ಕುಮಟಾ : ಕಳೆದ ಅನೇಕ ವರ್ಷಗಳಿಂದ ಕುಮಟಾದ ಜನರಿಗೆ ಅತ್ಯುತ್ತಮ ಸೇವೆ ನೀಡಿ ಜನ ಮಾನಸದಲ್ಲಿ ಅಚ್ಚಾಗಿರುವ,ಉದಯ ಬಜಾರ್ ನ ಸಾರಥ್ಯದಲ್ಲಿ ನೂತನ ಮಳಿಗೆ “ಉದಯ ಫ್ಯಾಷನ್ ವರ್ಡ್” ಇಂದು ಉದ್ಘಾಟನೆಗೊಂಡಿದೆ. ಅಗತ್ಯವಾದ ಎಲ್ಲ ವಿಧದ ವಸ್ತುಗಳನ್ನು ಗ್ರಾಹಕರಿಗೆ ನೀಡುತ್ತಿರುವ ಉದಯ ಬಜಾರ್ ಇದೀಗ ಫ್ಯಾಶನ್ ಜಗತ್ತಿಗೆ ತೆರೆದುಕೊಂಡಿದ್ದು, ಅಲಂಕಾರಿಕ ವಸ್ತುಗಳು ಹಾಗೂ ಅಲಂಕಾರಿಕ ಉಪಕರಣಗಳು, ಶಾಂಪು, ಸೋಪ್, ಗೊಂಬೆಗಳು, ಮಹಿಳೆಯರಿಗೆ ಅಲಂಕಾರಿಕ ವಸ್ತುಗಳು ಉದಯ ಫ್ಯಾಷನ್ ವರ್ಡ್ ನಲ್ಲಿ ಲಭ್ಯವಾಗಲಿದೆ. ಈ ಮಳಿಗೆಯನ್ನು ಜಯಲಕ್ಷ್ಮಿ ಎಸ್ ನಾಯ್ಕ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಡಾ. ಎ.ವಿ ಬಾಳಿಗಾ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ವೀಣಾ ಕಾಮತ್ ದೀಪ ಪ್ರಜ್ವಲನೆ ಮಾಡಿ ಮಾತನಾಡಿ, ಮಹಿಳೆಯರು ಹಾಗೂ ಸಾರ್ವಜನಿಕರು ಈ ಮಳಿಗೆಯ ಉಪಯೋಗ ಪಡೆಯುವಂತಾಗಲಿ. ಹೊಸ ಹೊಸ ವಿನ್ಯಾಸದ ವಸ್ತುಗಳು ಹಾಗು ಅಲಂಕಾರಿಕ ವಸ್ತುಗಳು ಲಭ್ಯವಾಗುತ್ತಿದ್ದು ಉದಯ ಬಜಾರ್ ನ ಈ ಪ್ರಯತ್ನಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದರು.
ಲೈನ್ಸ್ ಕ್ಲಬ್ ನ ಸದಸ್ಯರಾದ ವಿದ್ಯಾ ಶೇಟ್, ಉದಯಾ ಕಿಚ್ ನೆಕ್ಸ್ಟ್ ನ ಜಯಶೀಲಾ ಆರ್ ಬಂಗೇರಾ, ಕೆನರಾ ಬ್ಯಾಂಕ್ ಕುಮಟಾದ ನ ಮ್ಯಾನೇಜರ್ ಸುಚರಿತಾ ಕೆ. ಹಾಗೂ ಇತರರು ಹಾಜರಿದ್ದರು.
ಉದಯ ಕಿಚ್ ನೆಕ್ಸ್ಟ್ ಪ್ರೈ.ಲಿ ನ ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ ಎ. ಬಂಗೇರಾ ಉತ್ತರ ಕನ್ನಡದ ಜನರು ಈ ಹಿಂದಿನಿಂದಲೂ ನಮಗೆ ಅತ್ಯಂತ ಉತ್ತಮ ರೀತಿಯಿಂದ ಸ್ಪಂದಿಸುತ್ತಿದ್ದಾರೆ. ಅವರ ಇಷ್ಟು ವರ್ಷದ ಸ್ಪಂದನೆಗೆ ನಾವು ಕೃತಜ್ಞತೆ ಹೇಳಲೇಬೇಕು. ಇನ್ನು ಮುಂದೆಯೂ ಅವರಿಂದ ಎಲ್ಲ ರೀತಿಯ ಸಹಕಾರವನ್ನು ನಾವು ಬಯಸುತಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಜನವರಿ 26ರಿಂದ ಫೆಬ್ರವರಿ 5 ರ ವರೆಗೆ ವಿಶೇಷ ಆಫರ್ ಕೂಡ ನಡೆಯಲಿದ್ದು ನೂರು ರೂಪಾಯಿಗಿಂತ ಹೆಚ್ಚಿನ ಖರೀದಿಗೆ ಲಕ್ಕಿ ಕೂಪನ್ ನೀಡಲಾಗುತ್ತಿದೆ. ಕುಮಟಾದ ವರುಣ್ ಆರ್ಕೆಡ್ , ಹಳೆಯ ಬಸ್ ನಿಲ್ದಾಣ ರಸ್ತೆಯಲ್ಲಿರುವ ಉದಯ ಬಜಾರ್ ನ ಮಳಿಗೆಯಲ್ಲಿಯೇ “ಉದಯ ಫ್ಯಾಷನ್ ವರ್ಡ್” ಪ್ರತ್ಯೇಕ ಮಳಿಗೆಯಾಗಿ ತೆರೆದುಕೊಳ್ಳುತ್ತಿದೆ. ಪ್ರತಿಷ್ಠಿತ ಕಂಪನಿಗಳ ಕಾಸ್ಮೆಟಿಕ್ಸ್ ಗಳು, ಸುಗಂಧದ ದ್ರವ್ಯಗಳು, ಅಲಂಕಾರಿಕ ವಸ್ತುಗಳು ಈ ಮಳಿಗೆಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಬೇಕಾದ ವಸ್ತುಗಳನ್ನು ಆಯ್ದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.