ಹೊಸದಿಲ್ಲಿ: ಇತ್ತೀಚಿನ ಉದ್ಯೋಗ ಕಡಿತದ ಭಾಗವಾಗಿ Swiggy 380 ಉದ್ಯೋಗಿಗಳನ್ನು ವಜಾಗೊಳಿಸಿದ್ದು, ನೂರಾರು ಉದ್ಯೋಗಿಗಳನ್ನು ವಜಾಗೊಳಿಸುವ ತನ್ನ ಯೋಜನೆಯ ಕುರಿತು ಸಂತ್ರಸ್ತ ಉದ್ಯೋಗಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಿದೆ. ಉದ್ಯೋಗ ಕಡಿತದ ಕುರಿತು ಹಲವಾರು ಕಾರಣಗಳನ್ನು ನೀಡಿರುವ ಸ್ವಿಗ್ಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಹರ್ಷ ಮಜೇತಿ, ಮಾನವ ಸಂಪನ್ಮೂಲ ಕಡಿತಗೊಳಿಸುವ ಕಂಪನಿಯ ನಿರ್ಧಾರದ ಕುರಿತು ಕ್ಷಮೆ ಕೋರಿದ್ದಾರೆ ಎಂದು indiatoday.in ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀಹರ್ಷ ಮಜೇತಿ, “ಪುನಾರಚನೆ ಕ್ರಮದ ಭಾಗವಾಗಿ ನಮ್ಮ ತಂಡದ ಸದಸ್ಯರ ಸಂಖ್ಯೆಯನ್ನು ತಗ್ಗಿಸುವ ಕಠಿಣ ನಿರ್ಧಾರವನ್ನು ಜಾರಿಗೊಳಿಸುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ 380 ಸ್ವಿಗ್ಗಿ ಉದ್ಯೋಗಿಗಳಿಗೆ ವಿದಾಯ ಹೇಳುತ್ತಿದ್ದೇವೆ. ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಪರಿಶೀಲಿಸಿದ ನಂತರ ಕೈಗೊಂಡ ಅತ್ಯಂತ ಕಠಿಣ ನಿರ್ಧಾರ ಇದಾಗಿದೆ. ಈ ನಿರ್ಧಾರದಿಂದ ತೊಂದರೆಗೊಳಗಾಗಿರುವ ಪ್ರತಿಯೊಬ್ಬರಿಗೂ ನಾನು ಕ್ಷಮೆ ಕೋರುತ್ತೇನೆ” ಎಂದು ತಮ್ಮ ಇಮೇಲ್‌ನಲ್ಲಿ ತಿಳಿಸಿದ್ದಾರೆ.

RELATED ARTICLES  ಸ್ಮಾರ್ಟ್​ ಟಿವಿಗಳಿಗೂ ಬರಲಿದೆ ಶಾರ್ಟ್​ ವಿಡಿಯೋ

ಇಂತಹ ನಿರ್ಧಾರಕ್ಕೆ ತಾನು ತೀವ್ರ ಸ್ವರೂಪದ ಆರ್ಥಿಕ ಹಿಂಜರಿತ ಸವಾಲನ್ನು ಎದುರಿಸುತ್ತಿರುವುದು ಪ್ರಮುಖ ಕಾರಣ ಎಂದು ಸ್ವಿಗ್ಗಿ ಪ್ರತಿಪಾದಿಸಿದೆ. ಆಹಾರ ಪೂರೈಕೆಯ ಬೆಳವಣಿಗೆ ದರ ತಗ್ಗಿರುವ ಸಂಗತಿಯನ್ನು ಬಹಿರಂಗಪಡಿಸಿರುವ ಸ್ವಿಗ್ಗಿ, ಇದರಿಂದ ಲಾಭಾಂಶ ಮತ್ತು ಆದಾಯ ಕೂಡಾ ಕುಂಠಿತಗೊಂಡಿದೆ ಎಂದು ಹೇಳಿದೆ. ತಾನು ಸಾಕಷ್ಟು ಮೀಸಲು ನಗದು ಹೊಂದಿದ್ದೇನೆ ಎಂದು ಕಂಪನಿಯು ಪ್ರತಿಪಾದಿಸಿದ್ದರೂ, ಹೆಚ್ಚುವರಿ ನೇಮಕಾತಿಯ ಕಾರಣಕ್ಕೆ ಉದ್ಯೋಗ ಕಡಿತದ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಸ್ವಿಗ್ಗಿ ಸಿಇಒ ಶ್ರೀಹರ್ಷ ಮಜೇತಿ ಹೇಳಿದ್ದಾರೆ.

RELATED ARTICLES  ಫೇಕ್ ಫೇಸ್​ಬುಕ್​​ ಅಕೌಂಟ್​​ ನಂಬಿ ಲಕ್ಷ, ಲಕ್ಷ ಹಣ ಕಳೆದುಕೊಂಡ ಯುವಕ