Home KUMTA ಬಾಡದ ರಥೋತ್ಸವ ಸಂಪನ್ನ

ಬಾಡದ ರಥೋತ್ಸವ ಸಂಪನ್ನ

ಕುಮಟಾ : ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಿಯ ರಥೋತ್ಸವು ಇಂದು ನಡೆಯಿತು. ಚೈತ್ರ ಶುದ್ಧ ಹುಣ್ಣಿಮೆ ದಿನದಂದು ಪ್ರತೀ ವರ್ಷ ಜಾತ್ರೆ ನಡೆಸುತ್ತಾ ಬರಲಾಗಿದ್ದು, ಸಹಸ್ರಾರು ಜನರು ರಥೋತ್ಸವದ ಸಂದರ್ಭದಲ್ಲಿ ಹಾಜರಿದ್ದು, ದೇವರಿಗೆ ಹರಕೆ‌,ಪೂಜೆ ಸಲ್ಲಿಸಿದರು. ಒಂದೆಡೆ ಸಕಲಾಭರಣ ಭೂಷಿತಳಾಗಿ ತಾಯಿ ಕಾಂಚಿಕಾಂಬೆ ಭಕ್ತರಿಗೆ ದರ್ಶನ ನೀಡುತ್ತಿದ್ದರೆ. ಭಕ್ತಿ ಪರವಶರಾದ ಭಕ್ತಸಮೂಹ ತಾಯಿಗೆ ಉಡಿ ತುಂಬುವುದು, ತುಲಾಭಾರ, ಎತ್ತು ಹರಿಸುವ ಸೇವೆ, ಆರತಿ ಸೇವೆ ಸಲ್ಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿ ಶ್ರೀದೇವಿಗೆ ವಿವಿಧ ಹರಕೆ ಪೂಜೆಯನ್ನು ನೆರವೇರಿಸಿದರು. ಅನೇಕರು ಶ್ರೀದೇವಿಯ ರಥಕ್ಕೆ ತೆಂಗಿನ ಕಾಯಿಯ ಗೊಂಚಲು ಹರಕೆ, ಈಡುಗಾಯಿ ಒಡೆಯುವುದು, ರಥಕ್ಕೆ ಬಾಳೆಹಣ್ಣು,ಕಿತ್ತಲೆ ಹಣ್ಣನ್ನು ಎಸೆಯುವುದರ ಹರಕೆ ಪೂರೈಸಿದರು.

ರಥೋತ್ಸವಕ್ಕೆ ಸಂಬಂಧಿಸಿದಂತೆ ೫ ದಿನ ರಥೋತ್ಸವದ ಸಂಪ್ರದಾಯ ಇರುತ್ತದೆ. ಶ್ರೀದೇವಿಯ ಪಲ್ಲಕ್ಕಿ ಉತ್ಸವವು ಗ್ರಾಮದ ಪರಿವಾರ ದೇವಾಲಯಕ್ಕೆ ತೆರಳಿ ಸಂಪ್ರದಾಯವನ್ನು ನಡೆಸುವುದು ವಾಡಿಕೆ. ಇದರೊಂದಿಗೆ ಹೊವಿನ ಮಕ್ಕಳ ಕುಣಿತ, ಕಳಶ ಉತ್ಸವವು ಹೆಚ್ಚು ಆಕರ್ಷಕವಾಗಿತ್ತು.