ಶ್ರೀ ಸಂಸ್ಥಾನ || ಶ್ರೀ ರಾಮಚಂದ್ರಾಪುರ ಮಠ||
ಭಾವರಾಮಾಯಣ, ರಾಮಾವತರಣ
ಕೃತಿ ಪರಿಚಯ ಭಾಷಣದ ಮುಂದುವರೆದ ಭಾಗ….

ಅಧ್ಯಾಯ 3.
ಮುಗ್ಧಮುನಿ ಚರಿತ . ಪುಟ ಸಂಖ್ಯೆ 89 ರಿಂದ 120 ಒಟ್ಟೂ 33 ಉಪಶೀರ್ಷಿಕೆಗಳನ್ನು ಹೊಂದಿರುವ ಈ ಅಧ್ಯಾಯ ( ವಾಲ್ಮೀಕಿ ರಾಮಾಯಣದ 10,11ನೇ ಸರ್ಗದ ಅನುವಾದ ಆಗಿದೆ) ಮುಗ್ಧ ಮುನಿಯೋ ನಾಗನ ಹೆಡೆಯ ಮಣಿಯೋ ಎಂಬ ಉಪಶೀರ್ಷಿಕೆಯಿಂದ ಆರಂಭಗೊಂಡ ಈ ಅಧ್ಯಾಯದ ನಿರೂಪಣೆಯು ಅತ್ಯಂತ ಆಕರ್ಷಕ ಆಗಿದೆ
ವಿಭಾಂಡಕ ಮುನಿಯ ಪ್ರೀತಿಯ ಕವಚ ಬೇಧಿಸಿ ಋಷ್ಯಶೃಂಗರನ್ನು ಅಂಗದೇಶಕ್ಕೆ ಕರೆತರುವ ಸಾಹಸಕ್ಕೆ ಎಲ್ಲರೂ ಭಯಗೊಂಡು ಹಿಂದೆ ಸರಿದ ಸಂದರ್ಭದಲ್ಲಿ ಮಂತ್ರಿಗಳು‌,ಹಿರಿಯರ ಸಲಹೆಯಂತೆ ವೇಶ್ಯೆಯರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುವ ಯೋಜನೆ ಸಿದ್ಧವಾದಾಗ ತನ್ನ ನಾಡಿನ ಒಳಿತಿಗೆ ವೃದ್ಧ ವೇಶ್ಯೆಯೋರ್ವಳು ತ್ಯಾಗಕ್ಕೆ ಸಿದ್ಧವಾಗುವ ಸಂದರ್ಭ ಇದಕ್ಕೆ ಸಂಸ್ಥಾನ ನೀಡಿದ ಹೆಸರು ” ಆನೆಯಿಂದಾಗದ ಕೆಲಸ ಇರುವೆಯಿಂದ ಆಯಿತು”
ನಾವಾಶ್ರಮದ ವರ್ಣನೆ ವಾರಾಂಗನೆಯಿಂದ ಋಷ್ಯಶೃಂಗರ ಓಲೈಕೆ  ಮಗನನ್ನು ಉಳಿಸಿಕೊಳ್ಳಲು ಹೋರಾಡುವ ತಂದೆಯ ತಾಯ್ತನ ! ಕಾಳನ್ನು ಚೊಂಚಿನಲ್ಲಿ ತಂದು ಮರಿಗೆ ಊಡಿಸುವ ತಾಯಿ ಪಕ್ಷಿಯಂತಿರುವ ವಿಭಾಂಡರು ಇವೆಲ್ಲ ವರ್ಣಿಸಲಸದಳವಾದದ್ದು
ಮಗನನ್ನು ಕಾಣದೇ ಪರಿತಪಿಸುವ ತಾನು ಆತನ್ನು ಬೆಳೆಸಿದ ಬಗಗೆಗೆ ಪಶ್ಚಾತ್ತಾಪ ಪಡುವ ಸನ್ನಿವೇಶದಲ್ಲಿ ನನಗೆ ಇತ್ತೀಚಿನ ನಮ್ಮ ಶಿಕ್ಷಣದ ವ್ಯವಸ್ಥೆ ಹಾಗೂ ಬದಲಾದ ಕೌಟುಂಬಿಕ ಸನ್ನಿವೇಶದಲ್ಲಿ ಇಂದಿನ ಮಕ್ಕಳು ಅತ್ಯಂತ ಅಸಾಹಯಕರಾಗಿ ಮನೆಯಿಂದ ಹೊರಹೋಗಿ ಬರುವ ತಿಳುವಳಿಕೆಯೂ ಇಲ್ಲದೇ ತರಕಾರಿ ತರುವಾಗ ಅಡಿಯಲ್ಲಿ ಟೊಮ್ಯಾಟೊ ಮೇಲೆ ಬೀಟರೂಟ್ ಹಾಕಿಕೊಂಡು ಬರುವ ಅವಸ್ಥೆಯೇ ನೆನಪಾಯಿತು.ಒಟ್ಟಾರೆಯಾಗಿ ಈ ಅಧ್ಯಾಯದ ಬಗ್ಗೆ ನನ್ನ ಅಭಿಪ್ರಾಯ ಎಂದರೆ ”  ಶೃಂಗಾರ ರಸವೇ ಪ್ರಧಾನವಾಗಿ ಮೇಳೈಸಬಹುದಾದ ಈ ಸನ್ನಿವೇಶದಲ್ಲಿ ಎಲ್ಲಿಯೂ ಮಡಿಗೆ ಮೈಲಿಗೆ ಆಗದಂತೆ ಹೇಳಬೇಕಾದದ್ದನ್ನು ಹೇಳದೆಯೇ ಹೇಳಿ ಮುಂದೆ ಸಾಗಬಲ್ಲ ಚತುರತೆ ಸಂಸ್ಥಾನಕ್ಕಲ್ಲದೇ ಇನ್ಯಾರಿಗೆ ಸಾಧ್ಯ ?( ಋಷ್ಯಶ್ರಂಗ _ ವಾರಾಂಗನೆ )
ಆದ್ಯಾಯ 4.ಅಶ್ವಮೇಧ ಪುಟ ಸಂಖ್ಯೆ 121 ರಿಂದ 164 ಒಟ್ಟೂ 42 ಉಪಶೀರ್ಷಿಕೆಗಳು ( ವಾಲ್ಮೀಕಿ ರಾಮಾಯಣದ 11,12,13 ನೇ ಸರ್ಗ)
ಮಳೆಕೊಟ್ಟವನು ಮಕ್ಕಳನ್ನೂ ಕೊಟ್ಟಾನು
ದಶರಥ ಚಕ್ರವರ್ತಿ ರೋಮಪಾದ ರಾಜನನ್ನು
ಕಂಡು ಅಳಿಯನನ್ನು ಕಳುಹಿ ಕೊಡುವಂತೆ ಮನವಿ ಮಾಡುವ
ಸರಯೂ ನದಿಯ ಆಚೆ ಯಾಗ ಮಂಟಪರಚನೆ ,ಆಮಂತ್ರಣ ,ದಾನ ,
ಲೋಪವಿಲ್ಲದ ಅಪರೂಪಯಾಗದ ವರ್ಣನೆ ದಶರಥನಿಂದ ಸರ್ವಸ್ವ ಸಮರ್ಪಣೆ
ಅಡುಗೆ ಹಾಗೂ ಬಡಿಸುವವ ಬಗ್ಗೆ ವಿವರಣೆ
ಕೆಲವೊಮ್ಮೆ ಅಡುಗೆಯವರನ್ನು ಕಂಡರೆ ಊಟ ಬೇಡ ಅನಿಸುತ್ತದೆ.ಬಡಿಸುವವರನ್ನು ಕಂಡರೆ ಮೊದಲು ಮಾಡಿದ ಊಟವೂ ಮೇಲುದಾರಿ ಹಿಡಿಯುತ್ತದೆ!
ಎಂಬ ಮಾತು ಒಂದು ರೀತಿಯಲ್ಲಿ‌ ಎಚ್ಚರಿಕೆಯ ಹಾಗಿದೆ !

RELATED ARTICLES  ಭರವಸೆಯಿಲ್ಲದ ಜೀವನ: ಭಾಗ-1

ಯಜ್ಞ ದಕ್ಷಿಣೆಗಳು ವಿಷ್ಣು ಲಕ್ಷ್ಮಿಯರು ಎಂಬ ಉಪಶೀರ್ಷಿಕೆಯೊಂದಿ ಈ ಅಧ್ಯಾಯ ಕೊನೆಗೊಂಡಿದೆ ನಡುವೆ ಹಲವಾರು ಅನನ್ಯ ವಿಷಯಗಳ ಉಲ್ಲೇಖವಿದೆ.

*.
ಅಧ್ಯಾಯ 5. ಪುತ್ರಕಾಮೇಷ್ಟಿ .ಪುಟ ಸಂಖ್ಯೆ 165 ರಿಂದ 188( ವಾಲ್ಮೀಕಿ ರಾಮಾಯಣದ ಬಾಲ ಕಾಂಡ15,16 ಸರ್ಗ) ಒಟ್ಟೂ 34 ಉಪ ಶೀರ್ಷಿಕೆಗಳು‌ ಈ ಅಧ್ಯಾಯದಲ್ಲಿ ಇದೆ.

ಮರಿಹಾಕುವ ಭಾವಗಳು,

RELATED ARTICLES  ದಿನದ ದೀವಿಗೆ

ರಾವಣನ ಜನನ ಆತನ ಕ್ರೌರ್ಯ ,ಆತನ ನಿಗ್ರಹಕ್ಕಾಗಿ ದೇವತೆಗಳಿಂದ ಬ್ರಹ್ಮದೇವರಲ್ಲಿ ಮೊರೆಹೋಗುವ
ಕಡೆಯಲ್ಲಿ ದಶರಥನಿಗೆ ಪಾಯಸ ಪ್ರಾಪ್ತಿಯ ಪರಮಾನಂದದ ತನಕ ಈ ಅಧ್ಯಾಯಲ್ಲಿ ಅನೇಕ ಸಂಗತಿಗಳ ಅರಿವು ನಮಗಾಗುತ್ತದೆ.


ಕೊನೆಯದಾಗಿ
ಅಧ್ಯಾಯ 6. ಅವತರಣ.ಪುಟಸಂಖ್ಯೆ 189 ರಿಂದ 224 ರ ವರೆಗೆ ಒಟ್ಟೂ 31 ಸುಂದರವಾದ ಉಪಶೀರ್ಷಿಕೆಗಳು
ಆನಂದ…..ಅತ್ಯಾನಂದ. ‌…..ಪರಮಾನಂದ
ಕಾಯುವಿಕೆಯ ಕೋಟಿ ಕೋಟಿ ಪ್ರತೀಕ್ಷೆಗಳು
ರಾಮನ ಆಗಮನ ಕೇವಲ ದಶರಥನ ಪ್ರತೀಕ್ಷೆ ಮಾತ್ರವಾಗಿರದೇ ಒಟ್ಟೂ 64 ಅಂಶಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ ಒಂದೊಂದನ್ನು ಓದುವುದು ರೋಮಾಂಜನಕಾರಿ ಅನುಭವ.
ವಾಲಿ,ಸುಗ್ರೀವ ,ಜಾಂಬವಂತ, ನಳ ,ನೀಲ ಹನೂಮಂತ ಮೊದಲಾದವರು ಧರೆಗಿಳಿದ ವಿವರಗಳು
.
ಶ್ರೀರಾಮ ಹನ್ನೆರಡು ಮಾಸಗಳ ಪರ್ಯಂತ ತಾಯ ಗರ್ಭದಲ್ಲಿ ಇರಬೇಕಾದರೆ ಆಗರ್ಭ ಎಷ್ಟು ಹಿತವಾಗಿರಬೇಕು ಎಂಬ ವರ್ಣನೆ..
ಕಡೆಯಲ್ಲಿ ರಾಮಾವತಾರ
ಕೌಸಲ್ಯೆ ವಿಶ್ವಂಭರನನ್ನು ಹೊತ್ತಳು,ಹೆತ್ತಳು: ಹಾಲ್ಗಡಲೊಡಯನಿಗೆ ಹಾಲೂಡಿಸಿದಳು
ಜಗ ನಡೆಸುವವನಿಗೆ ನಡೆಗಲಿಸಿದಳು!
ಮಾಧವನ ಮಾತೆಗೆ,ಮಾತೃತ್ವದ ಮುಕುಟಮಣಿಗೆ, ಮಹಾಪುಣ್ಯವತಿಗೆ ನಮೋ ನಮಃ.

ಸಾವಣ್ಣ ಎಂಟರ್ಪ್ರೈಸಸ್ ಪ್ರಕಾಶನದಲ್ಲಿ
ಒಳಪುಟ ವಿನ್ಯಾಸ ವಿಜಯ್ ವಿಕ್ರಮ್
ಚಿತ್ರ ಕಲಾವಿದರಾದ ನೀರ್ನಳ್ಳಿ ಗಣಪತಿ ಯವರು ರಚಿಸಿದ ಸುಂದರ ಒಳಪುಟ
ರೇಖಾಚಿತ್ರ ಒಳಗೊಂಡ ಈ ಅನುಪಮ ಕೃತಿಯನ್ನು‌ ನನ್ನ ಮಿತಿಯಲ್ಲಿ ದೊರೆತ ಸಮಯದಲ್ಲಿ ಯಥಾಸಾಧ್ಯ ಪರಿಚಯಿಸಿರುವೆ ಇಲ್ಲಿ ನೆರೆದಿರುವ ಶ್ರೀಸಂಸ್ಥಾನದ ಅನುಯಾಯಿಗಳು ಮುಖ್ಯವಾಗಿ ಎಲ್ಲಾ ವಿದ್ಯಾರ್ಥಿಗಳು ಈ‌ ಕೃತಿಯನ್ನು ಓದಲೇ ಬೇಕೆಂದು ವಿನಂತಿಕೊಂಡು ನನ್ನ ಮಾತುಗಳಿಗೆ ಮುಕ್ತಾಯ ಹೇಳುತ್ತಿದ್ದೇನೆ.
ಹರೇ ರಾಮ

ವಂದೇಮಾತರಂ

ಕಾಗಾಲ ಚಿದಾನಂದ ಭಂಡಾರಿ