ಸಮಾಜಮುಖಿ ಚಿಂತನೆಗಳ ಮೂಲಕ ಹಾಗೂ ದೀನ ದಲಿತರಿಗೆ, ಬಡವರಿಗೆ ನೆರವಾಗುವುದರ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡು, ಇದೀಗ ಬಡವರ ಆಶಾಕಿರಣವಾಗಿ ಬೆಳೆಯುತ್ತಿರುವ ಶ್ರೀ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ. 15 ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಚಂದರಗಿ ಸಭಾಭವನದಲ್ಲಿ ಕಿತ್ತೂರಿನ ಆಟೋ ರಿಕ್ಷಾ, ಹಾಗೂ ಗೂಡ್ಸ್ ರಿಕ್ಷಾ ಚಾಲಕ ಮತ್ತು ಮಾಲಕರಿಗೆ ಉಚಿತ ಪಾಸಿಂಗ್ ಯೋಜನೆ ಹಾಗೂ ಔತಣಕೂಟ, ಸಮವಸ್ತ್ರ ಮತ್ತು ಪ್ರಿಂಟಿಂಗ್ ಹುಡ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಶ್ರೀ ಮ.ನಿ.ಪ್ರ.ಸ್ವ ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ರಾಜಗುರು ಸಂಸ್ಥಾನ ಕಲ್ಮಠ ಇವರು ಉದ್ಘಾಟಿಸಲಿದ್ದು ಟ್ರಸ್ಟ್ ನ ಸಂಸ್ಥಾಪಕ ಅನಂತಮೂರ್ತಿ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ಶಿಂಧೆ ಉಪಸ್ಥಿತರಿರಲಿದ್ದು, ಡಿ.ವೈ.ಎಸ್.ಪಿ ರವಿ ನಾಯ್ಕ, ಸಮಾಜ ಸೇವಕ ಹಬೀಬ ಶಿಲ್ಲೆದಾರ, ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಉತ್ತರ ಕರ್ನಾಟಕ ಆಟೋ ಚಾಲಕ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ವಿಶ್ವನಾಥ ಗೌಡ ಉಪಸ್ಥಿತರಿರುವರು.
ತಾವು ಕಷ್ಟಪಟ್ಟು ದುಡಿದ ತಮ್ಮ ಸಂಪಾದನೆಯಲ್ಲಿಯೇ ಶ್ರೀ ಅನಂತಮೂರ್ತಿ ಎಮ್. ಹೆಗಡೆ ಬಡವರಿಗೆ ಹಾಗೂ ಸಮಾಜದಲ್ಲಿ ಅವಶ್ಯಕತೆ ಇರುವ ಜನರಿಗೆ ನೆರವಾಗುವುದರ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಬಡವರ ಬಂಧು, ಆಟೋ ರಕ್ಷಕ ಬಿರುದನ್ನು ಪಡೆದಿರುವ ಶ್ರೀಯುತರು ಸಮಾಜದ ಕಷ್ಟಕ್ಕೆ ಮಿಡಿಯುತ್ತಿರುವವರು.
ಈಗಾಗಲೇ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನಿಂದ ಚಂದನ ಶಾಲೆ ನರೇಬೈಲ್, ಮಾರಿಕಾಂಬಾ ಸರಕಾರಿ ಪಿಯು ಕಾಲೇಜ್, ಶಿರಸಿ, ಬಂಗಾರೇಶ್ವರ ದೇವಸ್ಥಾನ, ಗುಡ್ಡಾಪುರ, ಕಲ್ಲೇಶ್ವರ ಮಠ, ಅಂಡಗಿ, ಸ. ಹಿ. ಪ್ರಾ. ಶಾಲೆ, ದೊಡ್ನಳ್ಳಿ, ಸ. ಕಿ. ಪ್ರಾ. ಶಾಲೆ, ಹುಸರಿ, ಸ.ಕಿ.ಪ್ರಾ.ಶಾಲೆ, ಭದ್ರಾಪುರ, ಸ. ಹಿ. ಪ್ರಾ. ಶಾಲೆ, ಬಚಗಾಂವ, ಸ. ಹಿ. ಪ್ರಾ. ಶಾಲೆ, ಮಾಡನಗೇರಿ, ಸ. ಹಿ. ಪಾ, ಶಾಲೆ, ಅಂಡಗಿ, ಸ. ಹಿ. ಪ್ರಾ. ಶಾಲೆ ಕಲಕರಡಿ, ಅಲ್‌ಫಲಾ ಶಾಲೆ, ಹುಸರಿ, ಇಕಾ ಶಾಲೆ, ಶಿರಸಿ, ಪ್ರೊಗ್ರೆಸಿವ್ ಜ್ಯೂನಿಯರ್ ಕಾಲೇಜ್, ಶಿರಸಿ ಹಾಗೂ ಕಿರಿಯ ಪ್ರಾಥಮಿಕ ಶಾಲೆ, ಬ್ಯಾಗದ್ದೆ ಮೊದಲಾದ ಶಾಲೆ ಮತ್ತು ಮಠಗಳಿಗೆ, ಬಸ್ ನಿಲ್ದಾಣಗಳಿಗೆ ಕುಡಿಯುವ ನೀರಿನ ಘಟಕಗಳನ್ನು ನೀಡಲಾಗಿದೆ.