ಶಿರಸಿ- ಚಂದ್ರಶೇಖರ ಪಾಟೀಲ್ ಅವರ ಕನ್ನಡ ಸಾಹಿತ್ಯ ಸಮ್ಮೇಳನದ ಹೇಳಿಕೆಗಳು ಸಾಹಿತ್ಯ ವೇದಿಕೆಗೆ ಗೌರವ ತರುವಂತಹದ್ದಲ್ಲ. ಇದೊಂದು ಕಾಂಗ್ರೆಸ್ ಚಮಚಾಗಿರಿ ಮಾತಾಗಿದೆ. ಚಂಪಾ ಅವರ ರಾಜಕೀಯ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನವರು ಖಂಡಿಸಬೇಕು. ಅವರಿಗೆ ರಾಜಕೀಯ ಬೇಕಿದ್ದರೆ ನೇರವಾಗಿ ಯಾವುದಾರು ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಲಿ. ಅದನ್ನು ಬಿಟ್ಟು ಕಾಂಗ್ರೆಸ್ ಚಮಚಾಗಿರಿ ಮಾಡುವುದು ಸರಿಯಲ್ಲ ಎಂದು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿ ಕಾರಿದರು.

RELATED ARTICLES  ಹಾಲು ಹಬ್ಬದ ಆಹ್ವಾನ.

ಅವರು ಶಿರಸಿಯಲ್ಲಿ ಜರುಗಿದ ಭಾರತೀಯ ಜನತಾ ಪಕ್ಷದ ಉತ್ತರ ಕನ್ನಡ ಕಾರ್ಯಕಾರಿಣಿ ಉದ್ಘಾಟಿಸಿ ಮತನಾಡಿದರು.