ಅಕ್ಷರರೂಪ ; ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ

ಉಪಾಸನೆಯ ಪ್ರೇಮದಿಂದ ‘ಉದ್ದಂಡ ಉಪಾಸನೆ’ಯ ಕಾರ್ಯವಾಗುತ್ತಿರುವಾಗಲೂ ಮನಸ್ಸು ಆತ್ಮರಂಗದಲ್ಲಿ ಮುಳುಗಿರಬೇಕು.

(ಇಸವಿ ಸನ ೧೯೪೮ರಲ್ಲಿ ಚಿ. ದಿನಕರ ಬುವಾ ರಾಮದಾಸಿ ಸಜ್ಜನಗಡ ಇವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||
ಮಂಗಳೂರು
೩೦-೫-೧೯೪೮

ಚಿ. ದಿನಕರನಿಗೆ ಆಶೀರ್ವಾದ,

ಬಹಳ ದಿನಗಳಾದವು. ನಿಮ್ಮ ಕಡೆಯ ಕ್ಷೇಮ ಸಮಾಚಾರ ತಿಳಿಯಲಿಲ್ಲ. ಶ್ರೀಸಮರ್ಥಕೃಪೆಯಿಂದ ನೀವೆಲ್ಲಾ ಗುರುಭಕ್ತರು ಕ್ಷೇಮವಾಗಿದ್ದೇರೆಂದು ನನಗೆ ಭರವಸೆಯಿದೆ. ಏನಾದರೂ ತೊಡಕು – ತೊಂದರೆ ಇದ್ದಲ್ಲಿ ತಿಳಿಸಬೇಕು. ಎಲ್ಲರ ಕ್ಷೇಮ ಸವಿಸ್ತರ ಸಮಾಚಾರದ ಅಂಚೆ ಲಕೋಟೆ ಹಾಕಿರಿ.

RELATED ARTICLES  ಕಳೆದುಹೋದ ಎಳೆಯ ದಿನಗಳು (ಭಾಗ ೨೩)

‘ಉಪಾಧಿಯನ್ನು ಹೆಚ್ಚಿಸಬೇಕು| ಆದರೂ ಉಪಾಧಿಯಲ್ಲಿ ಸಿಲುಕಬಾರದು||’ ಕ್ಷಣ-ಕ್ಷಣಗಳಲ್ಲಿ ಆಗುವ ಹೆಚ್ಚುತ್ತಿರುವ ಉಪಾಧಿಗಳ ಕಷ್ಟಗಳಿಂದ ಮನಸ್ಸು ಸಿಡಿದೇಳಬಾರದು; ಏರುತ್ತಿರುವ ಹೆಚ್ಚುತ್ತಿರುವ ಆಧ್ಯಾತ್ಮಿಕ ಉನ್ನತಿ ಕುಂಠಿತವಾಗಬಾರದು. ಪ್ರತಿಯೊಂದು ಮೆಟ್ಟಲಿನಂತೆ ಜೀವನದ ಪ್ರತಿಕ್ಷಣ ಉನ್ನತಿಕಾರಕವಾಗಬೇಕು. ದಿನೇ ದಿನೇ ದೈವೀಸಂಪತ್ತಿನ ಪ್ರಭೆ ಹೆಚ್ಚುತ್ತಾ ಹೋಗಬೇಕು. ಉಪಾಸನೆಯ ಪ್ರೇಮದಿಂದ ‘ಉದ್ದಂಡ ಉಪಾಸನೆ’ಯ ಕಾರ್ಯವಾಗುತ್ತಿರುವಾಗಲೂ ಮನಸ್ಸು ಆತ್ಮರಂಗದಲ್ಲಿ ಮುಳುಗಿರಬೇಕು. ಪ್ರತಿಯೊಬ್ಬರ ಜೀವನವೂ ಸ್ವಪರಹಿತಕ್ಕಾಗಿ ಇದೆ, ಎಂಬ ಸಂಕೇತದ ಕಟ್ಟು, ಪ್ರತಿಯೊಬ್ಬರೂ ತಮ್ಮ ವಸ್ತ್ರದಂಚಿಗೆ ಗಂಟು ಕಟ್ಟಿಕೊಂಡಿರಬೇಕು. ಮನಸ್ಸಿನಲ್ಲಿ ಯಾವುದೇ ರೀತಿಯ ಸಂಕುಚಿತ ಭಾವನೆ ಇರಬಾರದು. ಹೊಸಬನಾಗಿದ್ದರಿಂದ, ಚಿ. ಭಾಸ್ಕರನ ನೆನಪು ಪದೇ ಪದೇ ಆಗುತ್ತಿದೆ. ಅವನ ಆರೋಗ್ಯ ಈಗ ಉತ್ತಮವಾಗಿರಬಹುದು. ನೀವೆಲ್ಲರೂ ಉತ್ಕೃಷ್ಟ ಪರೋಪಕಾರದ ಕಾರ್ಯಗಳನ್ನು ತೇಜಸ್ಸಿನಿಂದ ಮಾಡುತ್ತ, ಆಧ್ಯಾತ್ಮಿಕ ಉನ್ನತಿಯ ಅತಿ ವಿಶಾಲವಾದ ಕೊನೆಯ ಪರಮ ಶಾಂತ ಭೂಮಿಕೆಯ ಶ್ರೀಸಮರ್ಥಸಂಪ್ರದಾಯಕ್ಕೆ ಅಲಂಕಾರಪ್ರಾಯವಾದ ರಾಮದಾಸಿಗಳಾಗಿರಿ!

RELATED ARTICLES  ಕಳುವಿಗಿಂತ ಬೇಡುವುದು ಲೇಸು, ಬೇಡುವುದಕ್ಕಿಂತ ಉಪವಾಸ ಸಾಯುವುದು ಲೇಸು

ಸದ್ಯ ನಾನು ಇಲ್ಲೇ ಇದ್ದೇನೆ. ಚಾತುರ್ಮಾಸಕ್ಕೆ ಇನ್ನೂ ಹೆಚ್ಚುಕಡಿಮೆ ೧|| ತಿಂಗಳು ಇದೆ. ಮುಂದಿನದು ಮುಂದೆ. ‘ಈಶ್ವರೇಚ್ಛಾ ಬಲೀಯಸೀ!|’ ಯೋಗದಲೇನಿದೆ ಅದನ್ನು ನೋಡಬೇಕು.

||ಸರ್ವೇ ಜನಾಃ ಸುಖಿನೋ ಭವಂತು||

ಶ್ರೀಧರ