ಚಾತುರ್ಮಾಸದಲ್ಲಿ ಹಬ್ಬ ಹರಿದಿನಗಳು ಒಂದರ ಹಿಂದೊಂದು ಬಂದೇ ಬರುತ್ತಿದ್ದವು. ಆದರೆ ಮಾರ್ಗಶಿರ ಮಾಸದಲ್ಲಿ ಅವುಗಳ ಬಾಹುಳ್ಯ ಪರಿಮಿತ ಸಂಖ್ಯೆಗೆ ಇಳಿದಿರುವುದು. ಅದರಲ್ಲಿ ಶುಕ್ಲಪಕ್ಷದ ಷಷ್ಠಿಯು ಸುಬ್ರಮಣ್ಯ ಷಷ್ಠಿ, ಚಂಪಾಷಷ್ಠಿ ಎಂಬ ಹೆಸರಿನಿಂದ ನಾಡಿಗರೆಲ್ಲರಿಗೆ ಚಿರಪರಿಚಿತ.

ಸುಬ್ರಮಣ್ಯ ದಕ್ಷಿಣ ಭಾರತದ ಬಹುಜನಪ್ರಿಯ ದೇವ, ಶರಣವಭವ. ಕುಮಾರ ಸ್ವಾಮಿಯ ಆರಾಧನೆ ತಮಿಳುನಾಡಿನಲ್ಲಿ, ಇದರ ಪ್ರಭಾವದಿಂದ ನೆರೆಯ ಕನ್ನಡ ನಾಡಿನಲ್ಲೂ, ವಿಶೇಷವಾಗಿ ತುಳುನಾಡಿನಲ್ಲೂ ನಡೆಯುತ್ತಿದೆ.

ಹಲವು ರೀತಿ ರಿವಾಜುಗಳಲ್ಲಿ, ನೇಮ ನಿಷ್ಠೆಗಳಲ್ಲಿ ವೈವಿಧ್ಯಮಯವಾಗಿ ನಡೆಯುವ ಸ್ಕಂದನ ಉಪಾಸನೆ ದಿನೇ ದಿನೇ ಹೆಚ್ಚುತ್ತಿದೆ.

ನಾಗಾರಾಧನೆಯ ಹಂದರದಲ್ಲಿ ಸುಬ್ರಾಯನೂ ಸೇರಿಕೊಳ್ಳುತ್ತಾನೆ. ಸುಬ್ರಮಣ್ಯ ಇಷ್ಟು ಜನಪ್ರಿಯನಾಗಲು ಕಾರಣ ಅವನ ಜಾನಪದ ನೆಲೆ. ಮುರುಗ ಶಾಸ್ತ್ರಗಳಲ್ಲಿ ಅಥವಾ ಆಗಮಗಳಲ್ಲಿ ಮೊದಲು ತೋರಿಕೊಂಡು ಅನಂತರ ಜನರ ನಡುವೆ ಬಳಕೆಗೆ ಬಂದವನಲ್ಲ. ಜನರ ನಡುವೆಯೂ ಮೊದಲು ತೋರಿಕೊಂಡು ಅನಂತರ ಆಗಮದ ಅಟ್ಟಕ್ಕೇರಿದವನು.
ಬೆಟ್ಟಗುಡ್ಡಗಳಲ್ಲಿ ಅಡ್ಡಾಡುವ ಕಾಡು ಜನರ ದೈವವಾದ್ದರಿಂದ ಅವನ ಕ್ಷೇತ್ರಗಳು ಬಹುಮಟ್ಟಿಗೆ ಆ ಪ್ರದೇಶಗಳೇ ಆಗಿರುತ್ತವೆ. ಅವನೇನೂ ಮೋಕ್ಷ ನೀಡುವ ದೇವತೆಯೂ ಅಲ್ಲ. ಬದುಕಿನ ಗೆಲುವನ್ನು, ಸುಖವನ್ನು ಒದಗಿಸುವುದು ಅವನ ವೈಶಿಷ್ಟ್ಯ. ಜನರಿಗೆ ಬೇನೆ, ಬಂಜೆತನ, ಬಾಲಗ್ರಹ ಮೊದಲಾದ ತೊಂದರೆಗಳಿಗಂತೂ ಈ ದೇವರಿಗೆ ಕಟ್ಟಿಕೊಂಡ ಹರಕೆ ಗಟ್ಟಿಯಾದ ಫಲ ಕೊಡುತ್ತದೆ. ಹರೋಹರ ಎಂದು ಕೂಗುತ್ತಾ ಕಾವಡಿ ಹೊರುವುದು ತುಂಬಾ ಹಳೆಯ ಪದ್ಧತಿ. ಪರಮ ಪಾವನನಾದ ಷಣ್ಮುಖಸ್ವಾಮಿಯ ಅವತಾರ, ಸ್ವರೂಪ ಮತ್ತು ಲೀಲೆಗಳ ಆಂತರಿಕ ತತ್ವವು ಪ್ರಣವತತ್ವವೇ ಆಗಿರುವುದರಿಂದ ಈ ದೇವ ತನ್ನ ತಂದೆಯಾದ ಶಿವನಿಗೂ ಗುರುವಾಗಿ ಸ್ವಾಮಿನಾಥನೆಂದು ಪ್ರಸಿದ್ಧಿ ಹೊಂದಿದ್ದಾನೆ.

RELATED ARTICLES  ಸೆ.15 ರಂದು ಕಿತ್ತೂರಿನ ಆಟೋ ರಿಕ್ಷಾ, ಹಾಗೂ ಗೂಡ್ಸ್ ರಿಕ್ಷಾ ಚಾಲಕ ಮತ್ತು ಮಾಲಕರಿಗೆ, ಉಚಿತ ಪಾಸಿಂಗ್ ಯೋಜನೆ ಹಾಗೂ ಔತಣಕೂಟ, ಸಮವಸ್ತ್ರ ಮತ್ತು ಪ್ರಿಂಟಿಂಗ್ ಹುಡ್ ವಿತರಣಾ ಕಾರ್ಯಕ್ರಮ.

ನಾಗನಿಗೆ ಪಂಚಮಿಯಾದರೆ, ಸುಬ್ರಮಣ್ಯನಿಗೆ ಷಷ್ಠಿ. ಬ್ರಹ್ಮ ಮಾನಸ ಪುತ್ರಿಯರಲ್ಲಿ ಷಷ್ಠಿ ಒಬ್ಬಳು. ಬ್ರಹ್ಮವೈವರ್ತ ಪುರಾಣದ ಪ್ರಕೃತಿ ಖಂಡದಲ್ಲಿ ಈ ದೇವತೆಯನ್ನು ಸೂತಿಕಾಗೃಹದಲ್ಲಿ ಮಗುಹುಟ್ಟಿದ ಆರನೇ ದಿನದಂದು ಪೂಜಿಸಬೇಕೆಂಬ ವಿಧಿಯಿದೆ. ಆರನೇ ದಿನ ತಾಯಿಗೂ ಮಗುವಿಗೂ ಪೀಡೆ ಕಳೆಯಿತೆಂದು ಕೃತಜ್ಞತೆಯಿಂದ ಪೂಜಿಸಬೇಕು.
ಆ ಕಾರಣ ಮಾರ್ಗಶಿರ ಮಾಸದ ಷಷ್ಠಿಯಂದು ಸ್ಕಂದನ ಪ್ರತಿನಿಧಿಯಂತಿರುವ ಸುಬ್ರಮಣ್ಯನನ್ನು ವಟು ಅಧಿಷ್ಠಾನದಲ್ಲಿ ಆರಾಧಿಸಬೇಕು. ಇದರಿಂದ ಷಷ್ಠಿ ದೇವತೆಗೆ ಪ್ರೀತಿಯುಂಟಾಗಿ ಮನೆಯ ಮಕ್ಕಳನ್ನು ಕಾಪಾಡುವಳು ಎಂದು ನಂಬುಗೆ.

RELATED ARTICLES  ನಾನು ನಾನು ಎನ್ನದಿರು

ದುಷ್ಟ ತಾರಕನ ಸಂಹಾರಕ್ಕಾಗಿ ದೇವತೆಗಳು ಶಿವ ಹಾಗೂ ಆತನಿಗಾಗಿ ತಪಸ್ಸು ಮಾಡುತ್ತಿದ್ದ ಪಾರ್ವತಿಯರನ್ನು ಸಂಗಮಕ್ಕಾಗಿ ಪ್ರಯತ್ನಪಟ್ಟ ಫಲವಾಗಿ ಕಾಮನೇ ಶಿವನಿಂದ ಜಾರಿದ ತೇಜಸ್ಸಿನಿಂದ ಸೃಷ್ಟಿಗೊಂಡವನೇ ಸ್ಕಂದ.

ಶಿವನ ತೇಜಸ್ಸನ್ನು ಹೆಚ್ಚುಕಾಲ ತನ್ನ ಕೈಯಲ್ಲಿಟ್ಟುಕೊಳ್ಳಲು ಸಾಧ್ಯವಾಗದೇ ಹೋದುದರಿಂದ ಅವನು ಅದನ್ನು ಗಂಗೆಯಲ್ಲಿ ಇಟ್ಟನಂತೆ. ಈ ಕಾರಣದಿಂದ ಸುಬ್ರಮಣ್ಯನು (ಭೀಷ್ಮರಂತೆ) ಗಾಂಗೇಯ ಎನಿಸಿಕೊಂಡ. ಶಿವನ ತೇಜಸ್ಸನ್ನು ಹೊರಲು ಗಂಗೆಗೂ ಸಾಧ್ಯವಾಗದಿದ್ದರಿಂದ ಆಕೆ ಅದನ್ನು ನೊಜೆ ಹುಲ್ಲಿನ ಮೇಲಿಟ್ಟಳು. ಅ ಹುಲ್ಲಿಗೆ ಸಂಸ್ಕೃತದಲ್ಲಿ ಶರವಣವೆಂಬ ಹೆಸರಿದೆ. ಶಿವನ ತೇಜಸ್ಸು ಹುಲ್ಲಿನಲ್ಲಿ ಶಿಶುರೂಪ ತಾಳಿದುದರಿಂದ ಸುಬ್ರಮಣ್ಯನು ಶರವಣಭವ ಎನಿಸಿಕೊಂಡನು. ಜೋತಿಷ್ಯ ಶಾಸ್ತ್ರದ ಪ್ರಕಾರ, ಕುಜನ ಶಾಂತಿಗೆ ಸುಬ್ರಮಣ್ಯನ ಆರಾಧನೆ ಪರಿಣಾಮಕಾರಿ.