ಮನೆ ಮನದಲ್ಲಿ ನೆಲೆಸಿರುವೆ ನೀ ಗೋಮಾತೆ
ನಿನಗೆ ನಾ ಶರಣು ಶರಣೆನುವೆ ಹೇಮಾತೆ |
ಮುಂಜಾನೆಯೆ ಎದ್ದು ನಿನಗೆ ನಾ ನಮಿಸುವೆ
ಮುಕ್ಕೋಟಿ ದೇವರುಗಳ ನಾನಿನ್ನಲಿ ಕಾಣುವೆ ||

ನಾನು ನಿನಗೆ ಅನ್ನ ಬೆಲ್ಲ ಹುಲ್ಲನು ನೀಡುವೆ
ಗುರುಗಳಾದೇಶದಂತೆ ಅಭಯವನು ನೀಡುವೆ |
ನೀ ಕೊಟ್ಟ ಹಾಲನ್ನು ದೇವನಿಗೆ ಅರ್ಪಿ‌ಸುವೆ
ಪ್ರಸಾದ ರೂಪದಲಿ ಮತ್ತೆ ನಾ ಸೇವಿಸುವೆ|

RELATED ARTICLES  ಧರ್ಮೋ ರಕ್ಷತಿ ರಕ್ಷಿತಃ

ಬಲಿಪಾಡ್ಯಮಿ ದಿನದಂದು ಮಾತೆ ನಿನ್ನನು ಪೂಜಿಸುವೆ
ಪಾಯಸಾನ್ನ ಹೋಳಿಗೆಯ ಗ್ರಾಸ ವಾಗಿ ನಾ ನಿವೇದಿಸುವೆ||
ಶ್ರೀ ರಾಮಚಂದ್ರಾಪುರಮಠವಿಂದು ನಿನಗೆ ಅಭಯವನಿತ್ತಿಹುದು
ಜಗನ್ಮಾತೆಯಾಗಿ ನಿಂತು ನಮ್ಮ ಸಲಹೆನುತ
ನಿನಗೆ ವಂದಿಸುವೆ ||

RELATED ARTICLES  ತೃಣಕ್ಕೆ ಸಮಾನ ನೀ ಮನುಜ

ಭಾಗ್ಯ ಲಕ್ಷ್ಮಿ ಎಡಕ್ಕಾನ