ಹೊನ್ನಾವರ : ಪುಟ್ಟದೊಂದು ಲಗೇಜ್ ರಿಕ್ಷಾದ ಮೂಲಕ ಉದ್ಯಮ ಲೋಕಕ್ಕೆ ಶ್ರೀಕಾರ ಹಾಕಿದ ಶ್ರೀಕುಮಾರ ಸಂಸ್ಥೆ ಇಂದು ಎಲ್ಲೆಡೆಯಲ್ಲಿ ತನ್ನ ಬಾಹುಗಳನ್ನು ಚಾಚಿ ಜನಮೆಚ್ಚುಗೆ ಪಡೆದುಕೊಂಡಿದೆ. ಸದಾ ಕಾರ್ಯ ಚಟುವಟಿಕೆಗಳ ಮೂಲಕ ಹೆಸರಾದ ಪುಟ್ಟಣ್ಣ (ವೆಂಕಟ್ರಮಣ ಹೆಗಡೆ ಕವಲಕ್ಕಿ) ಇದೀಗ ಸಾರಿಗೆ ಸೇವೆಯ ಜೊತೆಗೆ ವಸತಿ ವ್ಯವಸ್ಥೆಯತ್ತಲೂ ದಾಪುಗಾಲಿಟ್ಟಿರುವುದು ಅವರ ಅಪ್ರತಿಮ ಸಾಧನೆಗೆ ಹಿಡಿದ ಕೈಗನ್ನಡಿಯಂತಿದೆ.

ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಮಹಾನಗರಕ್ಕೆ ಹೊರಡುವವರಿಗೆ ನೆನಪಾಗುವುದೇ ಶ್ರೀಕುಮಾರ ಬಸ್. ಹಳ್ಳಿಯ ಮೂಲೆ ಮೂಲೆಯಿಂದ ಹೊರಟು ಬೆಂಗಳೂರು, ಮೈಸೂರು ತಲುಪುವ ಬಸ್ ಗಳಲ್ಲಿ ಕೇವಲ ಸಂಚಾರ ಅಷ್ಟೇ ಅಲ್ಲ. ಇದು ನಮ್ಮವರದ್ದು ಎಂಬ ಭಾವ ಹಲವರಲ್ಲಿ ಇರುತ್ತದೆ.

ಇದೀಗ ತಾಲೂಕಿನ ಕರ್ಕಿ ಸಮೀಪ ಶ್ರೀ ಕುಮಾರ ಸಮೂಹ ಸಂಸ್ಥೆಯ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ಸೇವೆಗೆ ಸಂಸ್ಥೆಯ ಅಧ್ಯಕ್ಷರಾದ ವೆಂಕಟ್ರಮಣ ಹೆಗಡೆ ಕವಲಕ್ಕಿಯವರು ಮೊಮ್ಮಗಳಾದ ಶ್ರೇಯಾ ಹೆಗಡೆ ಜೊತೆಗೆ ಕುಟುಮಬದವರ ಉಪಸ್ಥೊತೊಯಲ್ಲಿ ಚಾಲನೆ ನೀಡಿದ್ದಾರೆ.

RELATED ARTICLES  ಒಮ್ಮೆ ರೀಚಾರ್ಜ್ ಮಾಡಿದ್ರೆ ವರ್ಷಪೂರ್ತಿ ಪ್ರಯೋಜನ!

ಶ್ರೀಕುಮಾರ್ ಲಾಜಿಸ್ಟಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೊನ್ನಾವರ ಇದರ ಸಂಸ್ಥಾಪಕರಾದ ವೆಂಕ್ರಟಮಣ ಹೆಗಡೆ ಕವಲಕ್ಕಿ ಸಾರಿಗೆ ಕ್ಷೇತ್ರದಲ್ಲಿ ಹಲವಾರು ವಿಶೇಷ ವ್ಯವಸ್ಥೆ, ಹಳ್ಳಿ ಹಳ್ಳಿಗೂ ಬಸ್ ವ್ಯವಸ್ಥೆ, ಕೋರಿಯರ್ ವ್ಯವಸ್ಥೆ ಹಾಗೂ ಇತರ ವ್ಯವಸ್ಥೆಗಳ ಮೂಲಕ ದಾಪುಗಾಲು ಇಟ್ಟಿದ್ದು, ಇದೀಗ ಅದೆಲ್ಲದಕ್ಕಿಂತ ವಿಭಿನ್ನವಾದ ಲಾಡ್ಜಿಂಗ್ ಸೇವೆ ಆರಂಭಿಸಿದ್ದಾರೆ. ಈ ಕಾರ್ಯಕ್ಕೆ ಅವರು ವರಮಹಾಲಕ್ಷ್ಮೀ ಹಬ್ಬದಂದು ಚಾಲನೆ ನೀಡಿದ್ದಾರೆ.

ಜಿಲ್ಲೆಯ ಗ್ರಾಹಕರಿಗೆ ಹಾಗೂ ಅಗಮಿಸುವ ಪ್ರವಾಸಿಗರಿಗೆ ದಿನವಿಡೀ ವೈಪೈ ಸೇವೆಯ ಜೊತೆ ನಗುಮುಖದ ಸೇವೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ರೆಸ್ಟೋರೆಂಟ್, ೨೪ ಗಂಟೆ ಬಿಸಿನೀರಿನ ಸೌಲಭ್ಯ ಹೊಂದಿರುವ ಸುಸಜ್ಜಿತವಾದ ಲಾಡ್ಜಿಂಗ್ ಹಾಗೂ ಬೋರ್ಡಿಂಗ್ ವ್ಯವಸ್ಥೆ ಇದಾಗಿದೆ.

RELATED ARTICLES  'ಉದಯ ಸ್ಪೋರ್ಟ್ಸ್ ವರ್ಲ್ಡ್' ಉದ್ಘಾಟನೆ.

ಸಮಾಜಮುಖಿ ಕಾರ್ಯಗಳಲ್ಲಿಯೂ ಗುರುತಿಸಿಕೊಂಡಿರುವ ವೆಂಕಟ್ರಮಣ ಹೆಗಡೆ ತಮ್ಮದೇ ಶರಾವತಿ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ಮನೆಮಾತಾದವರು. ಕೊಡುಗೈ ದಾನಿಯಾಗಿ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಜನರ ಮೆಚ್ಚುಗೆಯ ಪುಣ್ಣಣ್ಣ ಎನಿಸಿಕೊಂಡಿದ್ದಾರೆ ಇವರು.
ಮುರ್ಡೇಶ್ವರ, ಇಡಗುಂಜಿ, ಗೇರುಸೊಪ್ಪಾ, ಗೊಕರ್ಣ, ಯಾಣದಂತಹ ಪ್ರವಾಸಿ ಸ್ಥಳಕ್ಕೆ ಮಧ್ಯವರ್ತಿಯಾಗಿರುವ ಕರ್ಕಿ ಸಮೀಪ ಲಾಡ್ಜಿಂಗ್ ಆರಂಭಿಸಿವುದು ಪ್ರವಾಸಿಗರಿಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಎಲ್ಲೆಡೆಯಿಂದ ಅವರಿಗೆ ಅಭಿನಂದನೆಗಳು ಹರಿದು ಬರುತ್ತಿದೆ.

  • ಸುಂದರ ಪ್ರಾಕೃತಿಕ ಸೌಂದರ್ಯ ಹೊಂದಿರುವ ಉತ್ತರಕನ್ನಡದಲ್ಲಿ ಉತ್ತಮ ವ್ಯವಸ್ಥೆಯ ಲಾಡ್ಜಿಂಗ್ ಹಾಗೂ ಬೋರ್ಡಿಂಗ್ ವ್ಯವಸ್ಥೆ ಜೊತೆಗೆ ಶುದ್ಧವಾದ ಊಟೋಪಚಾರಕ್ಕೆ ರೆಸ್ಟೋರೆಂಟ್ ಸ್ಥಾಪಿಸಿದ್ದೇನೆ. ಈ ಹಿಂದಿನAತೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡುತ್ತಾರೆ ಎಂಬ ಭರವಸೆ ಇದೆ.- ವೆಂಕಟ್ರಮಣ ಹೆಗಡೆ ಕವಲಕ್ಕಿ, ಶ್ರೀಕುಮಾರ ಸಮೂಹ ಸಂಸ್ಥೆಯ ಸಂಸ್ಥಾಪಕರು.