Home HONNAVAR ಫೇ. 18 ರಂದು ಶಿಲ್ಪಿ ಗಣೇಶ ಭಟ್ಟರಿಗೆ ಸನ್ಮಾನ

ಫೇ. 18 ರಂದು ಶಿಲ್ಪಿ ಗಣೇಶ ಭಟ್ಟರಿಗೆ ಸನ್ಮಾನ

ಹೊನ್ನಾವರ : ಅಯೋಧ್ಯೆಯ ಶ್ರೀರಾಮ ಮಂದಿರ ಟ್ರಸ್ಟ್ ಆಹ್ವಾನದಂತೆ ಅಯೋಧ್ಯೆಯಲ್ಲಿ 7 ತಿಂಗಳು ತಮ್ಮ ಸಹ ಶಿಲ್ಪಿಗಳೊಂದಿಗೆ ವಾಸ ಮಾಡಿ ಶಾಸ್ರೋಕ್ತವಾಗಿ ಬಾಲ ಶ್ರೀರಾಮನ ಮೂರ್ತಿಯನ್ನು ರಚಿಸಿಕೊಟ್ಟು ಬಂದ ಇಡಗುಂಜಿಯ ಶಿಲ್ಪಿ ಗಣೇಶ ಭಟ್ಟರಿಗೆ ಫೆ. 18ರಂದು ಬೆಳಗ್ಗೆ 10130ಕ್ಕೆ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ಸಾರ್ವಜನಿಕ ಸನ್ಮಾನವನ್ನು ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಪರವಾಗಿ ಆಯೋಜಿಸಲಾಗಿದೆ.

ಸಚಿವ ಮಂಕಾಳ ವೈದ್ಯ, ಶಾಸಕ ದಿನಕರ ಶೆಟ್ಟಿ, ಎಸ್‌ಆರ್‌ಎಲ್ ಸಾರಿಗೆ ಮುಖ್ಯಸ್ಥ ವೆಂಕಟರಮಣ ಹೆಗಡೆ, ಕವಲಕ್ಕಿ, ನಗರದ ಮತ್ತು ತಾಲೂಕಿನ ವಿವಿಧ ದೇವಾಲಯಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಮತ್ತು ರೋಟರಿ, ಲಯನ್ ಮತ್ತು ಸೇವಾ ಸಂಸ್ಥೆಗಳ ಅಧ್ಯಕ್ಷರು, ನಗರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಾಘವ ಬಾಳೇರಿ, ಮಧ್ಯವರ್ತಿ ಬ್ಯಾಂಕಿನ ನಿರ್ದೇಶಕ ಶಿವಾನಂದ ಹೆಗಡೆ, ಕೆರೆಮನೆ ಶಿವಾನಂದ ಹೆಗಡೆ, ಹತ್ತು ಸಮಸ್ತರ ಸಂಘದ ಅಧ್ಯಕ್ಷ ನರೇಂದ್ರ ಕಾಮತ, ಆರ್.ಎಸ್. ರಾಯ್ಕರ್, ಕೃಷ್ಣಮೂರ್ತಿ ಭಟ್ ಶಿವಾನಿ, ಮತ್ತು ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ ತಾಂಡೇಲ, ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ನ್ಯೂ ಇಂಗ್ಲಿಷ್ ಸಂಸ್ಥೆಯ ಅಧ್ಯಕ್ಷ ರಘು ಪೈ ಮೊದಲಾದವರನ್ನು ಒಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಕೋರಲಾಗಿದೆ.

ಸಚಿವರು, ಶಾಸಕರು ಸಮಿತಿಯ ವತಿಯಿಂದ ಸನ್ಮಾನಿಸಲಿದ್ದು, ಸಾರ್ವಜನಿಕರಿಗೆ ವೈಯಕ್ತಿಕ ಸನ್ಮಾನ ನೀಡಲು ಅವಕಾಶವಿದೆ. ಅಂದು ಗಣೇಶ ಭಟ್ಟ ಅವರು ತಾವು ರಚಿಸಿದ ಬಾಲ ಶ್ರೀರಾಮ ಮೂರ್ತಿಯ ವೈಶಿಷ್ಟ್ಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಗಣೇಶ ಭಟ್ಟ ಅವರು ರಚಿಸಿದ ಮೂರ್ತಿಯು ಪ್ರತಿಷ್ಠಾಪನೆಯಾದ ಮೂರ್ತಿಯಷ್ಟೇ ಪ್ರಸಿದ್ದಿ ಪಡೆಯುತ್ತಿದ್ದು ರಾಘವೇಶ್ವರ ಶ್ರೀಗಳ ಸಹಿತ ಹಲವು ರಾಜ್ಯದ ಗಣ್ಯರು ಈ ಮೂರ್ತಿಯನ್ನು ಮೆಚ್ಚಿದ್ದಾರೆ.