ಮಾಲಿನಿಹೆಗಡೆ.
ಬೆಂಗಳೂರು.

FB IMG 1495555692902

ಪೀಯೂಸಿ (PUC )ಎರಡನೇ ವರ್ಷ ಓದುತ್ತಿರುವ ಪ್ರತಿಒಬ್ಬ ವಿದ್ಯಾರ್ಥಿಯ ಕನಸು (ಗಂಡುಮಕ್ಕಳಿಗೆಜಾಸ್ತಿ) ಐಐಟಿ ಸೇರಬೇಕುಅಂತಾನೆ ಇರುತ್ತೆ.ಇಂಜಿನಿಯರಿಂಗ್ಅಥವಾ ಟೆಕ್ನಿಕಲ್ನ ತುತ್ತತುದಿ ಅಂದರೆ, ಈಐಐಟಿ. (Indian Institute of Technology) ಆದರೆ ಅದು ಅಷ್ಟು ಸುಲಭವಲ್ಲ. ನಿಜವಾಗಿಯೂ ಕಬ್ಬಿಣದ ಕಡಲೆಯೇ ಸರಿ.

ದಿನಕ್ಕೆ ಏನಿಲ್ಲವೆಂದರೂ ೧೬ರಿಂದ೧೮ ಘಂಟೆಗಳ ಕಠಿಣ ಪರಿಶ್ರಮದ ಅವಶ್ಯಕತೆ ಇದೆ. ಇನ್ನೊಂದು ಅತಿಮುಖ್ಯ ಅಂದರೆ, ಆಸಮಯಕ್ಕೆ ಉತ್ತರ ಬರೆಯುವ ಜಾಣ್ಮೆ. ಬರೀ ಕನಸುಕಂಡರೆ ಸಾಕಾಗೋಲ್ಲ, ಅದಕ್ಕೆ ಸರಿ ಆದ ಪರಿಶ್ರಮದ ಅವಶ್ಯಕತೆ ಕೂಡಾ ಅಷ್ಟೇ ಮುಖ್ಯ.

ಇಲ್ಲಿ ನಾನು ಹೇಳಲು ಹೊರಟಿರುವುದು ಐಐಟಿ ಓದುವ ಮಕ್ಕಳಿಗಿಂತ ಅವರ ಪಾಲಕರಿಗೆ. ತಮ್ಮಮಕ್ಕಳು ಹುಟ್ಟಿರುವುದೇ ಐಐಟಿ ಸೇರಲು ಅಥವಾ ಐಐಟಿಗೆ ಸಿಗದಿದ್ದರೆ, ನೀನು ಏನು ಉಪಯೋಗ ಇಲ್ಲ ಅನ್ನುವ ಪಾಲಕರ ದೋರಣೆ ಮೊದಲು ಬದಲಾಗಬೇಕು.ಅವರ ಮೇಲೆ ಅತಿ ಒತ್ತಡ ಖಂಡಿತಾ ಹಾಕಬಾರದು, ಯಾಕೆಂದರೆ, ಐಐಟಿ ಸಿಗದ್ದಿದ್ದಮಾತ್ರಕ್ಕೆ ಜೀವನ ಏನು ಮುಗಿದುಹೋಗೋಲ್ಲ., ನಮಗೆ ಐಐಟಿಗಿಂತ ನಮ್ಮಮಕ್ಕಳು ಮುಖ್ಯ ಆಗಿರಬೇಕು.ಯಾಕೆಂದರೆ, ಐಐಟಿ ಇಲ್ಲದಿದ್ದರೂ ಬೇರೆ ಕೋರ್ಸ್ಗಳು ತುಂಬಾ ಇವೆ. ಆದರೆ ಒತ್ತಡತಾಳಲಾರದೆ ಮಕ್ಕಳುಆತ್ಮಹತ್ಯೆಗೆ ಶರಣಾದರೆ, ಅದಕ್ಕೆ ಪರ್ಯಾಯ ಇಲ್ಲ ಅಲ್ವ? ಅದಕ್ಕೆಪಾಲಕರೇ, ಮಕ್ಕಳಿಗೆಅತಿಯಾದ ಒತ್ತಡ ಹಾಕುವ ಮೊದಲು ತುಂಬಾ ಆಲೋಚಿಸಿ.

ಈಗಮೊದಲಿನ ಕಾಲದತರಹ ಇಲ್ಲ,ಪೀಯೂಸಿ ಎರಡನೇ ವರ್ಷ ಆದ ಮೇಲೆ ಬೇರೆ ಬೇಕಾದಷ್ಟು ಕೋರ್ಸ್ಗಳು ಇದೆ. ಇಂಜಿನಿಯರಿಂಗ್ಅನ್ನೇ ತೆಗೆದುಕೊಂಡರೂ, ಅದೆಷ್ಟುದಾರಿಗಳು!!!.

೧. KCET – ಅಂದರೆ ನಮ್ಮ ಕರ್ನಾಟಕ ರಾಜ್ಯ ನಡೆಸುವಇಂಜಿನಿಯರಿಂಗ್ಗೆ ಸೇರುವ ಪ್ರವೇಶಪರೀಕ್ಷೆ.
೨. ಕಾಮೆಡ್ಕೆ – ಇದು ಕೂಡ ನಮ್ಮಕರ್ನಾಟಕ ರಾಜ್ಯ ನಡೆಸುವ ಇಂಜಿನಿಯರಿಂಗ್ಗೆ ಸೇರುವ ಪ್ರವೇಶ ಪರೀಕ್ಷೆ.
೩. ಮಣಿಪಾಲ ಇನ್ಸ್ಟಿಟ್ಯೂಟ್ಆಪಟೆಕ್ನಾಲಜಿ ನಡೆಸುವ ಪ್ರವೇಶ ಪರೀಕ್ಷೆ.
೪. NIT – ಕೇಂದ್ರೀಯ ಮಟ್ಟದ ಪರೀಕ್ಷೆ. (ನಮ್ಮರಾಜ್ಯದ ಸುರತ್ಕಲ್ಕಾಲೇಜಿಗೆ ಸೇರಲು ಈಪರೀಕ್ಷೆ ತುಂಬಾ ಮುಖ್ಯ)
೫. VIT – ವೆಲ್ಲೂರು – ತಮಿಳ್ನಾಡು.
೬.SAT -ಹಣ ಚೆನ್ನಾಗಿ ಇರುವ ಪಾಲಕರ ಮಕ್ಕಳು ಈ ಪರೀಕ್ಷೆ ಬರೆಯಬಹುದು,ಯಾಕೆಂದರೆ, ಇದು ಫಾರಿನ್ದೇಶಗಳಿಗೆ ಹೋಗಿ ಓದಲು,ಬರೆಯುವ ಪರೀಕ್ಷೆ.
೭. ಐಐಟಿ
ಇದರ ಹೊರತಾಗಿಯೂ,ಇಸ್ರೋದವರು ನಡೆಸುವ ಪ್ರವೇಶಪರೀಕ್ಷೆ ಕೂಡಾಇದೆ.(ವಿಜ್ಞಾನಕ್ಕೆ )

RELATED ARTICLES  ಗುರುಸೇವೆ , ಸಮಾಜಸೇವೆಯಲ್ಲಿ ಮಾದರಿಯಾಗಿ ರಾಜಗೋಪಾಲ ಕೈಪ್ಪಂಗಳ.

Untitled 1 copy.jpgaaa
ಚಿತ್ರಕೃಪೆ :ಗೂಗಲ್

ಇಷ್ಟೊಂದು ದಾರಿಗಳು ಇರುವಾಗ ಐಐಟಿಸಿಗದಿದ್ದರೆ ಮಗುವನ್ನು ಹಿಂಸೆಮಾಡುವುದು ಎಷ್ಟು ಮಾತ್ರಕ್ಕೂ ಸರಿ ಅಲ್ಲ. ಬೇರೆಯವರ ಮಕ್ಕಳೊಡನೆ ಅವರನ್ನು ಹೋಲಿಸಬೇಡಿ, ಅವನು ಕೋಚಿಂಗ್ತೆಗೆದುಕೊಳ್ಳದೆ ನಿನಗಿಂತ ಚೆನ್ನಾಗಿ ಮಾರ್ಕ್ಸ್ತೆಗೆದ ಅನ್ನುವುದು ಎಲ್ಲಾ ಹೇಳಲೇಬೇಡಿ, ಪಾಲಕರ ಚುಚ್ಚು ಮಾತು ಅವರನ್ನು ಸಾವಿನತ್ತದೂಡುವ ಎಲ್ಲಾಸಾಧ್ಯತೆ ಇದೆ, ಅಥವಾ ಮಗು ತಾನುಯಾವುದಕ್ಕೂ ಉಪಯೋಗವಿಲ್ಲ ಅಂತ ತಿಳಿದು, ಮಾನಸಿಕವಾಗಿ ಕುಗ್ಗಿ ಕಣ್ಣು ಮುಂದೆ ಇರುವ ಉಳಿದ ಸಾವಿರಾರು ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

Untitled 1 copy
ಚಿತ್ರಕೃಪೆ :ಗೂಗಲ್

ಐಐಟಿಯೇ ತಮ್ಮ ಗುರಿ ಅಂತ ಎಲ್ಲರು ತಿಳಿದಿದ್ದರೆ, ನಾವು ಅದೆಷ್ಟೋ ವಿಜ್ಞಾನಿಗಳನ್ನು ನೋಡುತ್ತಲೇ ಇರಲಿಲ್ಲ. ಎಲ್ಲಾಕೋರ್ಸ್ಗು, ಎಲ್ಲ ಫೀಲ್ಡ್ಗೂತನ್ನದೇ ಆದ ಗೌರವ, ಮಹತ್ವ ಎಲ್ಲಾ ಇದೆ. ಯಾವುದು ಕಡಿಮೆ ಅಲ್ಲ. ಇವತ್ತು ಅದೆಷ್ಟೋ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರಾದ್ಯಾಪಕರು ಇಲ್ಲದೆ ತೊಂದರೆಪಡುತ್ತಾ ಇದ್ದಾರೆ ಅಂದರೆ ಅದಕ್ಕೆ ಕಾರಣ, ಎಲ್ಲಾ ಪಾಲಕರು ತಮ್ಮ ಮಗ ಕೇವಲ ಇಂಜಿನಿಯ/ಡಾಕ್ಟರ್ಆಗಬೇಕು ಅಂತ ಬಯಸಿದ್ದೆ ಅನ್ನುವುದರಲ್ಲಿಯಾವಸಂಶಯವೂಇಲ್ಲ. ಪಿಯುಸಿ ನಂತರಃ Bsc ಅಥವಾ Msc ಓದುವ ಮಕ್ಕಳ ಸಂಖ್ಯೆ ಕಡಿಮೆ ಆಗಿದ್ದೆ ಈ ಕೊರತೆಗೆ ಕಾರಣ. ಒಹೋ Bsc ಓದುತ್ತಾ ಇದ್ದಾನ?ಅಂದರೆ, ಪಾಲಕರಿಗೆನಾಚಿಕೆ. ಆದರೆ ಅದೇ BSc ,Msc ಓದಿದ ಶಿಕ್ಷಕರೇತಮ್ಮ ಮಕ್ಕಳಿಗೆ ಪಾಠ ಹೇಳಿದವರು ಅನ್ನುವ ಸತ್ಯವನ್ನುಎಲ್ಲಾಪಾಲಕರುಒಪ್ಪಲೇಬೇಕು. ಶಿಕ್ಷಕರಪಾತ್ರಜೀವನದಲ್ಲಿತುಂಬಾಮುಖ್ಯ.

RELATED ARTICLES  'ನೀನು' ಯಾರು ತಿಳಿದುಕೊ! ( ಸದ್ಗುರು ಶ್ರೀಧರ ಸಂದೇಶ)

ಇಲ್ಲಿ ನನ್ನ ಮಗನ ಉದಾಹರಣೆಯನ್ನೇ ಕೊಡುತ್ತೇನೆ.

ಅವನು ಅದೆಷ್ಟು ಪ್ರವೇಶ ಪರೀಕ್ಷೆ ಇದೆಯೋ ಅದೆಲ್ಲವನ್ನುಬರೆದಿದ್ದ. ಚೆನ್ನಾಗಿಯೂ ಮಾಡಿದ್ದ. ಸೋತಿದ್ದು ಐಐಟಿ ಅಂತಿಮ ಪರೀಕ್ಷೆಯಲ್ಲಿ ಮಾತ್ರ. ಅದುಕೇವಲ ೧೦ ಅಂಕಗಳಲ್ಲಿ. ಮನೆಗೆ ಬಂದು ಹೇಳಿದ, ಅಮ್ಮ, ಐಐಟಿ ಆಗಲೇ ಇಲ್ಲ ಅಂದ. ನಾನು ಅವನನ್ನುಅಪ್ಪಿಕೊಂಡು ಮೊದಲು ಹೇಳಿದ್ದು ಏನು ಗೊತ್ತಾ? ಮಗನೆ ಐಐಟಿ ಮಾತ್ರ ಜೀವನಅಲ್ಲ. ನಿನ್ನ ಮುಂದೆ ಬೇರೆ ಎಷ್ಟೋ ದಾರಿಗಳಿವೆ. ಅದರಲ್ಲಿ ಒಂದನ್ನು ಆಯ್ಕೆ ಮಾಡ್ಕೋ. ನೀನೊಬ್ಬ ಪ್ರತಿಭಾವಂತ ಇಂಜಿನಿಯರ್ಆಗಿಯೇಆಗುತ್ತೀಯ ಅಂದೇ. ಆ ಕ್ಷಣ ಅವನ ಮುಖದಲ್ಲಿ ಕಂಡತೃಪ್ತಿಯನ್ನು ನಾನು ಎಂದೂ ಮರೆಯಲು ಸಾಧ್ಯಇಲ್ಲ. ಬಹುಷಃ ನಾನು ಕೂಡಾ ಎಲ್ಲಾ ಅಮ್ಮಂದಿರಂತೆ ಅವನನ್ನು ಹೀಯಾಳಿಸಿದರೆ, ಐಐಟಿ ಜೊತೆಯಲ್ಲಿ ನಾನು ಮಗನನ್ನು ಕೂಡ ಕಳೆದುಕೊಳ್ಳಬೇಕಿತ್ತು.

ಅದಕ್ಕೆಹೇಳಿದ್ದು, ಮಕ್ಕಳೇ, ಐಐಟಿ ಮಾತ್ರ ಜೀವನ ಅಲ್ಲ. ಅಥವಾ ಜೀವನದಕೊನೆ ಅಲ್ಲ. ಅದು ಸಿಗದೇ ಇದ್ದರೂ, ಬೇರೆ ಜೀವನ ಇದೆ. ಒಳ್ಳೆಯ ಮಾರ್ಗ ಆರಿಸಿಕೊಂಡು ಚೆನ್ನಾಗಿ ಓದಿ ಒಬ್ಬ ಉತ್ತಮ ಪ್ರಜೆ ಆಗಿ.