Home SIRSI ಮನೆಯ ಹಿಂದಿನ ಮರಕ್ಕೆ‌ ನೇಣು ಹಾಕಿಕೊಂಡು ಆತ್ಮಹತ್ಯೆ.

ಮನೆಯ ಹಿಂದಿನ ಮರಕ್ಕೆ‌ ನೇಣು ಹಾಕಿಕೊಂಡು ಆತ್ಮಹತ್ಯೆ.

ಶಿರಸಿ : ತಾಲೂಕಿನ ಬ್ಯಾಗದ್ದೆಯಲ್ಲಿ ಗ್ರಾ.ಪಂ ನ ಸಿಬ್ಬಂದಿಯೊಬ್ಬ ಮನೆಯ ಹಿಂದಿನ‌ಕಾಡಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಮಹೇಂದ್ರ (೨೯) ಆತ್ಮಹತ್ಯೆಗೆ ಶರಣಾದ ಯುವಕ. ಗ್ರಾ.ಪಂ.ನ ಸಿಬ್ಬಂದಿಯಾಗಿದ್ದ ಈ ಯುವಕ ಮನೆಯ ಹಿಂದಿನ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ದಾವಿಸಿರುವ ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.