Home HONNAVAR ಮಿಲನಕ್ಕೆ ಜಾಗ ಹುಡುಕುತ್ತಾ ಮನೆಯಂಗಳಕ್ಕೆ ಬಂದ ಉರಗಗಳು. : ಉರಗ ತಜ್ಞ ಪವನ್ ನಾಯ್ಕರಿಂದ ರಕ್ಷಣೆ...

ಮಿಲನಕ್ಕೆ ಜಾಗ ಹುಡುಕುತ್ತಾ ಮನೆಯಂಗಳಕ್ಕೆ ಬಂದ ಉರಗಗಳು. : ಉರಗ ತಜ್ಞ ಪವನ್ ನಾಯ್ಕರಿಂದ ರಕ್ಷಣೆ : ಆ ಕ್ಷಣದ ವಿಡಿಯೋ ಇಲ್ಲಿದೆ ನೋಡಿ.

ಕುಮಟಾ : ಪಟ್ಟಣದ ವಿವೇಕನಗರದಲ್ಲಿ ಎರಡು ಹಾವುಗಳು ಒಟ್ಟಿಗೇ ಕಾಣಿಸಿಕೊಂಡು ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಇಲ್ಲಿನ ನಿಲೇಶ ಭಂಡಾರಿ ಎನ್ನುವವರ ಮನೆಯ ಅಂಗಳಲ್ಲಿಯೇ ಎರಡು ಹಾವುಗಳು ಓಡಾಡುತ್ತಿದ್ದು, ಮನೆಯವರು ಇದನ್ನು ಗಮನಿಸಿ ಭಯಗೊಂಡಿದ್ದಾರೆ. ತಕ್ಷಣ ಉರಗಪ್ರೇಮಿ ಪವನ ನಾಯ್ಕ ಅವರನ್ನು ಮನೆಯವರು ಸಂಪರ್ಕ ಮಾಡಿದ್ದು, ಅವರ ಕರೆಗೆ ಸ್ಪಂದಿಸಿದ ಪವನ ತಕ್ಷಣದಲ್ಲಿ ಸ್ಥಳಕ್ಕೆ ಹೋಗಿ ಎರಡೂ ಉರಗವನ್ನೂ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಉರಗಪ್ರೇಮಿ ಪವನ ನಾಯ್ಕ ಇದು ಹಾವುಗಳ ಮಿಲನ ಹಾಗೂ ಸಂತಾನೋತ್ಪತ್ತಿಯ ಸಮಯವಾಗಿದ್ದು, ಈ ಕಾರಣದಿಂದಾಗಿ ಹಾವುಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತದೆ. ಕೆಲ ಹೊತ್ತು ಹಾವುಗಳಿಗೆ ಹಾನಿ‌ಮಾಡದೆ ಇದ್ದಲ್ಲಿ ಅವುಗಳು ಅಲ್ಲಿಂದ ಹೊರಟುಹೋಗುತ್ತದೆ ಎಂದಿದ್ದಾರೆ.  

ವಿಡಿಯೋ ಇಲ್ಲಿದೆ.

ಈ ಮನೆಯವರಿಗೂ ಪವನ ಮೊದಲು ಹಾಗೆಯೇ ಹೇಳಿದ್ದರಂತೆ ಆದರೆ ಆ ಹಾವಿಗೆ ಮನೆ ಸುತ್ತಲೂ ಇರುವ ಎತ್ತರದ ಕಂಪೌಂಡ್ ನಿಂದ ಹೊರ ಹೋಗಲು ಅಡೆ ತಡೆಯಾಗುತ್ತಿದ್ದ ಕಾರಣ ಧಾವಿಸಿ ಬಂದು, ಒಂದು ಗಂಡು ಹಾಗೂ‌ ಒಂದು ಹೆಣ್ಣು ಹಾವನ್ನು‌ ಹಿಡಿದು ಹತ್ತಿರದ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ. 

ಪೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ನಾಗರಹಾವಿನ ಮಿಲನದ ಕಾಲವಾಗಿದ್ದು ಈ ಕಾಲದಲ್ಲಿ ಹಾವುಗಳು ಒಟ್ಟಿಗೆ ಕಾಣಸಿಗುತ್ತವೆ. ಇಂತಹ ಪ್ರಕ್ರಿಯೆಯು ಪ್ರಕೃತಿ ಸಹಜ ಕ್ರಿಯೆ ಆಗಿದ್ದು ಆತಂಕ ಪಡುವ ಅಗತ್ಯ ಇಲ್ಲ ಎಂದು ಪವನ್ ನಾಯ್ಕ ಮಾಹಿತಿ ನೀಡಿದ್ದಾರೆ.