ಕಾರವಾರ : ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಮಟ್ಟದ ಟೆನಿಕ್ವಾನಿಟ್ ಸ್ಪರ್ಧೆಗೆ ಮಹಾಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 30ರಂದು ಸಿದ್ದಾಪುರದಲ್ಲಿ ನಡೆದಿದ್ದ ರಾಜ್ಯ ಮಟ್ಟದ ಟೆನಿಕ್ವಾಯಿಟ್ ಪಂದ್ಯಾವಳಿಯಲ್ಲಿ ಮಹಾಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ದ್ವೀತಿಯ ಸ್ಥಾನ ಪಡೆದಿದ್ದರು. ಈ ದಾಖಲೆಯೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ಪರಶುರಾಮ ಎಸ್ ನಾಯ್ಕ, ಲಿಯಾ ರೆಬೆಲೊ ಮತ್ತು ಸಂದೇಶ ಎನ್ ಗುನಗಿ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದೆ. ಕ್ರೀಡಾಪಟುಗಳಿಗೆ ತರಬೇತಿ ನೀಡಿ ಪ್ರೋತ್ಸಾಹಿಸಿದ ವೈ.ಬಿ ಚಿಲಕಂಡಿ ಕಾರ್ಯಕ್ಕೆ ಆಡಳಿತ ಮಂಡಳಿ ಮೆಚ್ಚುಗೆ ಸೂಚಿಸಿದೆ.

RELATED ARTICLES  'ಸಣ್ಣ'ವರ 'ದೊಡ್ಡ'ಕೆಲಸ!