ನದಿಗಳಲ್ಲಿ ಒಂದು ತೀರದಿಂದ ಇನ್ನೊಂದು ತೀರಕ್ಕೆ ಹೋಗಲು ಮಾಡುವ ಸಂಪರ್ಕಕ್ಕೆ ಸೇತುವೆ ಎಂದು ಹೇಳುವುದು ಎಲ್ಲರಿಗೂ ತಿಳಿದ ವಿಷಯ. ಮನುಷ್ಯನಿಗೂ ಸೇತುವೆಗೂ ಏನು ಹೋಲಿಕೆ ಇದೆ? ಸೇತುವೆಯನ್ನು ನದಿ ದಾಟಲು ಬಳಸುತ್ತೇವೆ ಅಷ್ಟೇ ಇದರಲ್ಲಿ ವಿಶೇಷವೇನೂ ಇಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ಒಳಾರ್ಥ ನೋಡಿದಾಗ ಸೇತುವೆಯಿಂದ ಮನುಷ್ಯ ಕಲಿಯುವುದು ಬಹಳಷ್ಟು ಇದೆ ಎನಿಸುತ್ತದೆ. ಆದರೂ ಮನುಷ್ಯನೇ ಸೇತುವೆಯನ್ನು ನಿರ್ಮಿಸಿರುವಾಗ ಅದರಿಂದ ಕಲಿಯುವುದು ಎಂದರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.
ಸೇತುವೆಯು ಮಾನವ ನಿರ್ಮಿತವಾಗಿದ್ದು, ಸೇತುವೆ ಇಲ್ಲದಿದ್ದರೆ ನಾವು ಒಂದು ತೀರದಿಂದ ಇನ್ನೊಂದು ತೀರಕ್ಕೆ ಹೋಗುವುದು ಬಹಳ ಕಷ್ಟ. ಈಜಿ ದಡ ಸೇರಲು ಈಜು ಬರಬೇಕು, ಶಕ್ತಿ ಇರಬೇಕು ಎಲ್ಲವೂ ಇದ್ದಲ್ಲಿ ಈಜಿ ದಡ ಸೇರಬಹುದು. ಈಜುವಾಗ ತಿಮಿಂಗಲಗಳು, ಮೊಸ¼ಗಳುÉ ಬಂದು ಆಕ್ರಮಣ ಮಾಡಬಹುದು ಅಥವಾ ಅನಿರೀಕ್ಷಿತ ಪ್ರವಾಹ ಬಂದು ನಮ್ಮನ್ನು ಯಾವುದಾದರೂ ದೊಡ್ಡ ಹಳ್ಳಕ್ಕೆ ನೂಕಬಹುದು, ಅಥವಾ ಕೊರಕಲಿಗೆ ಸಿಲುಕಿಸಬಹುದು. ಎಲ್ಲರೂ ಈಜಿ ದಡ ಸೇರುತ್ತೇವೆಂದರೆ ಆಗುವುದಿಲ್ಲ. ದೊಡ್ಡವರು ವಯಸ್ಸಾದವರು, ಹೆಂಗಸರು ಮಕ್ಕಳು ಎಲ್ಲರೂ ಇರುತ್ತಾರೆ. ಎಲ್ಲರೂ ಈಜಿ ನದಿದಾಟಲು ಎಲ್ಲರೂ ಈಜು ಕಲಿತಿರುವುದಿಲ್ಲ. ಇದೆಲ್ಲಾ ತೊಂದರೆಗಳನ್ನು ತಪ್ಪಿಸಿ ಕೊಳ್ಳಲು ನಾವುಗಳು ಸೇತುವೆ ಕಟ್ಟಿ ಸಂಪರ್ಕ ಸಾಧಿಸಬಹುದು. ಇದರಿಂದ ಯಾವ ತೊಂದರೆಯು ಇಲ್ಲದೆ ನದಿ ದಾಟಬಹುದು.
ಇದೇ ರೀತಿ, ನಮ್ಮ ನದಿ ಎಂಬ ಜೀವನದಲ್ಲಿ ನಾವೊಂದು ತೀರದಲ್ಲಿದ್ದರೆ, ಎದುರಿನ ತೀರದಲ್ಲಿ ಭಗವಂತನು ಇದ್ದಾನೆ ಅವನನ್ನು ಸೇರಬೇಕಾದರೆ ನಾವುಗಳು ನೇರವಾಗಿ ಹೋಗಲು ಸಾಧ್ಯವಿಲ್ಲ, ಅದಕ್ಕೂ ಸೇತುವೆಯ ಸಂಪರ್ಕ ಕಲ್ಪಿಸಿ ನಾವು ದೇವರ ಸಾನಿಧ್ಯವನ್ನು ತಲುಪಬೇಕು. ಅದಕ್ಕೆ ಯಾವ ರೀತಿಯ ಸಂಪರ್ಕ ಕಲ್ಪಿಸಬೇಕು ಎಂದರೆ ಭಕ್ತಿ ಎಂಬ ಸೇತುವೆಯನ್ನು ಕಟ್ಟಿ ಅದರಿಂದ ದೇವರ ಸಾನಿಧ್ಯವನ್ನು ಪಡೆಯಬಹುದು.
ಭಕ್ತಿ ಇಲ್ಲದೆ ನಾವುಗಳು ದೇವರ ಸಾನಿಧ್ಯ ಪಡೆಯಲು ಸಾಧ್ಯವಿಲ್ಲ, ಆದರೆ ಈ ಕಾರ್ಯವನ್ನು ಮಾಡುವುದು ಬಹಳ ಕಷ್ಟ. ದೇವರು ಹಾಗೂ ನಮ್ಮಗಳ ಮದ್ಯೆ ಕಷ್ಟ, ಸುಖ, ಸಾವು ನೋವುಗಳೆಂಬ ನೀರಿನಿಂದ ಕೂಡಿದ ನದಿ ಹರಿಯುತ್ತಿರುತ್ತದೆ. ಈ ನದಿಯಲ್ಲಿ ಅರಿಷಡ್ವರ್ಗ ಎಂಬ ಪ್ರವಾಹ ಯಾವಾಗಲೂ ಬರುತ್ತಲೇ ಇರುತ್ತದೆ. ಈ ಎಲ್ಲಾ ಪ್ರವಾಹಗಳು ನಾವು ದೇವರನ್ನು ಸಂಪರ್ಕಿಸಲು ಕಟ್ಟುತ್ತಿರುವ ಸೇತುವೆಯನ್ನು ಶಿಥಿಲ ಗೊಳಿಸಿ ಸೇತುವೆಯನ್ನು ಕೊಚ್ಚಿಕೊಂಡು ಹೋಗಿ, ನಮ್ಮನ್ನು ಯಾವ ಕೊರಕಲಿನಲ್ಲಿ ಬೀಳಿಸುವುದೋ? ಅಥವಾ ಸುಳಿಯಲ್ಲಿ ಸಿಲುಕಿಸುವುದೋ? ತಿಳಿಯುವುದಿಲ್ಲ. ಕೊರಕಲು ಎಂದರೆ ಕಷ್ಟ ದುಃಖಗಳು ಸಾವು ನೋವುಗಳು, ಸುಳಿ ಎಂದರೆ ಮೋಹದ ಸುಳಿ. ನೀರಿನ ಸುಳಿಯಲ್ಲಿ ಸಿಕ್ಕ ಮನುಷ್ಯನು ಯಾವ ರೀತಿ ಬಿಡಿಸಿಕೊಂಡು ಬರಲು ಸಾಧ್ಯವಿಲ್ಲವೋ ಅದೇರೀತಿ ಮೋಹದ ಸುಳಿಯಲ್ಲಿ ಸಿಕ್ಕ ಮನುಷ್ಯನು ಬಿಡಿಸಿಕೊಂಡು ಹೊರಬರಲು ಸಾಧ್ಯವೇ ಇಲ್ಲ. ಯಾವುದೇ ಪ್ರವಾಹ, ಕೊರಕಲು ಸುಳಿಯಲ್ಲಿ ಸಿಕ್ಕದಂತೆ ಸೇತುವೆಯನ್ನು ನಿರ್ಮಿಸಲು ಭಕ್ತಿ ಇರಬೇಕು. ಭಕ್ತಿ ಎಂಬ ಸೇತುವೆ ನಿರ್ಮಿಸಬೇಕು. ಸೇತುವೆ ನಿರ್ಮಿಸಲು ಸಿಮೆಂಟ್, ಕಬ್ಬಿಣ, ಮರಳು ನೀರು ಜಲ್ಲಿ ಹಾಕುವಂತೆ, ನಾವು ಶ್ರದ್ದೆ, ಸನ್ಮಾರ್ಗ ಇದ್ದರೆ ಭಕ್ತಿ ಎಂಬ ಸೇತುವೆಯನ್ನು ಖಂಡಿತ ನಿರ್ಮಿಸಬಹುದು.
ಈ ಎಲ್ಲಾ ಪ್ರವಾಹಗಳು ನಾವು ದೇವರನ್ನು ಸಂಪರ್ಕಿಸಲು ಕಟ್ಟುತ್ತಿರುವ ಭಕ್ತಿಯ ಸೇತುವೆಯನ್ನು ಶಿಥಿಲ ಗೊಳಿಸಿ ಸೇತುವೆಯು ಕೊಚ್ಚಿಕೊಂಡು ಹೋಗಿ, ನಮ್ಮನ್ನು ಯಾವ ಕೊರಕಲು ಅಥವಾ ಸುಳಿಯಲ್ಲಿ ಬೀಳಿಸುವುದೋ? ಕೊರಕಲು ಎಂದರೆ ಕಷ್ಟಗಳು. ಸುಳಿ ಎಂದರೆ ಮೋಹದ ಸುಳಿ. ನೀರಿನ ಸುಳಿಯಲ್ಲಿ ಸಿಕ್ಕ ಮನುಷ್ಯನು ಯಾವರೀತಿ ಬಿಡಿಸಿಕೊಂಡು ಬರಲು ಸಾಧ್ಯವಿಲ್ಲವೋ ಅದೇರೀತಿ ಮೋಹದ ಸುಳಿಯಲ್ಲಿ ಸಿಕ್ಕ ಮನುಷ್ಯನು ಬಿಡಿಸಿಕೊಂಡು ಹೊರಬರಲು ಸಾಧ್ಯವೇ ಇಲ್ಲ. ಯಾವರೀತಿ ನೀರಿನ ಸುಳಿಯಲ್ಲಿ ಸಿಕ್ಕ ಮನುಷ್ಯನು ಮುಳುಗುತ್ತಾನೋ ಅದೇರೀತಿ ಮೋಹವೆಂಬ ಸುಳಿಯಲ್ಲಿ ಸಿಕ್ಕಿದರೂ ಕಷ್ಟದಲ್ಲಿ ಮುಳುಗುತ್ತಾನೆ. ದೇವರ ಸಾನಿಧ್ಯ ಸಾಧಿಸಲು ಪ್ರವಾಹ, ಕೊರಕಲು ಸುಳಿಯಲ್ಲಿ ಸಿಕ್ಕದಂತೆ ಮಾಡಲು ದೃಡವಾದ ಭಕ್ತಿ ಎಂಬ ಸೇತುವೆ ನಿರ್ಮಿಸಬೇಕು. ಸೇತುವೆ ನಿರ್ಮಿಸಲು ಸಿಮೆಂಟ್, ಕಬ್ಬಿಣ, ಮರಳು ನೀರು ಜಲ್ಲಿ ಬೆರೆಸಿ ಕಟ್ಟುವಂತೆ ಮನುಷ್ಯನು ಶ್ರದ್ದೆ, ಸನ್ಮಾರ್ಗ ಪರೋಪಕಾರ ಎಂಬ ಗುಣವನ್ನು ಹೊಂದಿ ಭಕ್ತಿ ಎಂಬ ಸೇತುವೆಯನ್ನು ಖಂಡಿತ ನಿರ್ಮಿಸಬಹುದು.
ಸೇತುವೆಯನ್ನು ಒಳ್ಳೆಯ ಇಂಜಿನಿಯರ್ ಮಾರ್ಗದರ್ಶನದಿಂದ ನಿರ್ಮಿಸುವಂತೆ, ಭಕ್ತಿ ಎಂಬ ಸೇತುವೆಯನ್ನು ಗುರುಗಳ ಹಾಗೂ ಹಿರಿಯರ ಮಾರ್ಗದರ್ಶನದಿಂದ ನಿರ್ಮಿಸಬಹುದು. ಸೇತುವೆಯನ್ನು ನಿರ್ಮಿಸುವಾಗ ಅಕಸ್ಮಾತ್ ಮಳೆ ಸಿಡಿಲು ಬಂದು ಸೇತುವೆಯನ್ನು ಛಿದ್ರ ಮಾಡುವಂತೆ, ಭಕ್ತಿಯ ಸೇತುವೆಯನ್ನು ನಿರ್ಮಿಸುವಾಗಲೂ ಅನೇಕ ಅಡೆತಡೆಗಳು ಬಂದು ಧೃಡ ಭಕ್ತಿಯನ್ನು ಶಿಥಿಲಗೊಳಿಸಬಹುದು. ಇದನ್ನು ತಪ್ಪಿಸಲು ಸರಿಯಾದ ಕಾಲದಲ್ಲಿ ಸೇತುವೆಯನ್ನು ನಿರ್ಮಿಸಲು ಉಪಾಯಗಳನ್ನು ಅನುಸರಿಸುವಂತೆ, ಭಕ್ತಿ ಎಂಬ ಸೇತುವೆ ನಿರ್ಮಿಸುವಾಗ ಅಡೆತಡೆಗಳು ಬಂದಲ್ಲಿ ಉಪಾಯದಿಂದ ಮನಸ್ಸನ್ನು ಚಂಚಲಗೊಳಿಸದೆ ದೃಢವಾದ ಮನಸ್ಸಿನಿಂದ ನಿರ್ಮಿಸಬೇಕು. ಸೇತುವೆಯನ್ನು ನಿರ್ಮಿಸುವಾಗ ಮೀನು ಮೊಸಳೆಗಳು ಅಡ್ಡ ಬಂದಂತೆ, ಭಕ್ತಿಯ ಸೇತುವೆ ನಿರ್ಮಿಸುವಾಗ ರಾಗ ದ್ವೇಷಗಳೆಂಬ ಮೊಸಳೆಗಳು, ತಿಮಿಂಗಿಲಗಳು ಅಡ್ಡ ಬಂದಲ್ಲಿ ಅವುಗಳನ್ನೂ ಎದುರಿಸಿ, ಒಂದೇ ದೃಡ ಮನಸ್ಸಿನಿಂದ ಭಕ್ತಿ ಎಂಬ ಸೇತುವೆಯಿಂದ ದೇವರ ಸಾನಿಧ್ಯ ತಲುಪಬಹುದು.
ಇದೇರೀತಿ ಮನುಷ್ಯನಿಗೂ ಅವನ ಗುರಿಗೂ ನಡುವೆ ಚಂಚಲ ಮನಸ್ಸು, ಹಣಕಾಸಿನ ಸಮಸ್ಯೆ, ಕುಟುಂಬದಲ್ಲಿನ ಕಷ್ಟಗಳು ಹೀಗೆ ಅನೇಕ ರೀತಿಯ ಅಡತಡೆಗಳನ್ನು ಹೊಂದಿರುವ ನದಿಯು ಹರಿಯುತ್ತಾ ಇರುತ್ತದೆ. ಇದೆಲ್ಲವನ್ನು ಎದುರಿಸಿ ದೂರದಲ್ಲಿರುವ ಜೀವನದ ಗುರಿಯನ್ನು ತಲುಪಬೇಕಾದರೆ ದೃಢವಾದ ಮನಸ್ಸು ಗುರು ಹಿರಿಯರ ಮಾರ್ಗದರ್ಶನ ಮತ್ತು ಒಳ್ಳೆಯವರಿಂದ ಸಹಾಯವನ್ನು ಪಡೆದು ಗುರಿಯನ್ನು ಸಾಧಿಸಬಹುದು. ನಾನೇ ಬುದ್ದಿವಂತ ನನಗೆ ಬೇರೊಬ್ಬರ ಸಹಾಯ ಮತ್ತು ಹಂಗೇಕೆ ಎಂದು ಅಹಂಕಾರದಿಂದ ಮುನ್ನುಗ್ಗಿದರೆ, ನದಿಯಲ್ಲಿ ಪ್ರವಾಹ ಬಂದು ಎಲ್ಲಿಯೋ ಕೊಚ್ಚಿಕೊಂಡು ಹೋಗುವಂತೆ, ಸರಿಯಾದ ಸ್ಪಷ್ಟವಾದ ಗುರಿಯನ್ನು ತಲುಪದೆ ಹೋಗಬಹುದು.