ಅಕ್ಷರರೂಪ ; ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ

ಮೋಡದಿಂದ ಸೂರ್ಯ ತನ್ನ ನಿತ್ಯ ನಿರಾವರಣ ಸ್ವಭಾವದಿಂದ ಹೇಗೆ ನಿಃಸಂಗ ಮತ್ತು ನಿಷ್ಕಲಂಕವಾಗಿ ತನ್ನ ನಿಜಸ್ಥಿತಿ ಪ್ರಕಟಮಾಡುತ್ತ ಹೊರಬರುತ್ತಾನೋ, ಅದೇ ರೀತಿ ಸತ್ಯದ್ದೂ ಆಗುತ್ತದೆ.

(ಇಸವಿ ಸನ ೧೯೪೯ರಲ್ಲಿ ಚಿ. ದಿನಕರ ಬುವಾ ರಾಮದಾಸಿ ಸಜ್ಜನಗಡ ಇವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||
ಮಂಗಳೂರು
೧೨-೧೨-೧೯೪೯
ಚಿ. ದಿನಕರನಿಗೆ ಆಶೀರ್ವಾದ,

RELATED ARTICLES  ಸಮಾಜದಲ್ಲಿ ಕಾರ್ಯ ಮಾಡುವಾಗ ಎಲ್ಲ ಪ್ರಾಣಿಮಾತ್ರರಿಂದ ಆತ್ಮಪ್ರೇಮದ ಮಂಗಲದರ್ಶನ ಆಗಬೇಕು.

ನಿನ್ನೆಯೇ ಪತ್ರ ಕಳುಹಿಸಿದೆ. ನಿನ್ನೆಯ ಪತ್ರದಲ್ಲಿ ಚಿ. ಅಯ್ಯರನ ಪತ್ರ ಜನರ ಮನಸ್ಸಿನ ಶಂಕೆ ಪರಿಹಾರಕ್ಕೆ ಕಳುಹಿಸಿದ್ದೇನೆ. ಜನರ ಮನಸ್ಸಿನಲ್ಲಿ ಆದ ತಪ್ಪುಕಲ್ಪನೆ ಅದರಿಂದ ದೂರವಾಗಬಹುದೆಂದು ಅನಿಸುತ್ತದೆ.

‘ದೇಶ ಕಾಲ ವರ್ತಮಾನ| ಸಾವಧಾನ ಸಾವಧಾನ| ಪ್ರಸಂಗ ನೋಡಿ ನಡೆ| ಎಲ್ಲದರಲ್ಲೂ||’
ಇಂದಲ್ಲ ನಾಳೆ ಸತ್ಯ ಹೊರಬಂದೇ ಬರುತ್ತದೆ. ಸತ್ಯದ ಸಂಬಂಧ ಪರಂಪರಾಗತ ಬ್ರಹ್ಮನ ಹತ್ತಿರವೇ ಇರುವದರಿಂದ ಸತ್ಯವೂ ಹಾಗೆಯೇ. ಮೊಟ್ಟಮೊದಲು ಈ ಜಗತ್ತಿನಲ್ಲಿ ಸತ್ಯವಿಷಯದ ಬಗ್ಗೆ ವಿಪರೀತ ಭಾವನೆಯೇ ಹೆಚ್ಚು. ಮೋಡದಿಂದ ಸೂರ್ಯ ತನ್ನ ನಿತ್ಯ ನಿರಾವರಣ ಸ್ವಭಾವದಿಂದ ಹೇಗೆ ನಿಃಸಂಗ ಮತ್ತು ನಿಷ್ಕಲಂಕವಾಗಿ ತನ್ನ ನಿಜಸ್ಥಿತಿ ಪ್ರಕಟಮಾಡುತ್ತ ಹೊರಬರುತ್ತಾನೋ, ಅದೇ ರೀತಿ ಸತ್ಯದ್ದೂ ಆಗುತ್ತದೆ. ಮನಸ್ಸನ್ನು ಕಹಿ ಮಾಡಿಕೊಳ್ಳುವ ಯಾವುದೇ ಕಾರಣವಿಲ್ಲ. ಅನಿಷ್ಟ ಪರಿಣಾಮಗಳ ಪಲ್ಲಟವೂ ಅಷ್ಟೇ ತೀವ್ರವಾಗಿ ಆಗುತ್ತದೆ ಎಂಬುವದರಲ್ಲಿ ಸಂಶಯವಿಲ್ಲ .

RELATED ARTICLES  ಇಲ್ಲಿಯವರೆಗೆ ಮಾಡಿದ ತಪಶ್ಚರ್ಯ ನೀನು ಹನ್ನೆರಡು ಸಾವಿರಕ್ಕೆ ಮಾರಿಬಿಟ್ಟೆ ಎಂದರು ಶ್ರೀಧರರು.

ಶ್ರೀಧರ