ಬರಹ:ಪ್ರಸನ್ನ ಎಂ ಮಾವಿನಕುಳಿ
ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಘನತೆವೆತ್ತ ನ್ಯಾಯಾಲಯದಿಂದ ಬಂದ ತೀರ್ಪು ಕೆಲವು ಕುಹಕಿಗಳ ಸುಳ್ಳು ಪ್ರಚಾರದ ಕಪ್ಪಿಗೆ ಮತ್ತೊಮ್ಮೆ ಬೆಳಕನ್ನು ತೋರಿದೆ
ನಮ್ಮ ಕುಲ ಗುರುಗಳಾದ ಕುಲ ಪೀಠವಾದ ಶ್ರೀ ರಾಮಚಂದ್ರಾಪುರ ಮಠದ ಪರಮ ಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಮತ್ತೊಂದು ಅಂಗವಾಗಿ , ಮತ್ತದೇ ಕೆಲವು ಕುಹಕಿಗಳ ಕುಮ್ಮಕ್ಕಿನಿಂದ ಕೆಲವು ವ್ಯಕ್ತಿಗಳು ಪೂಜ್ಯ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳನ್ನು ಪೀಠ ತ್ಯಾಗ ಮಾಡುವಂತೆ ನ್ಯಾಯಾಲಯದ ಮೊರೆ ಹೋಗಲು ಅನುಮತಿ ಕೋರಿ ಘನತೆವೆತ್ತ ನ್ಯಾಯಾಲಯದ ಮೊರೆ ಹೋಗಿದ್ದರು
ಈ ಬಾರಿ ಅವರು ಉಪಯೋಗಿಸಿದ ಅಸ್ತ್ರ ಭಾರತೀಯ ಸಿವಿಲ್ ಪ್ರೊಸೀಜರ್ ಕೋಡ್ ಸೆಕ್ಷನ್ 92. ಆ ಸೆಕ್ಷನ್ ಯಾವುದೇ ಧಾರ್ಮಿಕ ಅಥವಾ ಸಾರ್ವಜನಿಕ ಟ್ರಸ್ಟ್ ನ ಮುಖ್ಯಸ್ಥ ಸಾರ್ವಜನಿಕರ ನಂಬಿಕೆಗಳಿಗೆ ದ್ರೋಹ ಮಾಡಿದ್ದಲ್ಲಿ , ಅಂತಹವರನ್ನು ಅಂತಹ ಮುಖ್ಯಸ್ಥರ ಸ್ಥಾನದಿಂದ ಬದಲಾಯಿಸಬೇಕೆಂಬ ಅಥವಾ ಆ ಧಾರ್ಮಿಕ / ಸಾರ್ವಜನಿಕ ಟ್ರಸ್ಟ್ ನ ಹಿತಾಸಕ್ತಿ ಸರ್ಕಾರದಿಂದ ರಕ್ಷಣೆ ಮಾಡಲು ಮನವಿ ಸಲ್ಲಿಸಲು ಅವಕಾಶ ಕೊಡುವ ಸೆಕ್ಷನ್ ಮತ್ತು ಕಾನೂನು ..
ಹಾಗೆ ನ್ಯಾಯಾಲಯದ ಮೊರೆ ಹೋದ ವ್ಯಕ್ತಿಗಳು ತಮ್ಮ ಸಾಕ್ಷಿಯಾಗಿ ಉಪಯೋಗಿಸಿದ್ದು ಘನತೆವೆತ್ತ ನ್ಯಾಯಾಲಯದ ತೀರ್ಪನ್ನೇ ಪೂಜ್ಯ ಶ್ರೀಗಳ ಮೇಲೆ ದಾಖಲಾದ ಅತ್ಯಾಚಾರದ ದೂರನ್ನು ಸುಳ್ಳೆಂದೂ , ಅವು ಷಡ್ಯಂತ್ರದ ಭಾಗವೇ ಎಂದು ನ್ಯಾಯಾಲಯ ಶ್ರೀಗಳನ್ನು ನಿರ್ದೋಷಿ ಎಂದು ಉದ್ಘೋಷಿಸುವ ತನ್ನ ತೀರ್ಪಿನಲ್ಲಿ ಹೇಳಿದ್ದು ನಮಗೆಲ್ಲರಿಗೂ ಗೊತ್ತೇ ಇದೆ . ಆದರೆ ಇದೇ ತೀರ್ಪಿನಲ್ಲಿ ಅತ್ಯಾಚಾರ ಆಗಿಲ್ಲ ಆದರೆ ಅಲ್ಲಿ ಅನೈತಿಕ ಸಂಭಂದ ಇತ್ತು ಎಂದು ಪ್ರಸ್ತಾಪವಾಗಿತ್ತು ಎಂದು ಕೆಲವು ಸ್ವಹಿತಾಸಕ್ತಿ ಉಳ್ಳ ಕೆಲವು ಕುಹಕ ವ್ಯಕ್ತಿಗಳುತಮ್ಮ ಮೂಗಿನ ನೇರಕ್ಕೆ ತಿರುಚಿ ಸುಳ್ಳು ಪ್ರಚಾರ ಮಾಡುತ್ತಿದ್ದಂತೆಯೇ , ಘನತೆವೆತ್ತ ನ್ಯಾಯಾಲಯವನ್ನೂ ಕೂಡ ಅದೇ ರೀತಿ ದಾರಿ ತಪ್ಪಿಸುವ ಉದ್ದೇಶದಿಂದ , ಅದೇ ಕಾರಣವನ್ನು ಇಟ್ಟುಕೊಂಡು ಶ್ರೀಗಳ ಪೀಠ ತ್ಯಾಗದ ಕುರಿತಾಗಿ ನ್ಯಾಯಾಲಯ ಆದೇಶ ಮಾಡಲು ಮುಂದುವರೆಯಬೇಕು ಎಂಬುವ ಮನವಿಯನ್ನು ನ್ಯಾಯಾಲಯಕ್ಕೆ ಕೆಲವು ವ್ಯಕ್ತಿಗಳ ಮೂಲಕ ಸಲ್ಲಿಸಲಾಯಿತು .
ಇಂತಹ ಒಂದು ಮಹತ್ತರ ಪರಿಣಾಮ ಇರುವ / ದುರುದ್ದೇಶ ಇರುವ ಈ ಪ್ರಕರಣದಲ್ಲಿ ನ್ಯಾಯಾಲಯದ ಘನತೆವೆತ್ತ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ . ಈ ತೀರ್ಪು ಕೇವಲ ದೂರುದಾರರಿಗೆ ಶ್ರೀಗಳ ಪೀಠತ್ಯಾಗದ ಕುರಿತಾದ ಬೇಡಿಕೆಯನ್ನು ವಜಾ ಮಾಡಿಲ್ಲ . ಬದಲಾಗಿ ಅವರು ಕೊಟ್ಟ ಕಾರಣಗಳನ್ನು ಸಾರಾ ಸಗಾಟಾಗಿ ತಳ್ಳಿ ಹಾಕಿದೆ . ತನ್ಮೂಲಕ ಪೂಜ್ಯ ಶ್ರೀಗಳು ನಿರ್ದೋಷಿ ಎಂದು ಕೊಟ್ಟ ತೀರ್ಪಿನಲ್ಲೂ ಮೊಸರಲ್ಲಿ ಕಲ್ಲು ಹುಡುಕುವ ಮನಸ್ಸಿನಂತೆ , ಅದನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದ ಕುಹಕಿಗಳ ಎಲ್ಲಾ ಪ್ರಯತ್ನಗಳಿಗೆ ಸರಿಯಾದ ಉತ್ತರ ಕೊಟ್ಟಿದೆ
ನ್ಯಾಯಾಲಯ ಅತ್ಯಂತ ಸ್ಪಷ್ಟವಾಗಿ ತನ್ನ ಈಗಿನ ತೀರ್ಪಿನಲ್ಲಿ , ಪೂಜ್ಯ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳನ್ನು ನಿರ್ದೋಷಿ ಎಂದು ಹೇಳಿದ ತೀರ್ಪಿನಲ್ಲಿ ಎಲ್ಲಿಯೂ ಕೂಡ ಶ್ರೀಗಳು ದೂರುದಾರರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬುದರ ಪ್ರಸ್ತಾಪ ಇಲ್ಲವೇ ಇಲ್ಲ ಎಂದು ಘನತೆವೆತ್ತ ನ್ಯಾಯಾಲಯಒತ್ತಿ ಹೇಳಿದೆ
ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀಗಳನ್ನು ನಿರ್ದೋಷಿ ಎಂದು ಸಾರಾಸಗಟಾಗಿ ಎತ್ತಿ ಹೇಳಿದ ಕೋರ್ಟ್ ನ ನೂರಾಹದಿನಾರು ಪುಟಗಳ ಆದೇಶದ ಮುಖ್ಯ ಅಂಶಗಳನ್ನು ಮತ್ತೊಮ್ಮೆ ಮೆಲುಕು ಹಾಕುವುದು ಇಲ್ಲಿ ಪ್ರಸ್ತುತವೆನಿಸುತ್ತದೆ
ಪುಟ ನಲವತ್ತರಿಂದ ನಲವತ್ತಾಲ್ಕು ವರೆಗೆ ನ್ಯಾಯಾಲಯ ” ಚಾರ್ಜ್ ಶೀಟ್ ಹಾಕಲು ಉಪಯೋಗಿಸಿದ ದಾಖಲೆಗಳು ಪೂರಕವಾಗಿಲ್ಲ .. ಐದು ಬಾರಿ ಬದಲಾದ ದೂರುದಾರ ಹೇಳಿಕೆಗಳು ಪರಸ್ಪರ ವೈರುಧ್ಯದಿಂದ ಕೂಡಿದೆ . ತಥಾ ಕಥಿತ ಲ್ಯಾಬ್ ರಿಪೋರ್ಟ್ ಗಳು ತಾಳೆ ಆಗದೆ , ಸರ್ಕಾರ ಹಾಗೂ ಸಾರ್ವಜನಿಕ ಸಂಸ್ಥೆಯೊಂದನ್ನು ಈ ಪ್ರಕರಣದಲ್ಲಿ ದುರುಪಯೋಗ ಪಡಿಸಿಕೊಂಡಿರುವುದು ಎದ್ದು ಕಾಣುತ್ತದೆ ” ಎಂದು ಅಭಿಪ್ರಾಯ ಪಡುತ್ತದೆ
ಅತ್ಯಂತ ವಿಸ್ತೃತವಾಗಿ ಚಾರ್ಜ್ ಶೀಟ್ ಹಾಗೂ ತಥಾ ಕಥಿತ ಎಫ್ ಎಸ್ ಎಲ್ ರಿಪೋರ್ಟ್ ನ್ನು ವಿಶ್ಲೇಷಿಸುವ ನ್ಯಾಯಾಲಯ , ಅದರ ಎಳೆ ಎಳೆಯನ್ನು ವಿವರಿಸಿ ಹೇಗೆ ಅಲ್ಲಿ ಷಡ್ಯಂತ್ರ ನಡೆಸಲಾಗಿದೆ ಎಂಬುದನ್ನು ವಿವರಿಸುತ್ತದೆ – ಪುಟ ಅರವತ್ತೊಂಬತ್ತರಲ್ಲಿ ಘನತೆವೆತ್ತ ನ್ಯಾಯಾಲಯ , ಈ ರಿಪೋರ್ಟ್ ಗಳನ್ನು ವಿಶ್ಲೇಷಿಸಿ , “ಒಬ್ಬ ಪುರುಷ ಮತ್ತು ಮಹಿಳೆಯ ನಡುವೆ ಸಂಪರ್ಕ ನಡೆದರೆ ಇರುವ ಯಾವುದೇ ಕುರುಹು ಕೂಡಾ ಈ ಪ್ರಕರಣದಲ್ಲಿ ಇಲ್ಲವೇ ಇಲ್ಲ “ಎಂದು ಸ್ಪಷ್ಟ ಅಭಿಪ್ರಾಯ ಪಡುತ್ತದೆ . ಆದರೆ , ಕುಹಕಿಗಳು ನ್ಯಾಯಾಲಯ ತನ್ನ ಆದೇಶದಲ್ಲಿ ಪ್ರಸ್ತಾಪಿಸಿದ ಈ ಅಂಶವನ್ನೇ ತಮ್ಮ ಮೂಗಿನ ನೇರಕ್ಕೆ ತಿರುಗಿಸಿಕೊಂಡು ಮತ್ತೊಮ್ಮೆ ಅಪ ಪ್ರಚಾರ ಆರಂಭಿಸಿದ್ದು
ಇರಲಿ – ಮುಂದುವರೆದ ನ್ಯಾಯಾಲಯ ಪುಟ ತೊಂಬತ್ತಾರು ಹಾಗೂ ತೊಂಬತ್ತೇಳರಲ್ಲಿ “ಈ ಪ್ರಕರಣ ಅತ್ಯಂತ ಸ್ಪಷ್ಟವಾಗಿ ಶ್ರೀ ಮಠ , ಶ್ರೀ ಗುರುಗಳ ವಿರುದ್ಧ ದುರುದ್ದೇಶದಿಂದ ದಾಖಲಿಸಲ್ಪಟ್ಟಿದ್ದು ಎಂಬುದು ನ್ಯಾಯಾಲಯಕ್ಕೆ ಮನವರಿಕೆ ಆಗಿದೆ” ಎನ್ನುವುದಲ್ಲದೆ ಈ ಪ್ರಕರಣದಲ್ಲಿ “ತನಿಖೆ ಹಾಗೂ ತನಿಖಾ ಸಂಸ್ಥೆ ಕೂಡ ದೂರುದಾರರ ಪರ ಪಾತ್ರ ವಹಿಸಿದೆ” ಎಂದು ಹೇಳುತ್ತದೆ . ಇವೆಲ್ಲವನ್ನೂ ಕೂಡ ಪರಿಗಣಿಸಿ ಪೂಜ್ಯರಾದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳನ್ನು ಈ ಪ್ರಕರಣ ಲ್ಲಿ ಶ್ರೀಗಳು ಸಂಪೂರ್ಣ ನಿರ್ದೋಷಿ ಗಳು ಎಂದು ಇಷ್ಟು ಸ್ಪಷ್ಟವಾಗಿ ಕೊಟ್ಟಂತಹ ತೀರ್ಪಿನಲ್ಲಿ , ಯಾವುದೇ ರೀತಿಯ ದೈಹಿಕ ಸಂಪರ್ಕ ದೂರುದಾರರು ಹಾಗು ಆಪಾದಿತರ ಮೇಲೆ ಇರಲಿಲ್ಲ ಎಂದಿದ್ದನ್ನೇ , ಅನೈತಿಕ ಸಂಪರ್ಕ ಇತ್ತು ಎಂದು ನ್ಯಾಯಾಲಯವೇ ಹೇಳಿದೆ ಎಂದು ಸಮಾಜವನ್ನೇ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದವರು ಕೆಲವರು .. ಈಗ ಅದೇ ರೀತಿ , ನ್ಯಾಯಾಲಯವನ್ನೂ ದಾರಿ ತಪ್ಪಿಸಲು ತನ್ಮೂಲಕ ಇನ್ನೊಂದು ರೀತಿಯಲ್ಲಿ ತಮ್ಮ ಸ್ವಾರ್ಥ ಸಾಧನೆ ಮಾಡಲು ಹೊರಟಿದ್ದ ಆ ‘ಕೆಲವು ವ್ಯಕ್ತಿ’ ಗಳಿಗೆ ನ್ಯಾಯಾಲಯದ ಈ ತೀರ್ಪು ಅತ್ಯಂತ ಸ್ಪಷ್ಟವಾದ ಉತ್ತರವನ್ನು ಕೊಟ್ಟಿದೆ
ಅತ್ಯಂತ ಸೂಕ್ತ ಸಂದರ್ಭದಲ್ಲಿ , ಸೂಕ್ತ ರೀತಿಯಲ್ಲಿ , ಸೂಕ್ತ ಪ್ರದೇಶದಿಂದ ಬಂದ ನ್ಯಾಯಾಲಯದ ತೀರ್ಪು , ಮತ್ತೊಮ್ಮೆ ಸತ್ಯ ಮತ್ತು ನ್ಯಾಯ ವನ್ನು ಎತ್ತಿ ಹಿಡಿದಿರುವ ಕಾರಣದಿಂದ , ನಮ್ಮೆಲ್ಲರ ನಂಬಿಕೆ ಸತ್ಯ ಎಂದು ಒತ್ತಿ ಹೇಳಿದ ಕಾರಣದಿಂದ , ನಮ್ಮಡೇ , ನಮ್ಮ ಸಮಾಜದ್ದೇ ಆಗಿರುವ ನಮ್ಮ ಕುಲ ಪೀಠ ಹಾಗೂ ಕುಲ ಗುರುಗಳ ಮೇಲೆ ನಡೆಯುತ್ತಿರುವ ಷಡ್ಯಂತ್ರವನ್ನು ಮತ್ತೊಮ್ಮೆ ವಿಫಲ ಗೊಳಿಸಿದ ಕಾರಣಗಳಿಂದ ಸ್ವಾಗತಾರ್ಹ ಹಾಗೂ ಐತಿಹಾಸಿಕ . . ಇದು ನ್ಯಾಯಕ್ಕೆ ಅಂತಿಮ ಜಯ ಎನ್ನುವುದಕ್ಕೆ ಉದಾಹರಣೆ ಕೂಡ .. ಮಾತ್ರವಲ್ಲ , ನ್ಯಾಯಾಲಯದ ತೀರ್ಪಿನ ಹೆಸರಿನಲ್ಲಿ ಸಮಾಜವನ್ನೂ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದ ‘ಕೆಲವು ವ್ಯಕ್ತಿ’ ಗಳಿಗೆ ಒಂದು ಉತ್ತಮ ಪಾಠ ಕೂಡ ಹೌದು