ಬೆಂಗಳೂರು: ವಾತಾವರಣದ ವೈಪರೀತ್ಯದಿಂದಾಗಿ ಆಹಾರ ತಯಾರಿಕೆಯಲ್ಲಿ ಬೇಕಾಗಿರುವ ಟೊಮೇಟೊ ಬೆಲೆ ಗಗನಕ್ಕೇರಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಕಾರಣದಿಂದಾಗಿ ದಿನನಿತ್ಯ ಅಡುಗೆಗೆ ಬೇಕಾದ ಟೊಮೇಟೊ ಬೆಲೆ ಒಂದೇ ಸಮನೇ ಏರಿಕೆಯಾಗಿದ್ದು, ಬಡವರು, ಮದ್ಯಮ ವರ್ಗದವರಿಗೆ ಕೈಗೆಟುಕದಂತಾಗಿದೆ. ಒಂದು ಕೆಜಿ ಟೊಮೇಟೊ ಬೆಲೆ 80 ರಿಂದ 100 ರೂಪಾಯಿಗೆ ಮಾರಾಟವಾಗುತ್ತಿರುವುದು ಗ್ರಾಹಕರ ಬೇಸರ ತಂದಿದೆ.

ಇದರಿಂದಾಗಿ ಜನರು ಟೊಮೇಟೊ ಬದಲಿಗೆ ಬೇರೆ ಹುಳಿ ಪದಾರ್ಥಗಳತ್ತ ಗಮನ ಹರಿಸಿದ್ದಾರೆ. ಚಿಲ್ಲರೆ ಅಂಗಡಿ, ಹೋಲ್‌ ಸೇಲ್‌ ಅಂಗಡಿಗಳಲ್ಲಿ ಟೊಮೇಟೊ ಬೆಲೆ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ. ಮೇ ಮತ್ತು ಜೂನ್ ತಿಂಗಳ ಆರಂಭದಲ್ಲಿ ಟೊಮೇಟೊಗೆ ಬೆಲೆ ಇರಲಿಲ್ಲ. ಆಗ ಕೆಜಿ ಟೊಮೇಟೊ ಕೇವಲ 30 ರಿಂದ 40 ರೂ.ಗೆ ಮಾರಾಟವಾಗಿತ್ತು. ಆದರೆ, ಕಳೆದ ಮೂರು ದಿನಗಳಿಂದ ಬೆಲೆಯಲ್ಲಿ ಒಮ್ಮಿಂದೊಮ್ಮೆಲೆ ಏರಿಕೆಯಾಗಿದ್ದು, ದೇಶಾದ್ಯಂತ ಬೆಲೆಯಲ್ಲಿಎರಡು ಪಟ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

RELATED ARTICLES  ಭಾರತದಲ್ಲಿ 37 ಲಕ್ಷಕ್ಕೂ ಅಧಿಕ ಖಾತೆ ಬ್ಯಾನ್ ಮಾಡಿದ ವಾಟ್ಸ್​ಆ್ಯಪ್..!

ಉತ್ತರ ಭಾರತದ ಕಡೆಗಳಲ್ಲಿ ಭಾರೀ ಮಳೆಯಿಂದ ಟೊಮೋಟೊ ನೆಲ ಕಚ್ಚಿದ್ದರೆ, ಕರ್ನಾಟಕ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮಳೆ ವಿಳಂಬ, ಅತಿಯಾದ ಉಷ್ಣಾಂಶ ಬೆಳೆ ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಟೊಮೇಟೊ ಬೆಲೆ ಇನ್ನಷ್ಟು ಮುಂದುವರಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

RELATED ARTICLES  BSNL ನಿಂದ ನೂತನವಾಗಿ ಎರಡು ಆಕರ್ಷಕ ರೀಚಾರ್ಜ್‌ ಯೋಜನೆ : ಖಾಸಗಿ ಟೆಲಿಕಾಂಗಳಿಗೆ ನೇರ ಫೈಟ್‌