✍ಉಮೇಶ ಮುಂಡಳ್ಳಿ ಭಟ್ಕಳ

ಬನ್ನಿ ಯಾರಾದರೂ
ಎತ್ತಿಕೊಳ್ಳಿ
ಶಿಲ್ಪವಾಗಿಸಿ
ಕಪ್ಪು ಕಲ್ಲಿನಂತೆ ನಾನೂ
ಗರ್ಭಗುಡಿಯ ಸೇರಬೇಕು
ಶಿಲ್ಪವಾಗಬೇಕು.

ದೂಪ ದೀಪ
ನೈವೇದ್ಯ ಹೂವು
ಎಲ್ಲದರಿಂದಲೂ ನಾನು
ಸಿಂಗಾರಗೊಳ್ಳಬೇಕು

RELATED ARTICLES  ಪ್ರಪಂಚ ಮತ್ತು ಪರಮಾರ್ಥದ ಎರಡೂ ಸಿಹಿ ಜೊತೆಗೂಡಿಸುವ ಶ್ರೀಸಮರ್ಥ ಸಂಪ್ರದಾಯ ಜಗತ್ತಿಗೇ ಆದರಣೀಯವಾಗಿದೆ.

ಮಂತ್ರ ಘೋಷ
ಗಂಟೆ ಜಾಗಟೆ
ವಾದ್ಯ ವೃಂದದ ನಡುವೆ
ಪ್ರಸನ್ನಳಾಗಬೇಕು
ಆಕಾರ ಕೊಡಿ ನನಗೆ
ನಾ ಶಿಲ್ಪವಾಗಬೇಕು

ಮಣ್ಣೊಳಗೆ ಮಣ್ಣಾಗಿ
ಸೇರಲಾರೆ ನಾನು
ಸೂರಿಗೆ ಹೊರೆಯಾಗಿ
ಬದುಕಲಾರೆ ನಾನು
ಆಕಾರ ಕೊಡಿ ನನಗೆ
ನಾನೂ ಶಿಲ್ಪವಾಗಬೇಕು
ಗರ್ಭಗುಡಿಯ ಸೇರಬೇಕು.

RELATED ARTICLES  ಕಾಲನ ಅಣತಿಯ ಬಗ್ಗೆ ಶ್ರೀಧರರ ನುಡಿಗಳು ಇವು.