Home Special News ಸೌಂದರ್ಯದ ಖನಿಯಾದ ಈ ದ್ವೀಪಕ್ಕೆ ಮಹಿಳೆಯರಿಗೆ ಮಾತ್ರ ಪ್ರವೇಶವೇ ಇಲ್ಲ.!

ಸೌಂದರ್ಯದ ಖನಿಯಾದ ಈ ದ್ವೀಪಕ್ಕೆ ಮಹಿಳೆಯರಿಗೆ ಮಾತ್ರ ಪ್ರವೇಶವೇ ಇಲ್ಲ.!

ಜಪಾನ್‌ ಒಂದು ಸುಂದರವಾದ ದೇಶವಾಗಿದೆ. ಇಲ್ಲಿ ಒಂದು ಹಳೆಯ ದ್ವೀಪವಿದೆ. ಅಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಓಕಿನೊಮಿಶೊ ಹೆಸರಿನ ಈ ಐಲ್ಯಾಂಡ್‌ 240 ಎಕರೆ ಪ್ರದೇಶದಲ್ಲಿ ಹರಡಿದೆ. ಈ ದ್ವೀಪದಲ್ಲಿ ಸಮುದ್ರ ದೇವಿಯ ಒಂದು ಮಂದಿರವಿದೆ. ಈ ಮಂದಿರದ ಇತಿಹಾಸ 2000 ವರ್ಷ ಹಳೆಯದಾಗಿದೆ. ಈ ಮಂದಿರದಲ್ಲಿ ಒಬ್ಬ ಪೂಜಾರಿ ಇದ್ದಾರೆ, ಪೂರ್ತಿ ಐಲ್ಯಾಂಡ್‌ನಲ್ಲಿ ಅವರು ಮಾತ್ರ ವಾಸಿಸುತ್ತಾರೆ.


ಇಲ್ಲಿ ಮಹಿಳೆಯರಿಗೆ ಯಾಕೆ ಪ್ರವೇಶವಿಲ್ಲ?

ಈ ಮಂದಿರದ ಪಂಡಿತರು ಹೇಳುವಂತೆ ನಾಲ್ಕರಿಂದ ಒಂಭತ್ತನೆ ಶತಮಾನದವರೆಗೆ ಇಲ್ಲಿ ಕೊರಿಯನ್‌ ಮತ್ತು ಚೀನಾದ ನಡುವೆ ವ್ಯಾಪಾರ ನಡೆಯುತ್ತಿತ್ತು. ಆ ಸಮಯದಿಂದ ಇಲ್ಲಿ ಹಡುಗುಗಳಿಗೆ ಪೂಜೆ ಮಾಡಲಾಗುತ್ತಿತ್ತು.

ಮಂದಿರದ ಹಳೆಯ ಪರಂಪರೆಯ ಅನುಸಾರ ಮಹಿಳೆಯರ ಸುರಕ್ಷತೆಗಾಗಿ ಇಲ್ಲಿ ಅವರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಇದೆ ಪರಂಪರೆ ಮುಂದುವರೆದು ಇಂದಿಗೂ ಸಹ ಈ ದ್ವೀಪಕ್ಕೆ ಯಾವುದೆ ಮಹಿಳೆಯರಿಗೆ ಪ್ರವೇಶವಿಲ್ಲ.

ಈ ಮಂದಿರಕ್ಕೆ ವರ್ಷದಲ್ಲಿ ಒಂದು ಬಾರಿ ಅಂದರೆ 27 ಮೇಯಂದು ಮಾತ್ರ ಪ್ರವೇಶ ಮಾಡಲು ಅವಕಾಶವಿದೆ. ಆದರೆ ಆ ಸಮಯದಲ್ಲಿ ಕೇವಲ ಪುರುಷರು ಮಾತ್ರ ಪ್ರವೇಶ ಮಾಡಬಹುದು. ಅವರು ಸಹ ಮಂದಿರಕ್ಕೆ ಪ್ರವೇಶ ಮಾಡುವ ಮುನ್ನ ಶುದ್ಧವಾಗಬೇಕು. ಇದಕ್ಕಾಗಿ ಅವರು ಸಮುದ್ರ ಸ್ನಾನ ಮಾಡಿ ಬರಬೇಕು.

ಇಲ್ಲಿನ ಪಂಡಿತರ ಪ್ರಕಾರ 1904 -05 ರಲ್ಲಿ ರಷ್ಯಾದ ಯುದ್ಧದ ಸಮಯದಲ್ಲಿ ಜಪಾನಿನ ಸೈನಿಕರ ಹಡಗು ಇಲ್ಲಿ ಮುಳುಗಿ, ಹಲವಾರು ಸೈನಿಕರು ಸಾವನ್ನಪ್ಪಿದ್ದರು. ಇವರ ನೆನಪು ಮತ್ತು ಗೌರವಕ್ಕಾಗಿ ಈ ಮಂದಿರಲ್ಲಿ ಮೇ 27ರಂದು ಸಮಾರಂಭವನ್ನು ಆಯೋಜಿಸಲಾಗುತ್ತದೆ.