ಹತ್ತೇ ನಿಮಿಷದಲ್ಲಿ ಹಲ್ಲು ನೋವು ನಿಯಂತ್ರಣಕ್ಕೆ ಬರುವುದು. ಅದೇನು ಅಂತೀರಾ? ಇಲ್ಲಿ ಓದಿ.
ಉಪ್ಪು ಮತ್ತು ಕಾಳುಮೆಣಸು
ಇವುಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಉರಿಯೂತ ನಿವಾರಕ ಗುಣಗಳು ಒಸಡುಗಳಲ್ಲಿ ಆಗಿರುವ ಸೋಂಕು ನಿವಾರಿಸಿ ನೋವು ಕಡಿಮೆಯಾಗಲು ನೆರವಾಗುತ್ತವೆ.
*ಒಂದು ಬೋಗುಣಿಯಲ್ಲಿ ಸಮಪ್ರಮಾಣದಲ್ಲಿ ಉಪ್ಪು ಮತ್ತು ಕಾಳುಮೆಣಸು ಬೆರೆಸಿ ಕೆಲವು ಹನಿ ನೀರು ಸೇರಿಸಿ ದಪ್ಪನೆಯ ಲೇಪನ ತಯಾರಿಸಿ
*ಈ ಲೇಪನವನ್ನು ನೋವು ಕೊಡುತ್ತಿರುವ ಭಾಗದ ಮೇಲೆ ಹಚ್ಚಿ ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಬಾಯಿಯನ್ನು ಮುಕ್ಕಳಿಸಿ ಉಗಿಯಿರಿ.
*ಈ ವಿಧಾನವನ್ನು ದಿನಕ್ಕೆ ಎರಡು ಬಾರಿಯಂತೆ ನೋವು ಕಡಿಮೆಯಾಗುವವರೆಗೆ ಮುಂದುವರೆಸಿ.