ನವದೆಹಲಿ: ಶೇ.100ರಷ್ಟು ಸಂಪೂರ್ಣ ಸ್ವದೇಶಿ ನಿರ್ಮಿತ ಇಯರ್ಬಡ್ ಅನ್ನು ಮಿವಿ ಸಂಸ್ಥೆ ಬಿಡುಗಡೆ ಮಾಡಿದ್ದು, ಇದರ ಬೆಲೆ ಕೇವಲ 999 ರೂಪಾಯಿ ಎನ್ನಲಾಗಿದೆ.
ಹೈದ್ರಾಬಾದ್ ಮೂಲದ ಸ್ವದೇಶಿ ಕಂಪನಿಯಾಗಿರುವ ಮಿವಿ ಕಂಪನಿ ಮಾರುಕಟ್ಟೆಗೆ ಇಯರ್ ಬಡ್ ಗಳನ್ನು ಬಿಡುಗಡೆ ಮಾಡಿದೆ. ಉತ್ತಮ ಸಂಪರ್ಕಕ್ಕಾಗಿ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಮಿವಿ ಡ್ಯುಪಾಡ್ಸ್ F60 ಡ್ಯುಯಲ್ ನಲ್ಲಿ ಮೈಕ್ ಅನ್ನು ಹೊಂದಿದೆ. ಈ ಮಿವಿ ಇಯರ್ಬಡ್ಗಳೊಂದಿಗೆ ಅಮೆಜಾನ್ ಅಲೆಕ್ಸಾ, ಆ್ಯಪಲ್ ಸಿರಿ ಮತ್ತು ಗೂಗಲ್ ಅಸಿಸ್ಟಂಟ್ ಸಹ ಬೆಂಬಲಿಸುತ್ತದೆ. ನಿಯಂತ್ರಣಕ್ಕಾಗಿ ಮಿವಿ ಡ್ಯುಪಾಡ್ಸ್ F60 ನಲ್ಲಿ ಟಚ್ ಬೆಂಬಲವಿದೆ. ವೈರ್ಲೆಸ್ ಗ್ಯಾಜೆಟ್ ಗಳಲ್ಲಿ ಮಿವಿ ಸಂಸ್ಥೆಯ ಇಯರ್ಬಡ್ ಗಳ ಬೆಲೆ ತುಂಬಾ ಅಗ್ಗ ಎನ್ನಲಾಗಿದೆ.
ಮಿವಿ ಡ್ಯುಪಾಡ್ಸ್ F60 13 ಎಂಎಂ ಎಲೆಕ್ಟ್ರೋ-ಡೈನಾಮಿಕ್ ಡ್ರೈವರ್ನಿಂದ ಚಾಲಿತವಾಗಿದ್ದು ಅದು ಸ್ಟುಡಿಯೋ ಗುಣಮಟ್ಟದ ಆಡಿಯೊವನ್ನು ಬಳಕೆದಾರರಿಗೆ ನೀಡಲಿದೆ. ಇದರೊಂದಿಗೆ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ENC) ಕೂಡ ಇದೆ. ಮಿವಿ ಡ್ಯುಯೊಪಾಡ್ಗಳನ್ನು ದೀರ್ಘಕಾಲದವರೆಗೆ ಬಳಸಲು ಸಾಕಷ್ಟು ಹಗುರವಾಗಿ ವಿನ್ಯಾಸಗೊಳಿಸಲಾಗಿದೆ.
ಮಿವಿ ಡ್ಯುಪಾಡ್ಸ್ F60 ನ ಬ್ಯಾಟರಿಯು 50 ಗಂಟೆಗಳ ಬ್ಯಾಕಪ್ ಹೊಂದಿದೆ ಎಂದು ಹೇಳಲಾಗಿದೆ. ಇದು ಚಾರ್ಜ್ ಮಾಡಲು ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಮಿವಿ ಡ್ಯುಪಾಡ್ಸ್ F60 ನೀರು ನಿರೋಧಕಕ್ಕಾಗಿ IPX4 ಎಂದು ರೇಟ್ ನೀಡಲಾಗಿದೆ. ಆದ್ದರಿಂದ ನೀರು ಅಥವಾ ಬೆವರು ತಾಕಿದರು ಪರಿಣಾಮ ಬೀರುವುದಿಲ್ಲ.
ಮಿವಿ ಡ್ಯುಪಾಡ್ಸ್ F60 ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ ಮತ್ತು ರೂ 999 ರ ಆರಂಭಿಕ ಬೆಲೆಯೊಂದಿಗೆ ಮಾರಾಟಕ್ಕೆ ಬಂದಿದೆ, ಬಳಿಕ ಇದರ ಬೆಲೆ 1,499 ರೂಪಾಯಿ ಆಗಲಿದೆ. ಮೊದಲ ಮಾರಾಟಕ್ಕೆ ಮಾತ್ರ 999 ಬೆಲೆ ಸೀಮಿತ. ಮಿವಿ ಡ್ಯುಪಾಡ್ಸ್ F60 ಹಸಿರು, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿರುತ್ತದೆ.
ಕೆಲವೇ ದಿನಗಳ ಹಿಂದೆ ಕಂಪನಿಯು ಮಿವಿ ಫೋರ್ಟ್ S60 ಮತ್ತು S100 ಅನ್ನು ಒಳಗೊಂಡಿರುವ ಎರಡು ಹೊಸ ಸೌಂಡ್ಬಾರ್ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಸೌಂಡ್ಬಾರ್ ವಿಭಾಗಕ್ಕೂ ಲಗ್ಗೆ ಇಟ್ಟಿತ್ತು. ಕಂಪನಿ ನೀಡಿರುವ ಮಾಹಿತಿ ಪ್ರಕಾರ, ಈ ಸೌಂಡ್ಬಾರ್ಗಳ 3,600 ಯುನಿಟ್ಗಳು ಮೊದಲ ದಿನದಲ್ಲಿ ಮಾರಾಟವಾಗಿವೆ ಎಂದು ಹೇಳಿದೆ.