ನೆನಪಿನಂಗಳದಿ ನೆಲೆನಿಂತ
ಚಿಟ್ಟಾಣಿಯ ಸರದಾರ
ಯಕ್ಷರಂಗದ ಹರಿಕಾರ
ಯಕ್ಷ ಅಂಬರದ
ಪೂರ್ಣ ಚಂದ್ರ
ಚಿಟ್ಟಾಣಿಯ ರಾಮಚಂದ್ರ
ಓದಿಗೂ ಮೀರಿದ ಗದ್ದುಗೆ ಏರಿ
ಯಕ್ಷಲೋಕದ ಹಿರಿಯಣ್ಣನಾದ
ಬಡಗುತಿಟ್ಟಿನ ದಿಗ್ಗಜ
ಕೃಷ್ಣ ಪಾರಿಜಾತದಿ ಅಗ್ನಿ
ವಿರಾಟ ಪರ್ವದಿ ಕೀಚಕ.
ಜನಮಾನಸದಿ ನಿಂತ  ಬಸ್ಮಾಸುರ
ಸರಳ ಸಜ್ಜನಿಕೆಯ ಅಜ್ಜ
ರಂಗಸ್ಥಳದಿ ಮಹಾರಾಜ
ದಿಗಂತದಲ್ಲಿ ಲೀನವಾದ ಕೌರವ
ಬಿರುದು ಸನ್ಮಾನಕ್ಕೆ ಲೆಕ್ಕವಿಲ್ಲ
ಯಕ್ಷರಂಗಕ್ಕೆ ನೀನೆ ಮೊದಲು
ಪದ್ಮಶ್ರೀ ತಂದಿಟ್ಟೆಯಲ್ಲ.
ಯಕ್ಷರಂಗದಿ ಮರೆಯಾಗಿ
ಅಭಿಮಾನಿಗಳ ಎದೆಯಲ್ಲಿ
ನೆಲೆಯಾದ ಯಕ್ಷದಿಗ್ಗಜ
✍ಉಮೇಶ ಮುಂಡಳ್ಳಿ ಭಟ್ಕಳ
RELATED ARTICLES  ದೇಶಿಗರು ಕಾಣದನ್ನು ,ವಿದೇಶಿಗರು ಕಂಡರು.