ಹೋಂಡಾ ಆಕ್ಟಿವಾ ಈಗಾಗಲೇ ವಾಹನ ಪ್ರಿಯರ ಮನಗೆದ್ದಿದೆ. ಬಹುತೇಕ ಜನರು ಈ ದ್ವಿಚಕ್ರ ವಾಹನವನ್ನು ಖರೀದಿಸಿ ಬಳಸುತ್ತಿದ್ದಾರೆ. ಅಂದಹಾಗೆಯೇ ಹೋಂಡಾ ಕಂಪನಿ ಇದೀಗ ಆಕ್ಟಿವಾ 6ಜಿ ನವೀಕರಣವನ್ನು ಮಾಡಲು ಸಿದ್ಧತೆ ಮಾಡಿಕೊಂಡಿದೆ ಮತ್ತು ಇದೇ ಜನವರಿ 23ಕ್ಕೆ ಹೋಂಡಾ ಕಂಪನಿ ಸಿಹಿ ಸುದ್ದಿಯನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಹೊಸ ಹೋಂಡಾ ಆಕ್ಟಿವಾ ನವೀಕರಣ ಪಡೆಯುವ ಮೂಲಕ ಯಾವೆಲ್ಲಾ ಫೀಚರ್ಸ್ಗಳನ್ನು ತರಲಿದೆ ಎಂಬ ಬಗ್ಗೆ ಈಗಾಗಲೇ ಸುದ್ದಿ ಹರಿದಾಡುತ್ತಿದೆ.
ಅದರಲ್ಲೂ ಕಳ್ಳರಿಂದ ಎಚ್ಚರಿಕೆ ಸಂಗತಿಯನ್ನು ಸವಾರನಿಗೆ ಒದಗಿಸುವ ವ್ಯವಸ್ಥೆಯನ್ನು ಈ ಬಾರಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಫೀಚರ್ಸ್ ಹೊಸ ಹೋಂಡಾ ಆಕ್ಟಿವಾದಲ್ಲಿ ನಿಜವಾಗಿಯೂ ನೀಡಲಿದೆಯಾ ಎಂದು ಬಿಡುಗಡೆಯಾದ ಬಳಿಕ ತಿಳಿದುಬರಲಿದೆ.
ನೂತನ ಹೋಂಡಾ ಆಕ್ಟಿವಾದಲ್ಲಿ ಹೆಚ್-ಸ್ಮಾರ್ಟ್ ಫೀಚರ್ಸ್ ಬಗ್ಗೆ ಕೆಲಸ ಮಾಡುತ್ತಿದೆ ಮತ್ತು ಇದೇ ಮೊದಲ ಬಾರಿಗೆ ದ್ವಿಚಕ್ರ ವಾಹನದಲ್ಲಿ ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ.