Home KUMTA ಮತದಾನ ಪ್ರಕ್ರಿಯೆ ಚುರುಕು : ಮತಪೆಟ್ಟಿಗೆ ಸೇರುತ್ತಿರುವ ಅಭ್ಯರ್ಥಿಗಳ ಭವಿಷ್ಯ

ಮತದಾನ ಪ್ರಕ್ರಿಯೆ ಚುರುಕು : ಮತಪೆಟ್ಟಿಗೆ ಸೇರುತ್ತಿರುವ ಅಭ್ಯರ್ಥಿಗಳ ಭವಿಷ್ಯ

ಕುಮಟಾ : ಉತ್ತರಕನ್ನಡ ಲೋಕಸಭಾ ಕ್ಷೇತ್ರ ಚುನಾವಣೆಗೆ ಮತದಾನ ಪ್ರಕ್ರಿಯೆ ಇಂದು ಬೆಳಗ್ಗೆಯಿಂದ ಪ್ರಾರಂಭವಾಗಿದೆ. ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ (೭೮) ಮತದಾರರ ಪಟ್ಟಿಯಂತೆ ಒಟ್ಟೂ 1,89856 ಮತದಾರರಿದ್ದು, 94,624 ಪುರುಷರು, 95,229 ಮಹಿಳಾ ಮತದಾರರಿದ್ದಾರೆ. 159 ಸೇವಾ ಮತದಾರರು, 85 ವರ್ಷಕ್ಕೆ ಮೇಲ್ಪಟ್ಟ ಮತದಾರರು 2421 ಹಾಗೂ 2759 ವಿಕಲ ಚೇತನ ಮತದಾರರನ್ನು ಗುರುತಿಸಲಾಗಿದೆ. ಇಲ್ಲಿ ಒಟ್ಟೂ 215 ಮತಗಟ್ಟೆಗಳಿದ್ದು, ಕುಮಟಾ ತಾಲೂಕಿನಲ್ಲಿ 151, ಹೊನ್ನಾವರ ತಾಲೂಕಿನಲ್ಲಿ 64 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಹಿರಿಯ ನಾಗರೀಕರಿಗೆ ಹಾಗೂ ಅಂಗವಿಕಲರು ಈಗಾಗಲೇ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿದ್ದಾರೆ. ಮತಗಟ್ಟೆಗೆ ಬಂದು ಮತದಾನ ಮಾಡುವ ಆಸಕ್ತಿಯುಳ್ಳವರಿಗೂ ಅವಕಾಶ ಕಲ್ಪಿಸಲಾಗಿದೆ.

ತಾಲೂಕಿನಲ್ಲಿ ೫೯ ಸೂಕ್ಷ್ಮ, ೪ ಅತೀಸೂಕ್ಷ್ಮ ಮತಗಟ್ಟೆ ಗುರುತಿಸಲಾಗಿದೆ. ಒಟ್ಟೂ ೧೦೬೯ ಸಿಬ್ಬಂದಿಯ ನೇಮಕ ಮಾಡಲಾಗಿದೆ.

ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಸುಗಮ ಕಾರ್ಯ ನಡೆಯಲು ಚುನಾವಣಾ ತಂಡಗಳನ್ನು ರಚಿಸಲಾಗಿದೆ. 20 ಸೆಕ್ಟರ್ ಆಫೀಸರ್, 1 ಅಕೌಂಟ್ ಟೀಂ, 1 ವಿವಿಟಿ, 6 ಎಫ್‍ಎಸ್‍ಟಿ, 3 ವಿಎಸ್‍ಟಿ, 3 ಎಸ್‍ಎಸ್‍ಟಿ ಹೀಗೆ 9 ತಂಡಗಳನ್ನು ರಚಿಸಲಾಗಿತ್ತು, ಇನ್ನು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶಾಂತಿಯುತ ಮತದಾನಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಪ್ರಕ್ರಿಯೆ ಪ್ರಾರಂಭವಾಗಿದೆ.