ಬೆಂಗಳೂರುಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅಭಿನಯದ ಹಾಗೂ ಓಂ ರಾವತ್ ನಿರ್ದೇಶನದ “ಆದಿಪುರುಷ” ಚಿತ್ರ ಮೂರು ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 340 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಸೋಮವಾರ ಹೇಳಿದ್ದಾರೆ.

ಪ್ರೊಡಕ್ಷನ್ ಬ್ಯಾನರ್ ಟಿ-ಸೀರೀಸ್ ಹೇಳುವಂತೆ ಪ್ರಭಾಸ್ ಅವರ ಚಿತ್ರ ಬಿಡುಗಡೆಯಾದ ಮೂರನೇ ದಿನ ಜಾಗತಿಕವಾಗಿ 100 ಕೋಟಿ ರೂ. ಗಳಿಸಿದೆ. “ಆದಿಪುರುಷ ಎಲ್ಲಾ ವರ್ಗದ ಪ್ರೇಕ್ಷಕರನ್ನು ಆಕರ್ಷಿಸುವುದನ್ನು ಮುಂದುವರೆಸಿದ್ದು, ವಾರಾಂತ್ಯದ ಮೂರು ದಿನಗಳಲ್ಲಿ ಚಿತ್ರದ ಗಳಿಕೆ 340 ಕೋಟಿ ದಾಟಿದೆ! ಜೈ ಶ್ರೀ ರಾಮ್,” ಎಂದು ಟಿ-ಸೀರೀಸ್ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಪೋಸ್ಟ್ ಮಾಡಿದೆ.

RELATED ARTICLES  ಏರಿಕೆಯಾಗುತ್ತಿದೆ ಈರುಳ್ಳಿ ಬೆಲೆ : ಟೊಮ್ಯಾಟೋ ನಂತರ ಈಗ ಈರುಳ್ಳಿ ಸರದಿ.

ಚಿತ್ರದಲ್ಲಿ ರಾಘವ್ ಪಾತ್ರದಲ್ಲಿ ಪ್ರಭಾಸ್(ರಾಮ್), ಜಾನಕಿ ಪಾತ್ರದಲ್ಲಿ ಕೃತಿ ಸನೋನ್(ಸೀತಾ) ಮತ್ತು ಸೈಫ್ ಅಲಿ ಖಾನ್ ಅವರು ಲಂಕೇಶ್(ರಾವಣ) ಆಗಿ ಅಭಿನಯಿಸಿದ್ದಾರೆ. ಚಿತ್ರವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. 

RELATED ARTICLES  ಕೋಟಿ ಕೋಟಿ ಬಾಚಿದ ಕಾಂತಾರ : ನಟ ರಿಷಬ್ ಶೆಟ್ಟಿ- ಸಪ್ತಮಿಗೌಡಗೆ ಸಿಕ್ಕ ಸಂಭಾವನೆ ಎಷ್ಟು

500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾದ ಆದಿಪುರುಷ ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ದಿನವೇ 140 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ತಯಾರಕರು ಹೇಳಿದ್ದಾರೆ. ಆದರೆ ಚಿತ್ರದಲ್ಲಿನ ಸಂಭಾಷಣೆಗಳ ಕುರಿತು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಇದೇ ವಿಚಾರವಾಗಿ ಮಾಹಿತಿ ನೀಡಿರುವ ಚಿತ್ರತಂಡ ಚಿತ್ರದಲ್ಲಿನ ವಿವಾದಾತ್ಮಕ ಸಂಭಾಷಣೆಗಳನ್ನು ಬದಲಿಸುವುದಾಗಿ ಹೇಳಿದೆ.

Source : Kannadaprabha