ಅಕ್ಷರರೂಪ ; ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ

ವ್ಯವಹಾರವಾಗಲೀ ಅಥವಾ ಪರಮಾರ್ಥವಾಗಲೀ ಎಲ್ಲ ಒಂದೇ ರೀತಿಯೇ ಇದೆ. ಉಪಾಧಿಯಷ್ಟೇ ತ್ಯಾಜ್ಯ. ‘ಜೀವೋ ಬ್ರಹ್ಮೈವ ನಾ ಪರಃ’

(ಇಸವಿ ಸನ ೧೯೪೬ರಲ್ಲಿ ಶ್ರೀದತ್ತಾ ಬುವಾ ರಾಮದಾಸಿ ಸಜ್ಜನಗಡ ಅವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||
ಮಂಗಳೂರು
೧೦-೨-೧೯೪೬
ಚಿ. ದತ್ತಾನಿಗೆ ಆಶೀರ್ವಾದ,

RELATED ARTICLES  ಸಜ್ಜನಗಡದ ಮಹತ್ವವನ್ನು ಹೀಗೆ ವರ್ಣಿಸಿದ್ದರು ಶ್ರೀಧರರು.

ನಿಮ್ಮ ಬಗ್ಗೆ ಇಲ್ಲಿ ತಪ್ಪುಕಲ್ಪನೆ ಆದಂತೆ, ನೀವೂ ಇಲ್ಲಿಯ ಬಗ್ಗೆ ತಪ್ಪುಕಲ್ಪನೆ ಮಾಡಿಕೊಳ್ಳಬೇಡಿರಿ. ಚಿ. ಶ್ರೀಧರ ಅಥವಾ ಅಯ್ಯರ ಇಬ್ಬರೂ ಅನನ್ಯ ಭಕ್ತರು. ಈ ವಿಷಯದಲ್ಲಿ ತಿಲಮಾತ್ರವೂ ಸಂಶಯವಿಲ್ಲ. ಚಿ. ಶ್ರೀಧರನ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಇರುವ ಕಟ್ಟು – ಪ್ರತಿಬಂಧ ತೆಗೆದು ಹಾಕಿ ಬಿಟ್ಟಿದ್ದೇನೆ. ಯಾವ ಮನುಷ್ಯನೂ ಕೆಟ್ಟವನಿರುವದಿಲ್ಲ. ಭಾವನೆಯಿಂದ ದುರವಸ್ಥೆ ಆಗುತ್ತದೆ.

RELATED ARTICLES  ಆಯ್ಕೆ

‘ಅಜ್ಞಾನಮೇವಾಸ್ಯ ಹಿ ಮೂಲಕಾರಣಮ್’ ‘ಭ್ರಮಮೂಲಮಿವಂ ಜಗತ್’. ಭಾವನೆಯ ಗಲಿಬಿಲಿ ತೆಗೆದು ಹಾಕಿದಾಗ ಸತ್ಯಸ್ಥಿತಿ ಉಳಿಯುತ್ತದೆ. ಮೇಲಿನ ವಾಕ್ಯಗಳ ವ್ಯಾಪ್ತಿ ಇದೇ. ವ್ಯವಹಾರವಾಗಲೀ ಅಥವಾ ಪರಮಾರ್ಥವಾಗಲೀ ಎಲ್ಲ ಒಂದೇ ರೀತಿಯೇ ಇದೆ. ಉಪಾಧಿಯಷ್ಟೇ ತ್ಯಾಜ್ಯ. ‘ಜೀವೋ ಬ್ರಹ್ಮೈವ ನಾ ಪರಃ’

ಶ್ರೀಧರ