಿಐನ ರಿಟೇಲ್‌ ಡೈರೆಕ್ಟ್‌ ಯೋಜನೆಯನ್ನು ಬಳಸಿಕೊಂಡು ಸರ್ಕಾರಿ ಭದ್ರತೆಗಳನ್ನು ಖರೀದಿಸಲು ಈ ಫೀಚರ್ಸ್‌ ಸಹಾಯಕವಾಗಲಿದೆ ಎಂದು ಗವರ್ನರ್ ಹೇಳಿದ್ದಾರೆ. ಇನ್ನು enhancement ಅನ್ನು ಜಾರಿಗೆ ತರಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ ಪ್ರತ್ಯೇಕ ಸೂಚನೆ ನೀಡುವುದಾಗಿ ಆರ್‌ಬಿಐ ಹೇಳಿದೆ. ಇದಲ್ಲದೆ ಎಲ್ಲಾ ಪಾವತಿಗಳು ಮತ್ತು ಸಂಗ್ರಹಣೆಗಳನ್ನು ಸೇರಿಸಲು ಭಾರತ್ ಬಿಲ್ ಪಾವತಿ ವ್ಯವಸ್ಥೆ ವ್ಯಾಪ್ತಿಯಲ್ಲಿ ವಿಸ್ತರಣೆಯನ್ನು ಸಹ ಘೋಷಿಸಲಾಗಿದೆ.

BBPS

ಇನ್ನು BBPS ಪುನರಾವರ್ತಿತವಲ್ಲದ ಪಾವತಿಗಳನ್ನು ಅಥವಾ ವ್ಯಕ್ತಿಗಳ ಸಂಗ್ರಹಣೆ ಅಗತ್ಯಗಳನ್ನು ಪ್ರಕ್ರಿಯೆಗೊಳಿಸಲು ಸೌಲಭ್ಯವನ್ನು ಹೊಂದಿಲ್ಲ ಎನ್ನಲಾಗಿದೆ. ಇದು ವೃತ್ತಿಪರ ಸೇವಾ ಶುಲ್ಕ ಪಾವತಿಗಳು, ಶಿಕ್ಷಣ ಶುಲ್ಕಗಳು, ತೆರಿಗೆ ಪಾವತಿಗಳು, ಬಾಡಿಗೆ ಸಂಗ್ರಹಣೆಗಳಿಂದ ಹೊರಗಿದೆ. ಈ ಹೊಸ ವ್ಯವಸ್ಥೆಯು ಪಾರದರ್ಶಕ ಮತ್ತು ಏಕರೂಪದ ಪಾವತಿಗಳ ಅನುಭವ, ನಿಧಿಗಳಿಗೆ ತ್ವರಿತ ಪ್ರವೇಶ ಮತ್ತು ಸುಧಾರಿತ ದಕ್ಷತೆಯಿಂದ ಪ್ರಯೋಜನ ಪಡೆಯುವುದಕ್ಕೆ ಅವಕಾಶ ನೀಡಲಿದೆ.

Source : Mutthuraju H M Gizbot