ಕುಮಟಾ : ಉತ್ತರಕನ್ನಡ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘದ  ವಾರ್ಷಿಕ ಸ್ನೇಹ ಸಮ್ಮೇಳನವು ಭಾನುವಾರ ದಿನಾಂಕ 5 ನವೆಂಬರ್ 2023 ರಂದು ಕಾರವಾರದ ನಂದನಗದ್ದಾದ  ಸಮಾದೇವಿ ಸಭಾಭವನದಲ್ಲಿ ಜರುಗಲಿದೆ.

ಮುಂಜಾನೆ ಸಾಮೂಹಿಕ ಸತ್ಯನಾರಾಯಣ ಕಥೆಯ ಬಳಿಕ ಬೆಳಿಗ್ಗೆ 10 : 30 ರಿಂದ ವೇದಿಕೆಯ ಕಾರ್ಯಕ್ರಮ ನೆರವೇರಲಿದ್ದು ಕಾರ್ಯಕ್ರಮವನ್ನು ಕುಮಟಾ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಸುಮಲತಾ ಮಣಕೀಕರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಮಾಜದ ಜಿಲ್ಲಾ ಅಧ್ಯಕ್ಷ ಕೇಶವ ಡಿ. ಪೆಡ್ನೇಕರ್  ವಹಿಸಲಿದ್ದಾರೆ.

RELATED ARTICLES  ಅನಂತಕುಮಾರ ಹೆಗಡೆ ಭೇಟಿಗೆ ಕಾದು ಕಾದು ವಾಪಸ್ಸಾದ ಕಾಗೇರಿ?

ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಮನೋಹರ ಟಿ. ಕಾಂಬಳೆ ಕಾರವಾರ‌. ಎಚ್. ಸಿ.ಎನ್ ಟ್ನೆಕ್ನಾಲಜಿಯ ಪ್ರಾಜೆಕ್ಟ್ ಮ್ಯಾನೇಜರ್ ಪ್ರಣವ ಮಣಕೀಕರ್, ಸಮಾಜ ಸೇವಿ ಸಮೀರ್ ನೀಲಕಂಠ ನಾಯಕ ಪಾಲ್ಗೊಳ್ಳಲಿದ್ದು ಈ ಸಮ್ಮೇಳನದಲ್ಲಿ ದೇಶಭಂಡಾರಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಮಾಜದ ಹಿರಿಯ ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ಸಂಘದ ಜಿಲ್ಲಾ ಉಪಾಧ್ಯಕ್ಷ ಕಾಗಾಲ ಚಿದಾನಂದ ಭಂಡಾರಿ‌ ಪ್ರತಿಕೆಗೆ ತಿಳಿಸಿದ್ದಾರೆ.

RELATED ARTICLES  ಗೋಕರ್ಣಕ್ಕೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ ಮೂವರು ಸಾವು.