ನಿರ್ಮಲಾ ಹಿರೇಮಠ
ಬಾಗಲಕೋಟೆ
ಇಂದಿನ ಯುವಕರೆ ನಾಳಿನ ಸತ್ಪ್ರಜೆಗಳು ಎಂಬಂತೆ ಸ್ವಾಮಿ ವಿವೇಕಾನಂದರು ಯುವಶಕ್ತಿಯ ಮೇಲೆ ಅಗಾಧ ನಂಬಿಕೆ ಇಟ್ಟಿದ್ದರು. ಉಕ್ಕಿನ ನರಮಂಡಲ ಕಬ್ಬಿಣದಂತಹ ಮಾಂಸಖಂಡಗಳನ್ನು ಹೊಂದಿದಂತಹ ಯುವಕರು ಹಾಗೆ ಮನಸ್ಸಿನಲ್ಲಿ ದೃಢವಾದ ಆತ್ಮವಿಶ್ವಾಸ ನಂಬಿಕೆ ಹಾಗೂ ದೇಶಾಭಿಮಾನ ಭಾಷಾಭಿಮಾನ ಹೊಂದಿದ ಸಮರ್ಥ ಯುವಕರು ದೇಶಕ್ಕೆ ಬೇಕಾಗಿದೆ.
ಮೊದಲು ತಾಯಿ ಹಾಲು ಕುಡಿದು ಲಲ್ಲೆಯಿಂದ ತೊದಲು ನುಡಿದು ಕೆಳೆಯರೊಡನೆ ಬೆಳೆದು ಬಂದ ಮಾತದಾವುದು ನಲ್ಲೆಯೊಲವ ತೆರೆದು ತಂದ ಮಾತದಾವುದು ಎಂಬ ಬಿ ಎಂ ಶ್ರೀ ರವರ ಕಾಣಿಕೆ ಪದ್ಯದಲ್ಲಿರುವಂತೆ ನಮ್ಮ ಹುಟ್ಟು ಬೆಳೆದ ರೀತಿ ಉಸಿರಾಡುವ ಗಾಳಿ ಎಲ್ಲವೂ ಕನ್ನಡದ ಕೊಡುಗೆಯಾಗಿರುವಾಗ ಆ ಕನ್ನಡಾಂಬೆಯ ಮಕ್ಕಳಾಗಿ ಆ ತಾಯಿಗೆ ನಾವು ಕೊಡುತಿರುವ ಕಾಣಿಕೆ ಏನು? ಎಂದು ಕೊಂಚ ಯೋಚಿಸೋಣ.
ಯುವಕರಲ್ಲಿ ಕನ್ನಡಾಭಿಮಾನದ ಕೊರತೆ ಕಂಡುಬರುತ್ತಿದೆ.ಕಾರಣಗಳು ಹಲವಾರು ಅವುಗಳು ಹೀಗಿವೆ.
೧.ಬೇರೆ ಭಾಷೆಯ ಕಡೆಗಿನ ಒಲವು.ಮನೆಯಲ್ಲಿ ಪಾಲಕರು ಮೊದಲು ಬೇರೆ ಭಾಷೆಯ ಚಾನೆಲ್ಗಳನ್ನು ನೋಡುವುದನ್ನ ಬಿಡಬೇಕು.ಹಾಗೂ ನಮ್ಮ ಭಾಷೆಯ ಬಗಗೆ ಕುತೂಹಲ ಕೆರಳಿಸುವ ಕಥೆಗಳನ್ನು ಸಾಹಿತ್ಯಾಸಕ್ತಿಯನ್ನು ಬೆಳೆಸಬೇಕು.
೨. ಕನ್ನಡಿಗರ ವಿಶಾಲ ಮನೋಭಾವ ಕನ್ನಡಾಭಿಮಾನವನ್ನು ಕುಗ್ಗಿಸುವ ಕೆಲಸದಲ್ಲಿ ಸಣ್ಣಕೆಲಸ ಮಾಡುತ್ತಿದೆ.ಹೇಗೆಂದರೆ ಯುವಪೀಳಿಗೆ ಆಧುನಿಕತೆಗೆ ತಕ್ಕಂತೆ ತನ್ನ ಮನೋಭಾವನೆಯನ್ನು ಬದಲಾಯಿಸಿಕೊಳ್ಳುತ್ತಾ ಸಾಗಿದೆ.ಈ ಆಧುನಿಕತೆಯು ಯುವಕರನ್ನು ಬೇರೆ ಭಾಷೆಯ ಕಡೆಗೆ ವಾಲುವಂತೆ ಮಾಡುತ್ತಿದೆ.
೩.ಬೇರೆ ಭಾಷಿಕರು ಬಂದಾಗ ನಮ್ಮವರು ನಮ್ಮ ಭಾಷೆ ಬಿಟ್ಟು ಅವರ ಭಾಷೆಯಲ್ಲಿ ಸಂವಹನ ನೆಡೆಸುವುದು ಅವಮಾನಕರವಾದ ಸಂಗತಿ.ನಾವು ಬೇರೆ ಪ್ರದೇಶಗಳಿಗೆ ಹೋದಾಗ ಅವರ ಭಾಷೆಯಲ್ಲಿ ಮಾತಾಡಿ ನಮ್ಮ ಕೆಲಸ ಮುಗಿಸಿಕೊಂಡು ಬರುತ್ತೇವೆ.ಆದರೆ ಬೇರೆ ಭಾಷಿಕರು ಸ್ವಲ್ಪವೂ ಕನ್ನಡ ಮಾತಾಡಲು ಪ್ರಯತ್ನಿಸುವುದಿಲ್ಲ.
೫. ಅನ್ಯ ಭಾಷಿಯರು ತಮ್ಮ ತಮ್ಮ ಮನೆಯಲ್ಲಿ ತಮ್ಮ ಮಾತೃ ಭಾಷೆಯ ಚಾನೆಲ್ಗಳನ್ನೆ ನೋಡುತ್ತಾರೆ.ಅಪ್ಪಿತಪ್ಪಿಯೂ ಕನ್ನಡ ಅಥವಾ ಬೇರೆ ಭಾಷೆಗಳನ್ನು ನೋಡುವುದಿಲ್ಲ.ಇದು ಮನೆಯ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.ಹಾಗೆ ತಮ್ಮ ತಾಯಿ ಭಾಷೆಯ ಬಗ್ಗೆ ಅಭಿಮಾನ ಮೂಡುತ್ತದೆ.
ಈ ರೀತಿಯಾಗಿ ಯುವ ಪೀಳಿಗೆಯಲ್ಲಿ ಕನ್ನಡಾಭಿಮಾನದ ಕೊರತೆ ಉಂಟಾಗುವಲ್ಲಿ ಕುಟುಂಬವು ಪ್ರಮುಖ ಪಾತ್ರ ವಹಿಸುತ್ತದೆ.ಇದನ್ನರಿತು ಮನೆಯ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಎಂಬಂತೆ ಕನ್ನಡಾಭಿಮಾನ ಮೂಡಿಸುವಲ್ಲಿ ಕುಟುಂಬ ಕರ್ತವ್ಯ ನಿರ್ವಹಿಸಬೇಕು ಇದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ.