ನಗದು ವಹಿವಾಟು ಮತ್ತು ಪಾವತಿಗಳನ್ನ ಮಾಡುವ ಅಂತರರಾಷ್ಟ್ರೀಯ ಇ-ಕಾಮರ್ಸ್ ಕಂಪನಿ ಪೇ ಪಾಲ್ (PayPal) 2,000 ಉದ್ಯೋಗಿಗಳನ್ನ ವಜಾಗೊಳಿಸುವುದಾಗಿ ಘೋಷಿಸಿದೆ. PayPal ಹೋಲ್ಡಿಂಗ್ಸ್ ಇಂಕ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾನ್ ಶುಲ್ಮನ್ ಅವರು ತ್ರೈಮಾಸಿಕದಲ್ಲಿ ಆರ್ಥಿಕ ಕುಸಿತದಿಂದಾಗಿ 2,000 ಜನರನ್ನ ವಜಾಗೊಳಿಸುವುದಾಗಿ ಬುಧವಾರ ಪ್ರಕಟಿಸಿದರು.

RELATED ARTICLES  ಟಿಗೋರ್ ಇವಿಯನ್ನು ಬಿಡುಗಡೆ ಮಾಡಿದೆ ಟಾಟಾ ಮೋಟಾರ್ಸ್ ಎಲೆಟ್ರಿಕ್ ವಾಹನಗಳ ವಿಭಾಗ

ಕಂಪನಿಯ ಶೇಕಡಾ 7ರಷ್ಟು ಉದ್ಯೋಗಿಗಳನ್ನ ವಜಾಗೊಳಿಸಲಾಗುವುದು ಎಂದು ಅವರು ಹೇಳಿದರು. ಈ ಪ್ರಕ್ರಿಯೆಯನ್ನು ಕೆಲವೇ ವಾರಗಳಲ್ಲಿ ಜಾರಿಗೆ ತರಲಾಗುವುದು ಮತ್ತು ಈ ನಿಟ್ಟಿನಲ್ಲಿ ನೌಕರರಿಗೆ ಜ್ಞಾಪಕ ಪತ್ರವನ್ನ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ‘ಈ ತೊಂದರೆಯನ್ನ ನಿವಾರಿಸಲು ನೌಕರರೊಂದಿಗೆ ನಾವು ಸಹ ತುಂಬಾ ಶ್ರಮಿಸಬೇಕಾಗಿದೆ’ ಎಂದು ಅವರು ಹೇಳಿದರು. ಪೇಮೆಂಟ್ ಗೇಟ್ ವೇ ಕಂಪನಿಯಾದ ಪೇ ಪಾಲ್ ಹಿನ್ನಡೆ ಅನುಭವಿಸಿದೆ.

RELATED ARTICLES  ನಿಲ್ಲಿಸಿಟ್ಟಿದ್ದ ಬೋಟ್ ಗೆ ಆಕಸ್ಮಿಕ ಬೆಂಕಿ ತಗಲಿ ಅವಘಡ : ಸುಟ್ಟು ಕರಕಲಾದ ಬೋಟ್.